Quantcast

ಏನ್ ನಡಿತಿದೆ ಅಂತಾನೆ ಗೊತ್ತಾಗ್ತಿಲ್ಲ..

ಮರುಭೂಮಿಯ ಬೆರಗು 

ಶ್ರೀಕರ ಭಟ್

ಏನ್ ನಡಿತಿದೆ ಅಂತಾನೆ ಗೊತ್ತಾಗ್ತಿಲ್ಲ.

ಇವತ್ತಿನ ನಮ್ಮ ಸೊಸೈಟಿ ಈ ಹದ್ನಾಲ್ಕ್ ಹದಿನೈದ್ನೆ ವಯಸ್ಸಿನ ಮಕ್ಕಳನ್ನ ಈ ಸೋ ಕಾಲ್ಡ್ ಐಡಿಯಲ್ ಹಾಗು ಸಿವಿಲೈಸ್ಡ್ ಸೊಸೈಟಿಯ ಕಚ್ಚಡಾ ಕಾಂಪಿಟೀಶನ್ ನಲ್ಲಿ ತಳ್ಳಿಬಿಡುತ್ತೆ, ಇದೇ ಸತ್ಯ ಬೇರೆ ಏನನ್ನೂ ನಂಬೇಡ ಮುಂದೇನು ಪ್ರಶ್ನೇನೂ ಮಾಡ್ಬೇಡ ಹೀಗೆ ಹೇಳಿ ಪ್ರಶ್ನೆ ಕೇಳೋ ಬಾಯನ್ನ ಮುಚ್ಚಿಬಿಡುತ್ತೆ.

rajasthanಆಕ್ಚುಲ್ಲಾಗಿ ಸತ್ಯ ಏನಂತ ಹಿಂಗ್ ಹೇಳ್ದವ್ರಿಗೂ ಗೊತ್ತಿಲ್ಲ, ಅವರ ಮೂಡತನವನ್ನ ಡಿಫೆಂಡ್ ಮಾಡಲು ಉಪಯೋಗಿಸ್ತಿರುವ ಒಂದು ಟ್ರಿಕ್ ಅಂತ ನಮ್ಗೆ ಗೊತ್ತಿದ್ರೂ ತೋರಿಸ್ಕೋಳ್ಳದೆ ಸುಮ್ಮನೆ ಇರ್ಬೇಕಾಗುತ್ತೆ, ಈ ಕಾಂಪಿಟಿಶನ್ ದುನಿಯಾದಲ್ಲಿ ನಾ ಮುಂದು ತಾ ಮುಂದು ಅಂತ ಓಡ್ತಿರುವ ಒಬ್ಬನನ್ನ ನಿಲ್ಲಿಸಿ – ‘ಎಲ್ಲಿಗಪ್ಪ ಓಡ್ತಿದ್ಯಾ?’ ಅಂತ ಪ್ರಶ್ನೆ ಮಾಡಿದ್ರೆ, ಮುಂದೆ ಓಡ್ತಿರೋನನ್ನ ತೋರಿಸಿ ‘ಅವ್ನಿಗಿಂತ ಮುಂದೆ ಹೋಗ್ಬೇಕು ಅಷ್ಟೆ’ ಎಂಬ ಉತ್ತರ ಸಿಗುತ್ತೆ.

‘ಹಂಗಂತ ಈ ಸೊಸೈಟಿ ನಿನ್ಗೆ ಹೇಳಿರೋದು, ನಿನ್ಗೇನ್ ಮಾಡ್ಬೇಕು’ ಈ ರೀತಿ ಮರು ಪ್ರಶ್ನೆ ಕೇಳಿದ್ರೆ ಸಿಗೋ ಉತ್ತರ, ‘ಅಯ್ಯೋ, ನನ್ನಿಂದೇನ್ ಮಾಡಕ್ಕಾಗುತ್ತೆ ಅವ್ರು ತೋರಿಸಿದ ಹಾದಿಯಲ್ ಹೋಗ್ಬೇಕು ಅಷ್ಟೆ’, ಹಂಗಾದ್ರೆ ಇಲ್ಲಿ ಹುಟ್ಟಿರೋದು ನಮ್ಮ ಎಕ್ಸ್ಪಾಯ್ರಿ ಡೇಟ್ ಬರೋತನಕ ನಮ್ಮ ಸರ್ವೈವಲ್ನ್ ಕಾಪಾಡ್ಕೋಳೋದಕ್ಕಾಗಿ…  ಥೋ… ಸುಮ್ನೆ ಇದೆಂತ ಹಾಳಾದ್ ಯೋಚನೆ, ತಲೆ ಹಾಳಾಗ್ತಿದೆ, ಸುನಿ ತನ್ನ ಗೆಳೆಯನಿಗೆ ಕಾಲ್ ಮಾಡ್ತಾನೆ.

‘ಬಾಯ್… ಪತಾ ನಹಿ ಯಾರ್, ದಿಮಾಕ್ ಖರಾಬ್ ಹೋರಹಾ ಹೆ ಚಲ್ ಕಹಿ ಚಲ್ತೆಹೆ…’

ಆ ಕಡೆ ಇಂದ ಪಾಸಿಟಿವ್ ಆನ್ಸರ್ ಸಿಕ್ಕಿಲ್ಲ, ಸುನಿಯ ಗೆಳೆಯ ಅದ್ಯಾವುದೋ ಕೆಲಸದಲ್ಲಿ ಬಿಸಿ, ಇನ್ನೇನ್ ಮಾಡೋದು ತನ್ನ ಒಂದ್ ಜೊತೆ ಬಟ್ಟೆ, ಲ್ಯಾಪ್ ಟಾಪ್ ಹಾಗು ಸ್ಪೀಕರ್ ತಗೊಂಡು ಹೊರಟ, ಅಹಮದಾಬಾದ್ ನ ಕಾಲುಪುರ್ ರೈಲ್ವೆ ಸ್ಟೇಶನ್ ನ ಟ್ರೈನ್ ಶ್ಕೆಡ್ಯುಲ್ ಲೀಸ್ಟ್ ನೋಡ್ದಾಗ ಜೋಧ್ ಪುರ್ ಹೋಗೋ ಟ್ರೈನ್ ಇನ್ನೇನ್ ಕೆಲವೇ ಸಮಯದಲ್ಲಿ ಹೊರಡಲಿದೆ ಅಂತ ತಿಳಿಯುತ್ತೆ.

ಟಿಕೆಟ್ ಪಡೆದುಕೋಂಡು ಜನರಲ್ ಡಬ್ಬ ಹತ್ತುತ್ತಾನೆ, ಆಕ್ಚುಯಲ್ ಇಂಡಿಯ ನೋಡಕ್ ಸಿಗೋದೆ ಇಲ್ಲಿ, ಯಾವ ದೊಡ್ಡಸ್ತಿಕೆಯ ತೋರ್ಪಡಿಕೆ ಇಲ್ಲ, ಮಾತು ಬಾಯಿಂದ ಹೊರಡೋ ಮುನ್ನ ಯಾವುದೇ ರೀತಿಯ ಫಿಲ್ಟರ್ ಇಲ್ಲ, ಸೋಶಿಯಲೀ ಎಷ್ಟೇ ಇಂಟ್ರೋರ್ವ್ಟ್ ಆಗಿರ್ಲಿ ಅಂತವನನ್ನೂ ಬ್ರೇಕ್ ಇಲ್ಲದೆ ಮಾತಾಡ್ವಾಗೆ ಮಾಡಬಲ್ಲದು ಈ ಜನರಲ್ ಡಬ್ಬ, ರೈಲು ಊರು ಸೇರೋ ತನಕ ಇಡೀ ಬೋಗಿನೆ ಒಂದು ಫ್ಯಾಮಿಲಿ ತರ ಆಗೋಗಿರುತ್ತೆ, ಒಂದೋಳ್ಳೆ ಬ್ಯೂಟಿಫುಲ್ ಎಕ್ಸ್ಪೀರಿಯೆನ್ಸ್.

rajasthan3ಆರು ಗಂಟೆ ಪ್ರಯಾಣದ ಬಳಿಕ ರೈಲು ಜೋದ್ ಪುರ್ ಬಂದು ಸೇರುತ್ತೆ, ಟ್ರೆಂಡಿಂಗ್ ಬಟ್ಟೆ ಹಾಕೊಂಡು, ಕೈಯಲ್ಲಿ ಒಂದು ಚೀಲ ಹಿಡ್ಕೊಂಡು, ಮುಕದಲ್ಲಿ ಏನೂ ಗೊತ್ತಿಲ್ಲದವನಾಗೆ ಕಣ್ಣು ಪಿಳಿ ಪಿಳಿ ಬಿಡ್ಕೊಂಡು, ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ರೈಲ್ವೇ ಸ್ಟೇಶನ್ ನಿಂದ ಹೊರ ಬಂದ್ರೆ ನಾವೆ ಅಲ್ಲಿ ನಿಂತ ಆಟೋದವ್ರಿಗೆ ಬಕ್ರಾ ಲುಕ್ ಕೊಟ್ಟು ಕರೆದಾಗಾಗುತ್ತೆ.

ಗೊತ್ತಿಲ್ಲದ್ ಊರು ಬೇರೆ, ಬಕ್ರಾ ಆಗೋ ಮೂಡ್ ಬೇರೆ ಇಲ್ಲ, ಏನೋ ತನ್ನದೆ ಊರಿಗೆ ಬಂದವ್ರಾಗೆ ಒಂದು ರಸ್ತೆ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಹೋದ, ಆಟೋದವರಿಂದೇನೋ ಬಚಾವ್, ಆದರೆ ಹೋಗೋದಾದ್ರೂ ಎಲ್ಲಿ ? ಸುನಿಗೆ ಹೊಟ್ಟೆ ಬೇರೆ ಹಸಿತ್ತಿತ್ತು ಅಲ್ಲೆ ಹತ್ರದಲ್ಲಿದ್ದ ಒಂದು ಟಿಫಿನ್ ಹೌಸ್ ಒಳಗೋಗುತ್ತಾನೆ ಮೆನು ನೋಡಿದ ಖಾಟಿವಾಡ, ದಾಲ್ ಬಾಟಿ, ಚೆನ್ನಾಬಟೋರ, ಅಯ್ಯೋ ಇದ್ಯಾವುದೂ ಬೇಡ ಕೌಂಟರ್ ಕಡೆಗೆ ಹೋಗಿ ಇಡ್ಲಿ ಇದ್ಯಾ ಅಂಥ ಕೇಳ್ತಾನೆ, ಇದೆ ಅಂತ ತಿಳಿದಾಗ ಖುಷಿಯೇ ಖುಷಿ.

ಆದರೆ ಇಡ್ಲಿ ಬಂದ ಮೇಲೆನೆ ಅದರ ಅಸ್ಲಿ ಸ್ಟೋರಿ ರಿವೀಲ್ ಆದದ್ದು, ತನಗೆ ಗೊತ್ತಿದ್ದ ಇಡ್ಲಿ ಟೇಸ್ಟೇ ಮರೆತು ಹೋಯಿತು, ದಿನಸಿ ಅಂಗಡಿಗೆ ಬಂದು ಮಾತ್ರೆ ಕೇಳ್ದಾಗೆ ಆಯ್ತು, ಜೋರಾದ ಹಸಿವು, ಬೇರೆ ದಾರಿ ಇಲ್ಲ ಗೊತ್ತಿಲ್ಲದ್ ಏನೇನೋ ತಿನ್ನೋ ಬದಲು ಕೊಟ್ಟಿರೋದನ್ನ ತಿಂದು ಮೆಹರಣ್ಗಡ್ ಕೋಟೆಗ್ ಹೋಗೋ ದಾರಿ ತಿಳ್ಕೊಂಡು ಆ ಹೊಟೇಲ್ ನಿಂದ ಹೊರಬಂದ.

ಈ ಕೋಟೆಯನ್ನ ಮಂಡೋರ್ ನ ರಾಜ ರಾವ್ ಜೋದ ಕಟ್ಟಿಸಿರೋದು, ರಾಜಸ್ಥಾನದ ಹಲವಾರು ಸುಂದರ ಕೋಟೆಗಳಲ್ಲಿ ಇದೋಂದು, ರೈಲ್ವೆ ಸ್ಟೇಶನ್ ನಿಂದ ಮೈನ್ ರೋಡ್ ತನಕ ಒಂದೋಳ್ಳೆ ಸಿಟಿ ತರ ಅನಿಸುವ ಊರು, ಗಲ್ಲಿ ದಾರಿ ಬಂದೊಡನೆ ಸಂಪೂರ್ಣ ಚೇಂಜಾಗಿ ಬಿಡುತ್ತೆ, ಗವರಿಕರ್ ನ ಮಹೇಂಜೊದಾರೋ ಸಿನಿಮಾದ ಸೆಟ್ ಹಾಗೆ ಕಾಣುತ್ತೆ.

ಗಲ್ಲಿ ಗಲ್ಲಿಯ ಹಾದಿ ನಡೆದುಕೊಂಡು, ಒಪನ್ ಮಾರ್ಕೆಟ್ ಅನ್ನು ಹಾದಿಹೋದರೆ ಗಂಟಾ ಘರ್ ನ ಸರ್ಕಲ್ ಸಿಗುತ್ತೆ ಅಲ್ಲಿಂದ ಏರಿನ್ ರಸ್ತೇಲಿ ಏದುರುಸಿರು ಬಿಡುತ್ತಾ ಸಾಗಿದ್ರೆ ಕಣ್ಣೆದುರಿಗೆ ದೊಡ್ಡ ದೈತ್ಯ ತಲೆಯೆತ್ತಿ ನಿಂತಾಗೆ ಕಾಣೋದೆ ಮೆಹರಣ್ಗಡ್ ಕೋಟೆ, ಕೋಟೆ ಮೇಲಿನಿಂದ ಇಡೀ ಜೋದ್ ಪುರ್ ಕಾಣುತ್ತೆ, ಎಲ್ಲಾ ಮನೆ, ಅಂಗಡಿಗಳ ಗೋಡೆಗೆ ನೀಲಿ ಬಣ್ಣ ಬಳ್ದದಿಂದಾಗಿ ಈ ಬ್ಲೂ ಸಿಟಿ ತುಂಬಾ ಬ್ಯೂಟಿಫುಲ್ಲಾಗ್ ಕಾಣಿಸುತ್ತೆ, ದೂರದಲ್ಲಿ ಜಸ್ವಂತ್ ಥಾಡದ ಬಿಳಿ ಕಟ್ಟಡ ಎದ್ದು ಕಾಣಿಸುತ್ತೆ, ಅರ್ಧ ದಿನದಲ್ಲಿ ಇಡೀ ಜೋದ್ ಪುರ್ ನೋಡಿ ಮುಗಿಸಿದ ಸುನಿಯ ಪ್ರಯಾಣ ಜೈಸಲ್ಮೇರ್ ಕಡೆಗೆ ಸಾಗಿತು.

ಜೋದ್ ಪುರ್ ನಿಂದ ಜೈಸಲ್ಮೇರ್ ಗೆ ಬಸ್ ನಲ್ಲಿ ನಾಲ್ಕ್ ರಿಂದ ಐದು ಗಂಟೆಯ ಪ್ರಯಾಣ, ಜೋದ್ ಪುರ್ ಸುತ್ತಿ ಸುಸ್ತಾಗಿದ್ದ ಸುನಿ ಸ್ಲೀಪರ್ ಬಸ್ ನ ಟಿಕೇಟ್ ಕಟ್ವಾಯಿಸಿಕೊಂಡು ಬಸ್ ಹತ್ತಿದ, ಗಾಡಿ ಹೊರಟಿತು ಜೈಸಲ್ಮೇರ್ ನ ಕಡೆಗೆ, ಒಳ್ಳೆ ನಿದ್ದೆಯಲ್ಲಿದ್ದ ಸುನಿಗೆ ಬಸ್ ನ ಕಂಡೆಕ್ಟರ್ ನ ಕೂಗು ಎಬ್ಬಿಸಿತು.

ಇಬ್ಬರು ಹಳ್ಳಿ ಹೆಂಗಸರು ತಾವ್ ಸಾಕಿದ ಮೂರು ಮೇಕೆಯ ಜೊತೆಗೆ ಬಸ್ ಹತ್ತಿದ್ರು ಅದರಲ್ ಒಂದ್ ಮೇಕೆ ಉಚ್ಚೆ ಹೊಯ್ದು ರಂಪ ಮಾಡಿದ್ದು ಈ ಕಂಡೆಕ್ಟರ್ ನ ಕೂಗಾಟಕ್ಕೆ ಕಾರಣವಾಗಿತ್ತು, ನಿದ್ದೆಯಿಂದ ಎದ್ದ ಸುನಿ ಒಮ್ಮೆ ಪೂರ ಬಸ್ಸಿನೊಳಗೆ ಕಣ್ಣಾಡಿಸುತ್ತಾನೆ, ಇಡೀ ಬಸ್ಸಿನ ಚಿತ್ರಣವೇ ಬದಲಾಗಿತ್ತು, ಒಂದಿಡೀ ಊರೇ ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗೆ ಜನ ತುಂಬಿಹೋಗಿತ್ತು, ಅವರ ಜೊತೆಗೆ ತಾವ್ ಸಾಕಿದ ಮೇಕೆ, ಕೋಳಿ ಎಲ್ಲವೂ ಟಿಕೇಟ್ ಸಹಿತ ಪ್ರಯಾಣಿಸುತ್ತಿದ್ದವು.

ಒಂದ್ ಕಡೆ ಬಸ್ಸು ನಿಲ್ಲುತ್ತೆ, ಇಬ್ಬರಿಗೆಂದು ಮಾಡಲಾದ ಒಂದು ಸ್ಲೀಪರ್ ಕಂಪಾರ್ಟಮೆಂಟ್ ನಿಂದ ಏಳು ಜನರು ಹೊರ ಬಂದದನ್ನು ಕಂಡ ಸುನಿ ಬೆಚ್ಚಿಬಿದ್ದ, ಮರುಭೂಮಿಯ ಬಿಸಿ ಹವ ತಾಟಲಾರಂಭಿಸಿತು, ರಸ್ತೆಯ ಎರಡೂ ಬದಿ ಕಣ್ಣಾಡಿಸಿದಷ್ಟು ದೂರಕ್ಕೆ ಬರಿ ಬೋಳು ಮರುಭೂಮಿ, ಎಲ್ಲೂ ಜನ ವಸತಿ ಕಾಣುತ್ತಿಲ್ಲ, ಕೆಲವು ಕಡೆ ಜೋರಾದ ಗಾಳಿ ಮರಳನ್ನು ರಸ್ತೆಯ ಮೇಲೆ ಬಿಸಾಕಿ ಹೋಗುತ್ತಿದ್ದದ್ದರಿಂದ ಸಂಪೂರ್ಣ ರಸ್ತೆಯೇ ಕಣ್ಮರೆಯಾಗುತ್ತಿತ್ತು, ಡ್ರೈವರ್ ನ ಎಕ್ಸ್ಪೀರಿಯೆನ್ಸ್ ಚೆನ್ನಾಗಿದ್ದದ್ದರಿಂದ ಸೇಫಾಗಿ, ಸರಿಯಾದ್ ಟೈಮ್ ಅಲ್ಲಿ ಸರಿಯಾದ್ ಜಾಗಕ್ಕೆ ತಲುಪಿಸಿದ.

ಬಸ್ ಜೈಸಲ್ಮೇರ್ ತಲುಪುತ್ತಿದಂತೆ ಸೂರ್ಯ ಅವತ್ತಿನ ತನ್ನ ಡ್ಯೂಟಿ ಮುಗಿಸಿ ರಿಟರ್ನ್ ಹೋಗುತ್ತಿದ್ದ, ಜೈಸಲ್ಮೇರ್ ಸಿಟಿ ನೋಡಲು ಬಹಳಾ ಚಂದ, ಥಾರ್ ಮರುಭೂಮಿಯ ಮೇಲೆ ತಲೆ ಎತ್ತಿ ನಿಂತಿರುವ ಈ ಗೋಲ್ಡನ್ ಸಿಟಿ ನೋಡಲು ಪ್ರತೀ ದಿನ ಸಾವಿರಾರು ಪ್ರವಾಸಿಗರು ಬರ್ತಾರೆ, ರಾಜಪುತ್ ರಾಜ ರಾವಲ್ ಜೈಸಾಲ್ ಕಟ್ಟಿಸಿದ ದೊಡ್ಡ ಕೋಟೆ ಇಡೀ ಊರಿಗೆ ದೊಡ್ಡ ತಿಲಕ ಹಾಕಿದಂತೆ ಕಾಣುತ್ತಿತ್ತು.

ಕತ್ತಲೆ ಬೇರೆ ಆಗಿತ್ತು ಕೋಟೆಗಂತು ಹೋಗಕ್ ಆಗಲ್ಲ, ಅಲ್ಲೆ ಇದ್ದ ಕೆಲವ್ರನ್ನ ವಿಚಾರಿಸಾದಗ ಜೈಸಲ್ಮೆರ್ ನಿಂದ ಹೆಚ್ಚು ಕಮ್ಮಿ 50 ಕಿ.ಮೀ ಡಿಸ್ಟೆನ್ಸ್ ನಲ್ಲಿ ಸಾಮ್ ಮರುಭೂಮಿ ಇಲಾಖ ಇದೆ, ಅಲ್ಲಿ ಹಲವಾರು ಟೆಂಟ್ ಹೌಸ್ ಸಿಗುತ್ತೆ, ಕ್ಯಾಂಪ್ ಫಯರ್ ಇರುತ್ತೆ ಎಂದು ತಿಳಿದು ಬಂತು, ಆದರೆ ಅಷ್ಟು ದೂರ ಈ ಹೊತ್ತಲ್ಲಿ ಹೋಗೋದಾದ್ರು ಹೇಗೆ, ಯಾವ ಗಾಡಿ ಹೋಗಲ್ಲ rajasthan2ಅಂತೇನಿಲ್ಲ ಬಂದ ಪ್ರವಾಸಿಗರನ್ನ ಕರೆದುಕೊಂಡು ಹೋಗಲು ಸಾಲು ಸಾಲು ಸುಮೋ ಗಾಡಿಗಳ ಲೈನೇ ಇದೆ ಆದರೆ ಬಾಯಿಗ್ ಬಂದದ್ ರೇಟ್, ಅಷ್ಟೊಂದು ಬಜೆಟ್ ಸುನಿ ಹತ್ರ ಇಲ್ಲ ಸೋ ಬೇರೆ ಏನ್ ಮಾಡೋದು ಸಾಮ್ ಹೋಗೋ ದಾರಿ ಯಾವುದೆಂದು ಕೇಳಿಕೊಂಡು ಆ ದಾರಿಯ ಕಡೆಗೆ ನಡೆಯಲಾರಂಭಿಸಿದ.

ದಾರಿ ಮಧ್ಯದಲ್ಲಿ ಯಾವುದಾದರು ಗೂಡ್ಸ್ ಗಾಡಿ ಸಿಕ್ಕರೆ ಡ್ರಾಪ್ ಕೇಳೋ ಪ್ಲಾನ್ ಅವನದ್ದು, ಸುಮಾರು ಆರ್ ಏಳ್ ಕಿಲೋಮೀಟರ್ ನಡೆದುಕೋಂಡು ಹೋದ ಸುನಿ ಒಮ್ಮೆ ಹಿಂತಿರುಗಿ ನೋಡ್ತಾನೆ ದೂರದಿಂದ ಒಂದು ಟೆಂಪೋ ಮೆಲ್ಲಗೆ ಬರೋದು ಕಾಣಿಸ್ತಿದ್ದಂತೆ ದಾರಿ ಅಡ್ಡಕಟ್ಟಿ ಡ್ರಾಪ್ ಕೇಳ್ದ, ಗಾಡಿ ನಿಲ್ಲಿಸಿದ ಡ್ರೈವರ್ ‘ಖಮ್ಮಾ ಘನಿ ಬಯ್ಯ ಕಹಾ ಜಾನಾಹೆ ಆಪ್ಕೋ’ ಎಂದು ಕೇಳ್ದಾ, ‘ಸಾಮ್ ಜಾನಾಹೆ’ ಎಂದವನೇ ಟೆಂಫೋ ಏರಿದ ಸುನಿ, ಡ್ರೈವರ್ ನ ಹೆಸರು ಬಿಲಾಲ್, ಹೀಗೆ ಕುಶಲೋಪರಿ ವಿಚಾರಿಸುತ್ತಾ ಮಾತನಾಡ್ತ ಬಿಲಾಲ್ ಬಿಲಾಲ್ ಬಾಯ್ ಆಗೋದ್ರು, ಪ್ರತೀ ದಿನ ಜೈಸಲ್ಮೇರ್ ನಿಂದ ಸಾಮ್ ಮರುಭೂಮಿಯಲ್ಲಿರೋ ಹಲವಾರು ಟೆಂಟ್ ಹೌಸ್ ಗಳಿಗೆ ದಿನಸಿ ಸಪ್ಲೈ ಮಾಡೋ ಬಿಸಿನೆಸ್ ಅವರದ್ದು, ಅವರ ವಾಸ ಜೈಸಲ್ಮೇರ್ ನಿಂದ ಹೆಚ್ಚು ಕಮ್ಮಿ ನೂರು ಕಿ.ಮೀ ದೂರದಲ್ಲಿರೋ ನೆಟ್ಸಿ ಎಂಬ ಒಂದು ಹಳ್ಳಿ.

ಅಂದು ಬಿಲಾಲ್ ಬಾಯ್ ತನ್ನ ಮಗನಿಗೆ ಆರೋಗ್ಯ ಕೆಟ್ಟಿರೋ ವಿಷಯ ತಿಳಿದು ತನ್ನ ಅವತ್ತಿನ ಕೆಲಸ ಮುಗಿಸಿ ಹಳ್ಳಿ ಕಡೆಗೆ ಗಾಡಿ ಓಡಿಸುತ್ತಿದ್ದರು, ಹೀಗೆ ಅದು ಇದು ಅಂತ ಮಾತಾಡ್ತ ಮಾತಾಡ್ತ ವಿಷಯ ಖಾಲಿಯಾಗಿ ಸ್ವಲ್ಪ ಹೊತ್ತು ಮೌನ ಮುಂದುವರಿಯಿತು, ಇದ್ದಕಿದ್ದಂತೆ ಗಾಡಿ ಓಡಿಸುತ್ತಾ ಬಿಲಾಲ್ ಬಾಯ್ ಸುನಿ ಕಡೆಗೆ ತಿರುಗಿ ‘ಬಯ್ಯ ಪಾನ್ ಕಾವೋಗೆೀ’ ಎಂದು ಒಂದು ಪಾನ್ ಕೊಟ್ರು, ಸುನಿ ಸಂಕೋಚ ಹಾಗು ಭಯದಿಂದಲೇ ಆ ಪಾನ್ ಭಾಯಿಗೆ ಹಾಕೋತಾನೆ.

ಸುನಿ ಹೋಗುತ್ತಿದ್ದ ಗಾಡಿಯ ವೇಗ ಇದ್ದಕಿದ್ದಂತೆ ಹೆಚ್ಚಾಯಿತು, ರಸ್ತೆಯ ಆಚೆ-ಈಚೆ ವಿಶಾಲ ಮರುಭೂಮಿ, ಕತ್ತಲಾಗುತ್ತಿದ್ದಂತೆ ಅಲ್ಲಿನ ಹವ ತಣ್ಣಗಾಗುತ್ತೆ, ಸುನಿ ಗಾಡಿಯ ಹೆಡ್ ಲೈಟ್ ಬೆಳಕು ಎಲ್ಲಿಯವರೆಗೆ ಹಬ್ಬಿತ್ತೋ ಅಲ್ಲಿಯವರೆಗೆ ಒಮ್ಮೆಯು ಕಣ್ಣು ಮಿಟಕಿಸದೆ ದಿಟ್ಟಿಸಿ ನೋಡುತ್ತಿದ್ದ, ನೋಡನೋಡುತ್ತ  ರಸ್ತೆ ಸುರುಳಿ ಸುತ್ತಲಾರಂಭಿಸಿತು, ದೊಡ್ಡ ಗೋಳ ಪ್ರಪಾತದೋಳಗೆ ಗಾಡಿ ಹೋದಾಗೆ ಅನುಭವ, ದೂರದಲ್ಲಿ ಕಣ್ ಕುಕ್ಕುವಂತ ಬೆಳಕು ತನ್ ಅತ್ತ ವೇಗವಾಗಿ ಬರುತ್ತಿತ್ತು, ಒಮ್ಮೆಲೆ ಜೋರಾದ ಕರ್ಕಶ ಸದ್ದು… ಸುನಿಯನ್ನ ಮತ್ತೆ ತಾನಿದ್ದಲಿಗೆ ಕರೆತಂದಿತು, ಹಸುಗಳ ಗುಂಪೊಂದು ರಸ್ತೆಗಟ್ಟಿ  ನಿಂತಿದ್ದ ಕಾರಣ ಬಿಲಾಲ್ ಬಾಯ್ ಜೋರಾಗಿ ಹಾರ್ನ್ ಒತ್ತುತ್ತಿದ್ದರು ಅದೇ ಶಬ್ದ ಸುನಿಯನ್ನ ಎಚ್ಚರಗೋಳಿಸಿದ್ದು.

ತಲೆ ಭಾರವಾದ ಅನುಭವ, ಎಲ್ಲಾ ಮಂಜ್ ಮಂಜಾಗಿ ಕಾಣುತ್ತಿದೆ, ಇದೆಲ್ಲಾ ಬಿಲಾಲ್ ಬಾಯ್ ಕೊಟ್ಟ ಆ ಪಾನ್ ನ ಪರಿಣಾಮ ಎಂಬುದು ಸುನಿಗೆ ಕನ್ಫರ್ಮ್ ಆಯ್ತು, ಆ ಪಾನ್ ನಲ್ಲಿ ಬೆರೆಸಿದ್ದ ಅಫೀಮು ಅಮಲೇರಿಸುವಂತೆ ಮಾಡಿತ್ತು, ಅಲ್ಲೆಲ್ಲಾ ವಿಳ್ಯದೆಲೆಯ ಜೊತೆಗೆ ಈ ಅಫೀಮ್ ಗಳ ಬಳಕೆ ಮಾಮೂಲು, ಅಫೀಮಿನ ಮತ್ತು ಮತ್ತೆ ಸುನಿಯನ್ನ ನಿದ್ದೆಗ್ ಎಳೆದುಕೊಂಡು ಹೋಯಿತು.

ಸುನಿಗೆ ಎಚ್ಚರವಾದಾಗ ಸೂರ್ಯ ನೆತ್ತಿಮೇಲಿದ್ದ, ಕಣ್ತೆರೆಯುತ್ತಿದ್ದಂತೆ ಟೆಂಪೋದಲ್ಲಿ ನೇತಾಕಿದ ಒಂದು ಪಕ್ಷಿಯ ಹಾರೋ ಆಟಿಕೆ ತನ್ನ ತಲೆ ಮೇಲೆ ಸುತ್ತುತಿರುವುದನ್ನು ಕಂಡ, ಡ್ರೈವರ್ ಸೀಟ್ ನಲ್ಲಿ ಬಿಲಾಲ್ ಬಾಯ್ ಕಾಣಿಸಿಲ್ಲ, ದೂರದಲ್ಲೆಲ್ಲೋ ಕುರಿಗಳ ಕೂಗು ಕೇಳಿಸುತ್ತಿತ್ತು.

ಗಾಡಿಯಿಂದ ಇಳಿದು ತಾನ್ ನಿತ್ತ ಜಾಗದ ಸುತ್ತ ಕಣ್ಹಾಯಿಸುತ್ತಾನೆ ಬೋಳು ಮರುಭೂಮಿ, ಅಲಲ್ಲಿ ಒಂದೆರಡು ಗಿಡಗಳಿದ್ದವು ಅದೂ ಕಳ್ಳಿ ಗಿಡ, ಗಾಡಿಗ್ ಒಂದು ಸುತ್ತು ಬಂದು ಇತ್ತ ಕಡೆ ನೋಡುತ್ತಾನೆ ಒಂದು ಸಣ್ಣ ಕಚ್ಚಾ ಮನೆಯೊಳಗಿನಿಂದ ಬಿಲಾಲ್ ಬಾಯ್ ನಗುತ್ತಾ ಹೊರ ಬರುತ್ತಾರೆ, ಸುನಿಯ ಅಮಲೇರಿದ ಸ್ಥಿತಿ ಗಮನಿಸಿ ಸಾಮ್ ನಲ್ಲಿ ತನನ್ನು ಇಳಿಸುವ ಬದಲು ನೇರವಾಗಿ ತಮ್ಮ ಊರು ನೆಟ್ಸಿಗೆ ಕರೆ ತಂದಿದ್ದರು.

rajasthan4ಹೆಚ್ಚು ಕಮ್ಮಿ ಸಾವಿರ ಜನ ಸಂಖ್ಯೆ ಹೊಂದಿರೋ ಒಂದು ಪುಟ್ಟ ಹಳ್ಳಿ ಈ ನೆಟ್ಸಿ, ನೆಟ್ಸಿಯಿಂದ ಪಾಕಿಸ್ತಾನ ಬಾರ್ಡರ್ ಹೆಚ್ಚುಕಮ್ಮಿ ಐವತ್ ಅರವತ್ತು ಕಿಲೋ ಮೀಟರ್ ಅಷ್ಟೆ, ಖಾಲಿಬಾರ್, ಲೋಂಗೆವಾಲ, ಗೋಟರ್ ಇವೆಲ್ಲ ನೆಟ್ಸಿಯ ಪಕ್ಕದ್ ಹಳ್ಳಿಗಳು, ಈ ಲೋಂಗೆವಾಲ 1971 ರ ಭಾರತ ಪಾಕಿಸ್ತಾನ ಯುದ್ಧದ ರಣರಂಗ ಹಾಗೂ ಭಾರತದ ವೀರ ಜಯಭೇರಿಯ ಮಹತ್ವ ಹೊಂದಿರೋ ಜಾಗ, 1997 ರ ಜೆ.ಪಿ ದತ್ತರ ‘ಬಾರ್ಡರ್’ ಸಿನಿಮಾ ಇದೇ ಯುದ್ಧದ ಕಥಾ ಹಂದರದ ಸುತ್ತ ಹೆಣೆಯಲಾಗಿದೆ.

ನಗು ನಗುತ್ತಾ ಬಿಲಾಲ್ ಬಾಯ್ ‘ಅಬ್ ಕೆಸೇ ಹೋ? ಬೋಹೋತ್ ಮಸ್ತ್ ನೀಂದ್ ಆಯಾ ಹೋಗ, ಚಲೋ ಕುಚ್ ಕಾತೆ ಹೆ’ ಎಂದವರೇ ತನ್ನ ಮನೆಯೊಳಗೆ ಕರೆದುಕೊಂಡು ಅಲ್ಲಿದ್ದವರೆಲ್ಲಾರನ್ನೂ ಪರಿಚಯಿಸಿ ರೊಟ್ಟಿ ಬಡಿಸಿದರು, ಅಲ್ಲಿಂದ ಹೊರಡೋ ಮುನ್ನ ಇಡೀ ಹಳ್ಳಿಗೆ ಒಂದು ರೌಂಡ್ ಹೋಡೆಸಿದರು, ಸಂಜೆಯಾಗುತಿದ್ದಂತೆ ತನ್ನ ಮಗನನ್ನು ಜೈಸಲ್ಮೇರ್ ನಲ್ಲಿರೋ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗೋ ಸಲುವಾಗಿ ಹೊರಟು ನಿತ್ತರು.

ಅವರ ಜೊತೆಗೆ ಸುನಿನೂ ರಿಟರ್ನ್ ಜೈಸಲ್ಮೇರ್ ಕಡೆಗೆ ಬಂದ, ‘ಫಿರ್ಸೆ ಜೈಸಲ್ಮೇರ್ ಆವೋಗೆತೋ ಮುಜೆ ಬುಲಾವೋ’ ಎಂದು ತಮ್ಮ ಫೋನ್ ನಂಬರ್ ಕೊಟ್ಟು ಸುನಿಯನ್ನ ಬೀಳ್ಕೊಟ್ಟರು ಬಿಲಾಲ್ ಬಾಯ್, ನಂಬರ್ ಪಡೆದು ‘ಫಿರ್ ಮಿಲೇಂಗೆ’ ಎಂದ್ ಹೇಳಿ ಜೈಸಲ್ಮೇರ್ ನಿಂದ ರಿಟರ್ನ್ ಅಹಮದಬಾದ್ ಹೋಗೋ ಬಸ್ ವಿಚಾರಿಸುವಲ್ಲಿ ಮಗ್ನನಾದ ಸುನಿ.

Add Comment

Leave a Reply