Quantcast

ಚಿಲ್ಲರೆ ಅಗುಳುಗಳು ಮತ್ತು ಅವ್ವ 

k p lakshman

ಲಕ್ಷ್ಮಣ್ ಕೆ ಪಿ 

ನಾನು
ಕತ್ತಲೆಯ ಸುಖ ನುಂಗಿಕೊಂಡ ಊರುಗಳಲ್ಲಿ
handsಬಣ್ಣ ಬಣ್ಣದ ಅಮಲುಗಳಿಗೆ ಅಲೆದಾಡುತ್ತಿರುವಾಗ
ಸಾರಾಯಿ ಕುಡಿದು ದೀಪ ಆರಿಸಿ
ನಿದ್ದೆ ಬರುವವರೆಗೂ ನನ್ನ ಬೈದುಕೊಂಡು
ಮಲಗಿದ್ದಿ

ಅವ್ವಾ

ಇಲ್ಲಿ ಎಂಜಲೆಲೆಯ ಅಗುಳುಗಳಿಗೂ
ಆಗಸದ ಚುಕ್ಕೆಗಳಿಗೂ
ಸದಾ ಕಿತ್ತಾಟ
ಸೋಜಿಗವೆಂದರೆ ಆ ಅಸಂಖ್ಯ ಚುಕ್ಕೆಗಳ ಮುಂದೆ
ಈ ನಾಲ್ಕೈದು ಚಿಲ್ಲರೆ ಅಗುಳುಗಳು ಯೇಗಬೇಕು
ಏಕಕಾಲಕ್ಕೆ ಹಸಿದ ಹೊಟ್ಟೆಗಳಿಗೆ ಪದ ಕಟ್ಟಬೇಕು

ಈ ಚಿಲ್ಲರೆ ಅಗುಳುಗಳು ಥೇಟು ನೀನೆ

ದಿಟ ಹೇಳಲೇ

ಆ ಎಂಜಲೆತ್ತಿದ ಕೈಯ್ಯಿಗಂಟಿರುವ ತೇವ
ಇಲ್ಲಿ ಎಷ್ಟೇ ಆಳಕ್ಕೆ ನೆಲ ಅಗಿದರೂ ಅವ್ವಾ
ಸಿಕ್ಕುವುದಿಲ್ಲ ಅಗುಳು ಜೀವಾ

ಇನ್ನೂ ಹೀಗೆ ಬಾಯಿ ಒಣಗಿ ಹೋಗಿರುವ ಊರುಗಳು ಅದೆಷ್ಟಿವೆಯೋ

 

Add Comment

Leave a Reply

%d bloggers like this: