Quantcast

ನಾನು ನಾನಾಗಿ ಹಗುರಾಗುವ..

ಬದುಕ ದಾರಿಯಲ್ಲಿ..

nam-parvathiಎನ್ ಪಾರ್ವತಿ

she in nestಬದುಕೇ
ನೀನ್ನನಪ್ಪಿದಷ್ಟು ಚಂದವಾಗಿ
ನಾನಿನ್ನನಪ್ಪಿಕೊಳ್ಳುವುದ
ಯಾರೂ ಕಲಿಸಲಿಲ್ಲ.

ಕಲಿತದ್ದು, ಆತುಕೊಂಡಿದ್ದು
ಅಂಟಿಯೂ ಅಂಟದಂತೆ ಇದ್ದು
ನೆಲೆಯಾಗಿ ನಿಲ್ಲದೆ, ಜಾರಿಹೋಗುವ
ತಾವರೆ ಎಲೆಯ ಮೇಲಿನ
ಹನಿಯ ಕುಣಿತವನ್ನು ಮಾತ್ರ.

ಮರದ ಎಲೆಯಂತೆ, ಗಿಡದ ಹೂವಿನಂತೆ
ಜೀವವಾಗುವ, ಭಾವವಾಗುವ
ಭಾಗವೇ ಆಗಿಹೋಗಿ
ಹೊರೆಯೇ ಆಗದಂತೆ
ಕೊನೆಗೆ, ತೊಟ್ಟು ಕಳಚಿ, ಬಿಟ್ಟು ಹೊರಟು
ಮಣ್ಣಸೇರಿ ಮತ್ತೆ ಜೀವದಂಶವಾಗುವ
ಉಸಿರಾಗುವ
ನಿನ್ನ ರೀತಿಯ ಬೆರಗು ನಾನಾಗುವ
ನಾನು ನಾನಾಗಿ ಹಗುರಾಗುವ
ಹಚ್ಚನೆ ಹಸಿರಾಗುವ ಬಗೆಯ
ಕಲಿಯ ಹೊರಟ
ನನಗೆ ನೀನೇ ಗುರುವು
ನೀನಷ್ಟೇ ನನ್ನ ಗುರಿಯು.

Add Comment

Leave a Reply