Quantcast

ನಾಗೇಶ್ ಹೆಗಡೆ quotes..

ನಾಗೇಶ್ ಹೆಗಡೆ ಅವರು ಗಮನಕ್ಕೆ ತಂದದ್ದು-

kidsಗಣತಂತ್ರ ಮತ್ತು ಯುದ್ಧತಂತ್ರ:

“ಜನಸಾಮಾನ್ಯರು ಯುದ್ಧವನ್ನು ಎಂದೂ ಬಯಸುವುದಿಲ್ಲ. ಹಳ್ಳಿಯ ಬಡ ಪೆಕರ ರೈತನಿಗೆ ಯುದ್ಧದಿಂದ ಏನಾಗಬೇಕಿದೆ? ಯುದ್ಧ ಮುಗಿದು ಬದುಕಿ ಬಂದರೆ ಮತ್ತೆ ಅದೇ ಹೊಲದಲ್ಲೇ ಗೆಯ್ಯುತ್ತಿರಬೇಕು. ಸಹಜವಾಗಿಯೇ ಶ್ರೀಸಾಮಾನ್ಯನಿಗೆ ಯುದ್ಧ ಬೇಕಾಗಿಲ್ಲ. ನಾಯಕರಾಗಿದ್ದವರು ದೇಶದ ಹಣೆಬರಹವನ್ನು ನಿರ್ಧರಿಸುತ್ತಾರೆ, ಪ್ರಜೆಗಳನ್ನು ಸಲೀಸಾಗಿ ತಮ್ಮೊಂದಿಗೆ ಎಳೆದೊಯ್ಯುತ್ತಾರೆ. ಅದು ಪ್ರಜಾತಂತ್ರವಾಗಿರಲಿ, ಸಾಮ್ರಾಜ್ಯಶಾಹಿ ಆಗಿರಲಿ, ಸರ್ವಾಧಿಕಾರಿಯಾಗಿರಲಿ, ಸಂಸತ್ತಾಗಿರಲಿ ಅಥವಾ ಕಮ್ಯೂನಿಸ್ಟ್ ಏಕಾಧಿಪತ್ಯವೇ ಇರಲಿ ಎಲ್ಲ ಕಡೆ ಇಷ್ಟೇ ಆಗೋದು….

ಧ್ವನಿ ಇರಲಿ, ಇಲ್ಲದಿರಲಿ, ನಾಯಕತ್ವದ ತಾಳಕ್ಕೆ ತಕ್ಕಂತೆ ಸದಾ ಕಾಲ ಪ್ರಜೆಗಳನ್ನು ಕುಣಿಸಬಹುದು. ಅದು ತೀರಾ ಸುಲಭ. ‘ನಿಮ್ಮ ಮೇಲೆ ದಾಳಿ ನಡೆಯಲಿದೆ’ ಎಂದು ಜನರನ್ನು ಹೆದರಿಸುವುದು; ಶಾಂತಿಪ್ರಿಯರನ್ನು ದೇಶಭಕ್ತಿಯಿಲ್ಲದ ಜನರೆಂದೂ ದೇಶವೇ ಅಪಾಯದಲ್ಲಿರುವಾಗ ಕೈಕಟ್ಟಿ ಕೂತ ಹೇಡಿಗಳೆಂದೂ ಜರೆಯುವುದು. ಎಲ್ಲ ದೇಶಗಳಲ್ಲೂ ಈ ತಂತ್ರ ಸಲೀಸಾಗಿ ಕೆಲಸ ಮಾಡುತ್ತದೆ.”

-ಹರ್ಮನ್ ಗೋರಿಂಗ್,

ಹಿಟ್ಲರನ ಸೇನಾಧಿಕಾರಿ.

ನೂರೆಂಬರ್ಗ್ ಯುದ್ಧಾಪರಾಧಿಗಳ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದು.

One Response

  1. Shyamala Madhav
    October 1, 2016

Add Comment

Leave a Reply