Quantcast

ಕರ್ನಾಟಕ = ನಾರಿಮನ್ ಅಲ್ಲ!

rajaram tallur low res profile

ರಾಜಾರಾಂ ತಲ್ಲೂರು

ವಕೀಲರು ಎಂದರೆ ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ “ಗೆದ್ದು” ಕೊಡುವವರು ಎಂಬುದು ತಪ್ಪು ಕಲ್ಪನೆ. ವಕೀಲರ ಕೆಲಸ ಇರುವುದು ಅವರ ಕಕ್ಷಿದಾರರ ಕೇಸನ್ನು ಕಾನೂನಿನ ಭಾಷೆಯಲ್ಲಿ ನ್ಯಾಯಾಲಯದ ಮುಂದೆ ಇಟ್ಟು, ಕಾನೂನಿನ ಪ್ರಕಾರ ಅದು ಹೇಗೆ ನ್ಯಾಯಬದ್ಧ ಎಂದು ವಿವರಿಸುವುದು. ಈ ಕೆಲಸವನ್ನು ಕಾವೇರಿ ವಿವಾದದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಕೀಲರಲ್ಲಿ ಹಿರಿಯರಾದ ಪಾಲಿ ಎಸ್. ನಾರಿಮನ್ ಶಿಸ್ತುಬದ್ಧವಾಗಿಯೇ ಮಾಡಿದ್ದಾರೆ.

avadhi-column-tallur-verti- low res- cropಆದರೆ, ಈಗ ಕೊನೆಯ ಕ್ಷಣದಲ್ಲಿ ನಾರಿಮನ್ ಅವರೇ ಕರ್ನಾಟಕಕ್ಕೆ ಕೈಕೊಟ್ಟರು ಎಂಬ ಅಪವಾದ – ರಾಜ್ಯಸರ್ಕಾರ ವಕೀಲರನ್ನು ಬದಲಿಸಬೇಕಿತ್ತು ಎಂಬ ಪ್ರತಿವಾದ ಹೊರಟಿರುವುದು ಕೇವಲ ರಾಜಕೀಯ ಕಾರಣಗಳಿಗಾಗಿ ಅನ್ನಿಸುತ್ತದೆ. ಅದಕ್ಕೆ ನನಗೆ ತೋಚಿದ ಕಾರಣಗಳು ಇಲ್ಲಿವೆ:

೧. ರಾಜ್ಯ ವಿಧಾನಮಂಡಲವು ಕೈಗೊಂಡಿರುವ ಸರ್ವಾನುಮತದ ನಿರ್ಣಯ – “ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸುತ್ತೇವೆ” ಎಂಬುದು ಸುಪ್ರೀಂ ಕೋರ್ಟು ನಮಗೆ ಕೊಡುತ್ತಾ ಬಂದಿರುವ ವ್ಯತಿರಿಕ್ತ ತೀರ್ಪುಗಳ ಸ್ಪಷ್ಟ ಉಲ್ಲಂಘನೆ ಎಂದು ಗೊತ್ತಿದ್ದೂ, ರಾಜ್ಯದ ಹಿತಾಸಕ್ತಿ ಉಳಿಸುವುದಕ್ಕೋಸ್ಕರ ತೆಗೆದುಕೊಂಡಿರುವ  ಸರ್ವಾನುಮತದನಿರ್ಧಾರ. ಕೋರ್ಟಿಗೆ ನಾರಿಮನ್ ಅವರು ನಾವು ಇಂತಹ ಕಾಯಿದೆಯ ಇಂತಹ ವಿಧಿಯನ್ವಯ “ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲಂಘಿಸುತ್ತಿದ್ದೇವೆ” ಎಂದು ಹೇಳಲು ಸಾಧ್ಯವಿದೆಯೆ? ಹೆಚ್ಚೆಂದರೆ, ಅವರು ಶಾಸಕಾಂಗದ ನಿರ್ಧಾರವನ್ನು ಲಿಖಿತರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ, ಬಿಡಲು ನೀರಿಲ್ಲದಿರುವುದರಿಂದ ಬಿಡುತ್ತಿಲ್ಲ ಎಂದು ಹೇಳಬಹುದಿತ್ತು; ಆ ಕೆಲಸವನ್ನವರು ಮಾಡಿದ್ದಾರೆ (ಅವರ ಪತ್ರ ನೋಡಿ).

೨. ಈ ಹಿಂದಿನ ವಿಚಾರಣೆಗಳ ವೇಳೆ ನಾರಿಮನ್ ಅವರು ರಾಜ್ಯದಲ್ಲಿ ಕೊಡಲು ನೀರಿಲ್ಲದ ವಿಚಾರವನ್ನು ಗಟ್ಟಿ ದನಿಯಲ್ಲಿ ಹೇಳುತ್ತಲೇ ಬಂದಿದ್ದಾರಾದರೂ, ಕೋರ್ಟು ಅದನ್ನು ಪರಿಗಣಿಸದೇ ನೀರು ಬಿಡಬೇಕೆಂದೇ ಆದೇಶ ಕೊಡುತ್ತಾ ಬಂದಿದೆ. ನ್ಯಾಯಾಂಗದ ಭಾಗವಾಗಿ ಒಬ್ಬ ವಕೀಲರು ಇದಕ್ಕಿಂತ ಹೆಚ್ಚಿನದೇನನ್ನಾದರೂ ಮಾಡಬಹುದೆಂದು ನನಗನ್ನಿಸುವುದಿಲ್ಲ.

೩. ರಾಜ್ಯವನ್ನು ಕಾವೇರಿ ವಿಚಾರದಲ್ಲಿ ಪ್ರತಿನಿಧಿಸುತ್ತಿರುವುದು ಕೇವಲ ನಾರಿಮನ್ ಒಬ್ಬರಲ್ಲ. ಸುಮಾರು — ಮಂದಿವಕೀಲರು ಈ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಜಂಟಿ ವಕಾಲತು ಹಾಕಿದ್ದಾರೆ (ಪಟ್ಟಿ ನೋಡಿ). ರಾಜ್ಯ ಸರ್ಕಾರಬೇರೆ ವಕೀಲರನ್ನು ನೇಮಿಸಬೇಕಿತ್ತು ಎಂಬ ವಾದದಲ್ಲಿ ಹುರುಳಿಲ್ಲ. ಯಾಕೆಂದರೆ, ಅಂತಹ ವಕೀಲರು ಈಗಾಗಲೇ ಆ ತಂಡದಲ್ಲಿ ಇದ್ದಾರೆ. ಆದರೆ, ಯಾವುದೇ ವಕೀಲರು ಈ ಹಂತದಲ್ಲಿ ನ್ಯಾಯಾಲಯದೆದುರು ಕಾನೂನುಬದ್ಧವಾಗಿ ಏನನ್ನೂ ಹೇಳುವುದು ಕಷ್ಟ.

೪. ತ್ರಿಸದಸ್ಯ ಪೀಠದೆದುರು ಕರ್ನಾಟಕದ ಅರ್ಜಿಯೊಂದು (ಟ್ರಿಬ್ಯುನಲ್ ಅಂತಿಮ ತೀರ್ಪು ನಮಗೆ ಅನ್ಯಾಯ ಮಾಡಿದೆ ಹಾಗಾಗಿ ಮರುಪರಿಶೀಲಿಸಿ ಎಂದು) ವಿಚಾರಣೆಗೆ ಬಾಕಿ ಇರುವಾಗ, ಇಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಬಗ್ಗೆ ನಮ್ಮ ವಿರೋಧವನ್ನು ಈಗಾಗಲೇ ಲಿಖಿತವಾಗಿ ಸಲ್ಲಿಸಿರುವಾಗಲೂ, ಅದನ್ನು ನ್ಯಾಯಾಲಯ ನಿರ್ಲಕ್ಷಿಸಿದೆ. ಈ ನಿಟ್ಟಿನಲ್ಲೂ ವಕೀಲರ ತಂಡವನ್ನು ದೂರುವಂತಿಲ್ಲ.

cauvery೫. ನ್ಯಾಯಾಲಯದ ತೀರ್ಪು ಈ ಪ್ರಕರಣದಲ್ಲಿ ನೀರು ಬಿಡಬೇಕೆಂದೇ ಬರುವುದು ಅನಿವಾರ್ಯ. ಏಕೆಂದರೆ, ಇಡಿಯ ಪ್ರಕರಣವನ್ನು ಗ್ರಹಿಸುವ ವ್ಯಾಪ್ತಿ ಅದಕ್ಕಿಲ್ಲ. ಅದು ಏನಿದ್ದರೂ ಟ್ರಿಬ್ಯುನಲ್ ಅಂತಿಮ ತೀರ್ಪಿನ ಪಾಲನೆ ಆಗುವಂತೆ ನೋಡಿಕೊಳ್ಳುವ ವ್ಯಾಪ್ತಿಯನ್ನು ಮಾತ್ರ ಹೊಂದಿದೆ. ಅಲ್ಲಿ ಕೊಡಲು ನೀರಿಲ್ಲ ಎಂಬುದನ್ನು ಹೇಳಿದರೂ ಇರುವುದರಲ್ಲಿ ಪಾಲು ಮಾಡಿಕೊಳ್ಳಲು ಒತ್ತಾಯಿಸುತ್ತಿದೆ. ಇದಕ್ಕೆ ಕಾರಣ ಅಂತರ್ ರಾಜ್ಯ ಜಲವಿವಾದ ಕಾಯಿದೆಯಲ್ಲಿರುವ ಮತ್ತು ಆ ಮೂಲಕ ಟ್ರಿಬ್ಯುನಲ್ ಅಂತಿಮ ತೀರ್ಪಿನಲ್ಲಿ ನುಸುಳಿರುವ ಲೋಪವೇ ಹೊರತು ಸದ್ಯದ ಕಾನೂನು ತಂಡದ ಲೋಪ ಆಗಿರಲಾರದು.

೬. ಆದರೆ ಇದೇ ಮಾತನ್ನು ನ್ಯಾಯಪೀಠದ ವಿಚಾರದಲ್ಲಿ ಹೇಳಲಾಗದು. ಯಾಕೆಂದರೆ, ಮೊದಲನೆಯದಾಗಿ, ಪೀಠಾಸೀನ ನ್ಯಾಯಮೂರ್ತಿಗಳಲ್ಲೊಬ್ಬರು ಈ ಹಿಂದೆ ಜಯಲಲಿತಾ ಅವರ ಖಾಸಗಿ ವಕೀಲರಾಗಿದ್ದರು ಎಂಬ ವಿಚಾರ, ನೀರಿನ ವಿಚಾರ ವಿಶ್ಲೇಷಣೆ ಮಾಡುವ ತಂಡದ ಮುಖ್ಯಸ್ಥರಾದ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿಗಳು ತಮಿಳುನಾಡು ಕೆಡೇರ್ ಅಧಿಕಾರಿ ಎಂಬ ವಿಚಾರ ಹಾಗೂ ಕೊನೆಯದಾಗಿ, ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಅದಕ್ಕೆ ಸಂಸತ್ತಿನ ಎರಡೂ ಸದನಗಳ ಅನುಮತಿ ಬೇಕು ಎಂಬ ವಿಚಾರ ಕಾನೂನಿನಲ್ಲಿ ಸ್ಪಷ್ಟವಾಗಿದ್ದರೂ, ಅದನ್ನು ನಾಲ್ಕೇ ದಿನಗಳಲ್ಲಿ ರಚಿಸಲು ಒಪ್ಪಿಕೊಂಡ ಅಟಾರ್ನಿ ಜನರಲ್ ಮುಕಿಲ್ ರೋಹಟ್ಗಿ ಅವರ ನಿಲುವು ಮತ್ತು ನ್ಯಾಯಾಲಯದ ನಿಲುವುಗಳನ್ನು ಕಾನೂನಿನ ವ್ಯಾಪ್ತಿಯೊಳಗೂ ಒಪ್ಪಿಕೊಳ್ಳುವುದು ಕಷ್ಟ.

೭. ಒಟ್ಟಿನಲ್ಲಿ, ಒಕ್ಕೂಟ ವ್ಯವಸ್ಥೆಯ ಒಳಗೆ ನ್ಯಾಯಾಂಗ ಶಾಸಕಾಂಗಗಳ ವ್ಯಾಪ್ತಿಯನ್ನು ಇನ್ನಷ್ಟು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಹಾಗೂ ಆ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆ ಇನ್ನಷ್ಟು ಆರೋಗ್ಯಕರಗೊಳಿಸುವ ನಿಟ್ಟಿನಲ್ಲಿ, ನ್ಯಾಯಾಂಗವನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಈ ಪ್ರಕರಣ ಮೈಲಿಗಲ್ಲಾಗಲಿದೆ.  ಕರ್ನಾಟಕದ ಈಗಿನ ನಿಲುವು ಅಂತಿಮವಾಗಿ ಬಹಳ ಪ್ರಜಾತಾಂತ್ರಿಕ ನಿಲುವು ಎಂದು ಸಾಬೀತಾಗಲಿದೆ ಎಂದು ಆಶಯ

adv1 adv2 fali

3 Comments

  1. Rajaram Tallur
    October 1, 2016
  2. Rajaram Tallur
    October 1, 2016
  3. Venugopal
    October 1, 2016

Add Comment

Leave a Reply