Quantcast

BREAKING NEWS: ದೇವನೂರು ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

devanuru 1 banavasiಕುವೆಂಪು ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ದೇವನೂರು ಮಹಾದೇವ ಅವರು ಆಯ್ಕೆಯಾಗಿದ್ದಾರೆ.

೫ ಲಕ್ಷ ರೂ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಡಿಸೆಂಬರ್ ೨೯ ರಂದು ಕುಪ್ಪಳ್ಳಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂಪೆ ನಾಗರಾಜಯ್ಯ ಘೋಷಿಸಿದ್ದಾರೆ.

ಹಿಂದಿಯ ಹಿರಿಯ ಲೇಖಕ ಗಂಗಾಪ್ರಸಾದ್ ವಿಮಲ್, ಜವಾಹರಲಾಲ್ ವಿಶ್ವವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಅನ್ವರ್ ಪಾಷಾ, ಮಧ್ಯಪ್ರದೇಶ ವಿವಿಯ ಕುಲಪತಿ ಪ್ರೊ ಕಟ್ಟೀಮನಿ , ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ ಪುರುಷೋತ್ತಮ ಬಿಳಿಮಲೆ, ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರನ್ನೊಳಗೊಂಡ ಸಮಿತಿ ಈ ಆಯ್ಕೆಯನ್ನು ಮಾಡಿದೆ. ನಾಡೋಜ ಹಂಪನಾ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.

 

 

One Response

Add Comment

Leave a Reply