Quantcast

ಗೋಪಾಲ ಕಾಕಾಗೆ ಹಾಡಿನ ನಮನ

ರಂಗಭೂಮಿ, ಪತ್ರಿಕಾರಂಗ ಹಾಗೂ ಚಿತ್ರರಂಗ ಮೂರೂ ರಂಗದಲ್ಲೂ ತಮ್ಮದೇ ವಿಶಿಷ್ಠ ಛಾಪನ್ನು ಮೂಡಿಸಿದ್ದ ಖ್ಯಾತ ನಾಟಕಕಾರ, ಪತ್ರಕರ್ತ, ಗೀತ ರಚನಾಕಾರ, ಸಂಭಾಷಣಾಕಾರ ದಿ. ಗೋಪಾಲ ವಾಜಪೇಯಿ ಅವರಿಗೆ, ಇದೇ ಬುಧವಾರ ದಿನಾಂಕ:೨೮-೦೯-೨೦೧೬ರಂದು ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ‘ರಂಗನಮನ’ವಿದೆ.

ನಾಡಿನ ಖ್ಯಾತ ಗಾಯಕರಾದ  ಸಂಗೀತಾ ಕಟ್ಟಿ, ಕಲ್ಪನಾ ನಾಗನಾಥ್, ಶ್ರೀನಾಥ್, ಧನಂಜಯ್ ಕುಲಕರ್ಣಿ, ಶ್ರೀಪತಿ ಮಂಜನಬೈಲು, ರಾಮಚಂದ್ರ ಹಡಪದ್ ಅವರುಗಳು ವಾಜಪೇಯಿ ವಿರಚಿತ ರಂಗಗೀತೆ ಮತ್ತು ಚಿತ್ರಗೀತೆಗಳನ್ನು ಹಾಡಲಿದ್ದಾರೆ.

ಟಿ. ಜಿ. ಬಾಲಕೃಷ್ಣ, ಸಿ. ಬಸವಲಿಂಗಯ್ಯ, ಶ್ರೀನಿವಾಸ. ಜಿ. ಕಪ್ಪಣ್ಣ, ಸುರೇಂದ್ರನಾಥ್, ಜೋಗಿ, ಜಿ.ಎನ್. ಮೋಹನ್ ಅವರುಗಳು ಹಾಗೂ ಆತ್ಮೀಯರು ವಾಜಪೇಯಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಳ್ಳಲಿದ್ದಾರೆ.

ವಾಜಪೇಯಿ ಕುಟುಂಬದವರು ಉಪಸ್ಥಿತರಿರುತ್ತಾರೆ.

ದಿನಾಂಕ: ೨೮ ಸೆಪ್ಟಂಬರ್ ೨೦೧೬
ಸಮಯ: ಸಂಜೆ ೬.೦೦ಕ್ಕೆ
ಸ್ಥಳ: ಕಪ್ಪಣ್ಣ ಅಂಗಳ, ೧೪೮/೧, ೩೨ ಎ ಮುಖ್ಯರಸ್ತೆ, ಜೆಪಿ ನಗರ, ಮೊದಲ ಹಂತ, ಬೆಂಗಳೂರು.

ಮಾರ್ಗಸೂಚಿ: ಆರ್.ವಿ ಡೆಂಟಲ್ ಕಾಲೇಜ್ ಗೇಟಿನ ಪಕ್ಕದಲ್ಲಿರುವ ರಸ್ತೆಯಲ್ಲಿ, ಮುಂದೆ ನಡೆದು ಟ್ರಾನ್ಸ್’ಫರ್ಮರ್ ದಾಟಿಕೊಂಡು ನೇರವಾಗಿ ಬಂದರೆ, ೩೨ ಎ ಮುಖ್ಯರಸ್ತೆಯ ಬಲಬದಿಯಲ್ಲಿ ಕಪ್ಪಣ್ಣ ಅಂಗಳವಿದೆ.

Add Comment

Leave a Reply