Quantcast

BREAKING NEWS: ಸಾಹಿತಿ ಆರ್ಯ ಇನ್ನಿಲ್ಲ

arya-as-udupi-sirur-math-swamiನಾಡಿನ ಹೆಸರಾಂತ ಸಾಹಿತಿ, ನವ್ಯ ಸಾಹಿತ್ಯ ಚಳವಳಿಗೆ ಮಹತ್ವದ ಕೃತಿಗಳನ್ನು ಕೊಟ್ಟ ‘ಆರ್ಯ’ ಇನ್ನಿಲ್ಲ.

ಉಡುಪಿಯ ಶಿರೂರು ಮಠದ ಸನ್ಯಾಸಿಯಾಗಿದ್ದ ಇವರು ನಂತರ ಅದನ್ನು ತೊರೆದು ಧಾರವಾಡದಲ್ಲಿ ನೆಲೆಸಿದರು.

ಕಥೆ, ಕವಿತೆ, ಕಾದಂಬರಿ, ನಾಟಕ, ಅನುವಾದ ಹೀಗೆ ನಾನಾ ಕ್ಷೇತ್ರದಲ್ಲಿ ಕೃತಿಗಳನ್ನು ಕೊಟ್ಟ ಆರ್ಯ ಹೆಸರಾಂತ ಕಲಾವಿದರಾಗಿದ್ದರು.

ಮನೋಹರ ಗ್ರಂಥಮಾಲಾ ಪ್ರಕಟಣೆಗಳಿಗೆ ಅವರು ವಿಶೇಷ ಮುಖಪುಟಗಳನ್ನು ಕೊಟ್ಟರು

ಬಯಲು ಆಲಯದೊಳಗೆ, ಭ್ರೂಣ, ಇಲ್ಲದಿದ್ದವರು, ಪಾತಾಳಗರಡಿ, ನಾಟಕ ಕೃತಿಗಳು. ಗುರು ಕಾದಂಬರಿ, ದೇಸಿ ಪರದೇಸಿ ಕಥೆಗಳು, ಹೈಬ್ರಿಡ್ ಕಥೆಗಳು, ಮನುಷ್ಯ ಕವಿತಾ ಸಂಕಲನ ಇವರ ಕೃತಿಗಳಲ್ಲಿ ಮುಖ್ಯವಾದವು

ಸಾಕಷ್ಟು ಸಾಕ್ಷ್ಯ ಚಿತ್ರಗಳನ್ನೂ ನಿರ್ದೇಶಿಸಿದ್ದರು

ಕರ್ನಾಟಕ ಲಲಿತಕಲಾ ಅಕಾಡೆಮಿ, ಜಿ ಎಸ್ ಶೆಣೈ, ಶಂಕರ ಪಾಟೀಲ ಸ್ಮಾರಕ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ನಾಳೆ ಬೆಳಗ್ಗೆ ೧೧ ಕ್ಕೆ ಧಾರವಾಡದ ಸರ್ಕಾರಿ ಕಲಾ ಶಾಲೆಯಲ್ಲಿ ಆರ್ಯರಿಗೆ ನುಡಿ ನಮನವನ್ನು ಹಮ್ಮಿಕೊಳ್ಳಲಾಗಿದೆ

whatsapp-image-2016-09-30-at-18-40-38

 

Add Comment

Leave a Reply