Quantcast

ಉಡುಪಿಯಲ್ಲಿ ‘ಚಲೋ’ ಚಲೋ..

ಕರ್ನಾಟಕದಲ್ಲೂ ಭೂಮಿಹಕ್ಕಿಗಾಗಿ ಹೋರಾಟ;

ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು

~ ಜಿಗ್ನೇಶ್ ಮೆವಾನಿ

*

ಇದೊಂದು ಹೊಸ ಚಳವಳಿ. ಗುಜರಾತ್’ನ ದಲಿತರು ಯಾವ ರೀತಿ ಚಳವಳಿಯನ್ನು ಮಾಡಿದರೋ, ಸರ್ಕಾರಕ್ಕೆ ಬಲವಾದ ಏಟನ್ನು ಕೊಟ್ಟರೋ, ಅಂತಹ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಇದು ಎಲ್ಲ ದಮನಿತರ ದನಿಯಾಗಬೇಕು. ದಲಿತ, ಆದಿವಾಸಿ, ಕೃಷಿಕರ ಚಳವಳಿಯಾ ಗಬೇಕು.

unnamedಗುಜರಾತ್  ದಲಿತರು ಏನು ಮಾಡಿದ್ದಾರೋ ಇಲ್ಲಿಯು ಕೂಡ ನೀವು ಮಾ ಡಬೇಕು. ಗುಜರಾತ್ ನಲ್ಲಿ ದಲಿತ – ಆದಿವಾಸಿ ಕೃಷಿಕರ ಸಂಘರ್ಷ ಜೊತೆಯಾ ಗಿ ಸಾಗಿದೆ. ಇದು ಕರ್ನಾಟಕದ ಹಿಂದು ತ್ವ ಪ್ರಯೋಗ ಶಾಲೆ. ಇಲ್ಲಿ ನೀವೆಲ್ಲರೂ ಸೇರಿದ್ದೀರಿ. ಇದು ಒಳ್ಳೆಯ ಬೆಳವಣಿಗೆ,

ನಾಗಮಂಡಲದಲ್ಲಿ ಹೇಗೆ ನಾಗನ ಆಡಿಸಿತ್ ತಾರೋ ಹಾಗೆಯೇ ಮೋದಿ ಇಡೀ ವ್ಯವಸ್ಥೆ ಯನ್ನು ನಾಗಮಂಗಲದ ಹಾಗೆ ಆಡಿಸುತ್ತಿ ದ್ದಾರೆ. ಅದು  ಇಲ್ಲಿ ಬರುವ ಮೊದಲೇ ನಾವೆಲ್ಲ ಸೇರಿ ಅದನ್ನು ನಾಶ ಮಾಡಬೇಕು . ನಾವೆ ಲ್ಲರೂ ಇಂದು ಒಟ್ಟಾಗಿದ್ದೇವೆ. ಈ ಐಕ್ಯತೆ ಯನ್ನು ನೀವು ಕಾಪಾಡಬೇಕು. ಇಲ್ಲವಾದರೆ ನೀವು  ದಲಿತರು ಬದುಕಲು ಸಾಧ್ಯವಿಲ್ಲ. ‘ನಿಮ್ಮ ದನದ ಬಾಲವನ್ನಿ ನೀವೆ ಇಟ್ಟು ಕೊಳ್ಳಿ, ನಮ್ಮ ಜಮೀನನ್ನು ನಮಗೆ ಕೊ ಡಿ’ ಅಂತ ಗಟ್ಟಿದನಿಯಲ್ಲಿ ನಾವು ಹೇಳಬೇಕಿದೆ.

ಹಿಂದುತ್ವದ ಅಜೆಂಡಾ ಏನಿದೆ, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು . ಗುಜರಾತ್ 2012ರ ದಂಗೆಯಲ್ಲಿ ಮುಸ್ ಲಿಂ ಸಹೋದರರ ಮೇಲೆ ಹಲ್ಲೆಯಾಗಿದೆ. ದ ಲಿತರ ಮೇಲೆ746 ಮೇಲೆ ಕೇಸ್, ಮೇಲ್ಜಾ ತಿಯವರ ಮೇಲೆ ಕೇವಲ 56 ಕೇಸ್ ಮಾತ್ರ  ದಾಖಲಾಗಿದೆ. ಇದರಲ್ಲೇ ನಾವು ಅರ್ಥ ಮಾ ಡಿಕೊಳ್ಳಬೇಕು.

ಗುಜರಾತ್ ಮಾಡೆಲ್ ನ ಚರ್ಚೆ ಇಡೀ ದೇ ಶದಲ್ಲಿ ಆಗುತ್ತಿವೆ. 119 ಹಳ್ಳಿಗಳಿಲ್ಲರುವ ದಲಿತರು ಇಂದು  ಪೊಲೀಸ್ ರಕ್ಞಣೆಯಲ್ಲಿ ಬದುಕುತ್ತಿ ದ್ದಾರೆ.  2014ರಲ್ಲಿ 74ಜನ ದಲಿತ ಮಹಿಳೆಯರ ಅತ್ಯಾಚಾರವಾಗಿತ್ತು. ಇವರನ್ ನು ಸಂದರ್ಶಿಸಲಿಕ್ಕೆ ನರೇಂದ್ರ ಮೋದಿ  ಹೋಗಿಲ್ಲ. 55 ಹಳ್ಳಿಗಳಲ್ಲಿ ಇವತ್ತು ಸಾಮಾಜಿಕ  ಬಹಿಷ್ಕಾರಕ್ಕೆ ದಲಿತ ಕುಟುಂಬ ಒಳಗಾ ಗಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮೋದಿಯ ಘೋಷಣೆ ದಲಿತರ ವಿ ನಾಶಕ್ಕೆ ಮಾಡಿದ ಘೋಷಣೆಯಾಗಿದೆ.

ಊನಾದಲ್ಲ ಸತ್ತ ದನದ ಕಳೇಬರ ವಿಲೇವಾ ರಿ ಮಾಡಿದಾಗ ದಲಿತರ ಮೇಲೆ ಹಲ್ಲೆಯಾ ಯ್ತು. ಆದರೆ ನಮ್ಮ ಹೋರಾಟ ದನಕ್ಕೆ ಮಾತ್ರ ಸೀಮಿ ತವಾಗಬಾರದು, ಎನ್ಕೌಂಟರ್ ಮಾಡಿ ಸಾಯಿ ಸಲಾದ ಮೂವರು ಯುವರ ಕುರಿತು ಹೋರಾಟ ಮುಂ ದಯವರೆಸಬೇಕು ಎಂದು ನಾವು ಅಂದುಕೊಂಡೆ ವು. ಗುಜರಾತ್ ನ ಊನ ಚಳವಳಿಯ ಸ್ಲೋ ಗನ್ ಅಸ್ಮಿತೆ ಮತ್ತು ಅಸ್ತಿತ್ವದ ಆಂ ದೋಲನ. ಈ ಹೋರಾಟವನ್ನು ನಾವು ಭೂಮಿ ಹೋ ರಾಟಕ್ಕೆ ಕೊಂಡೊಯ್ದೆವು. ಇದಕ್ಕೆ ಸಾ ವಿರಾರು ಜನ ಜೊತೆಯಾರು. 1ಲಕ್ಷಕ್ಕೂ ಅಧಿಕ ದಲಿತರು ನಾವು ದನದ  ಕಳೇವರ ವಿಲೇವಾರಿ ಮಾಡಲ್ಲ, ಮಲ ಎತ್ ತುವುದಿಲ್ಲ, ಕೊಳೆಚೆಗೆ ಇಳಿಯುವುದಿಲ್ಲ ಎಂದು ಶಪಥ  ಮಾಡಿದ್ದಾರೆ. ದಲಿತ ಅಸ್ಮಿತೆ ಯಾತ್ ರೆ ಮಾಡದ ನಂತರ ಆಗಸ್ಟ್ 15ರಂದು ನಾ ವಲ್ಲರೂ ಸೇರಿದೆವು. ಅದಲ್ಲದೆಯೂ ಕೂಡ  ಒಂದು ಲಕ್ಷ ಜನ ಸಂಘಪರಿವಾರದ ವಿರು ದ್ದ ಹೋರಾಟ ಮಾಡಿದ್ದರು.

ಈ ಹೋರಾಟ ನೋಡಿ ನರೇಂದ್ರ ಮೋದಿಯವರು  ಹೊಡೆಯುವುದಾದರೆ ನನಗೆ ಹೊಡೆಯಿರಿ ಎಂ ಬ ಹೇಳಿಕೆಯನ್ನು ಕೊಟ್ಟರು. ಈ ಹೋರಾಟ  ನಡೆದ ಮೇಲೆ ಹಲವರಿಗೆ ಬೆದರಿಕೆಗಳನ್ನು ಕೂಡ ಹಾಕಿ ದ್ದರು. ಇದು ಕೇವಲ ನನ್ನ ಆಂದೋಲನವಲ್ಲ. ಇದು ಇಂದು ರಾಜ್ಯದ ಎಲ್ಲ ಜಿಲ್ಲಗಳಲ್ಲಿ ನಡೆಯುತ್ತಿದೆ.  ಈ ಹೋರಾಟ ಭೀಮ ನಾಯಕರ ಹೆಗಲ ಮೇಲಿದೆ. ಈ ದಲಿತರ ಆಂದೋಲನ ಇನ್ ನೂ ತನ್ನ ಗತಿಯನ್ನಿ ಕಾಯ್ದುಕೊಂಡಿದೆ . ಇದರ ಪರಿಣಾಮ 150ಸೆಂಟ್ಸ್ ಭೂಮಿಯನ್ನು ದಲಿ ತರಿಗೆ ಕೊಡುವ ಕೆಲಸ ಆಗುತ್ತಿದೆ. ಅಟ್ ರಾಸಿಟಿ ಕಾನೂನು ಜಾರಿಯಲ್ಲಿದ್ದರೂ ಕೂಡ ದಲಿ ತರಿಗೆ ವಿಶೇಷವಾದ ಕೋರ್ಟ್ ಇರಲಿಲ್ಲ.  ಆದರೆ ಈ ಹೋರಾಟದ ಪರಿಣಾಮದಿಂದ ಇಂದು  ವಿಶೇಷ ಕೋರ್ಟ್ ಹಲವು ಕಡೆ ಆಗುತ್ತಿ ದೆ.

1941ರಲ್ಲಿ ಅಂಬೇಡ್ಕರ್ ಗುಜರಾತ್’ಗೆ ಭೇಟಿ ನೀಡಿದ್ದರು. ಸಫಾಯಿ ಕರ್ಮಚಾರಿ ಗಳ ಕುರಿತು ಮಾತಾಡಿದ್ದರು. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಯಾರೂ ಮಾತಾಡಿಲ್ಲ. ನಮ್ಮ ಹೋರಾಟದ ನಂತರ ಸರ್ಕಾರ ಸಫಾಯಿ ಕರ್ಮಚಾರಿಗಳನ್ನು ಖಾ ತ್ರಿ ಮಾಡುತ್ತೇವೆ ಎಂದು ಮಾತುಕೊಟ್ಟಿದೆ.  ಅದಾನಿ, ಅಂಬಾನಿಗೆ ಭೂಮಿ ಕೊಡಲು ಸಾ ಧ್ಯವಾಗುತ್ತದೆ ಎಂತಾದರೆ ದಲಿತರಿಗೆ  ಯಾಕೆ ಕೊಡಲು ಆಗುತ್ತಿಲ್ಲ?

ನಿಮಗೆಲ್ಲ ಗೊತ್ತಿರಬಹುದು, ಗುಜರಾತ್’ನಲ್ಲಿ ಪಟೇ ಲ್ ಸಮುದಾಯದವರು ಹೋರಾಟ ಮಾಡುತ್ತಿದ್ ದಾರೆ. ಗುಜರಾತ್’ನಲ್ಲಿ ಕಾಂಗ್ರೆಸ್  ಮತ್ತು ಬಿಜೆಪಿ ಎರಡೂ ಕೂಡ ದಲಿತರಿಗೆ  ಭೂಮಿಯನ್ನು ಕೊಡಲಿಲ್ಲ. ಭಾರತದಲ್ಲಿ  ಇವತ್ತಿನ ಆರ್ಥಿಕ ತಾರತಮ್ಯ ಜಾತಿ ವ್ ಯವಸ್ಥೆಯಿಂದ ಆಗಿದೆ. ಈ ಮನುವಾದವನ್ ನು ನಾವು ವಿರೋಧಿಸಬೇಕಾಗಿದೆ. ಕರ್ನಾ ಟಕ ಸರ್ಕಾರವೂ ಕೂಡ ದಲಿತರಿಗೆ ಭೂಮಿ ಯನ್ನು ಕೊಡಲು ಹಿಂದೇಟು ಹಾಕಿದರೆ ಅದ ರ ವಿರುದ್ದವೂ ನಾವು ಸೆಟೆದು ನಿಲ್ಲುತ್ತೇವೆ.

ರೋಹಿತ್ ವೇಮುಲ ಇಲ್ಲಿ ನಯುವಕರಲ್ಲಿ  ಜೀವಂತವಾಗಿದ್ದಾರೆ ಎಂದು ನಾವು ಭಾವಿ ಸುತ್ತೇನೆ. ಇತ್ತೀಚೆಗೆ ಹೊರಡಿಸಿದ ವರದಿಯಲ್ಲಿ ರೋಹಿತ್ ದಲಿತ ಅಲ್ಲವೆಂ ದು ಹೇಳುತ್ತಿದ್ದಾರೆ. ರೋಹಿತ್’ನ ತಾ ಯಿಯನ್ನುಸಂಶಯದಿಂದ ಕಾಣುತ್ತಿದ್ದಾರೆ . ಉಚ್ಚಂಗಿ ಪ್ರಸಾದ್ ವಿಷಯದಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಇ ದರ ವಿರುದ್ದವೂ ನಾವು ಹೋರಾಡಬೇಕಿದೆ.  ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ  ಇವರಿಗೆಲ್ಲ ಸಿಕ್ಕಾಪಟ್ಟೆ ಸೊಕ್ಕು ಬಂ ದಿದೆ. ದಲಿತ ಮೇಲೆ ಹಲ್ಲೆಯಾಗುತ್ತಿ ದೆ. ನಾವು ಕರ್ನಾಟಕ ಸರ್ಕಾರಕ್ಕೆ ಈ  ವೇದಿಕೆಯ ಮೂಲಕ ಎಚ್ಚರಿಕೆಯನ್ನು ಕೊ ಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಎ ಷ್ಟು ಜಮೀನು ನೀಡಿದೆ, ವಿವಿಧ ಕಂಪೆ ನಿಗಳಿಗೆ ಎಷ್ಟು ಭೂಮಿ ಕೊಟ್ಟಿದ್ದಾರೆ ಎಂದು ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಮತ್ತು ಗೋ ರಕ್ಷಕ ಸಮಿತಿಗಳನ್ನು ಬರ್ ಖಾಸ್ತು ಮಾಡಬೇಕು. ಅಲ್ಲದೇ ಉಡುಪಿ ಮ ಠದಲ್ಲಿ ನಡೆಯುತ್ತಿರುವ ಪಂಕ್ತಿ ಬೇಧ ತೆಗೆದುಹಾಕಲು ಆದೇಶ ನೀಡಿ 2 ತಿಂಗಳ ಗಡುವು ಕೊಡಬೇಕು. ಇಲ್ಲದಿದ್ದಲ್ಲಿ ನಾ ವು ಮಠಕ್ಕೆ ಮತ್ತಿಗೆಯನ್ನು ಹಾಕುತ್ತೇವೆ . ಇದಕ್ಕಾಗಿ ಜೈಲಿಗೆ ಹೋಗುವುದಕ್ಕೂ  ನಾವು ಸಿದ್ಧ.

ನಾವು ಭೂಮಿಯ ಬಗ್ಗೆ, ಭೂಮಿಯ ಹಕ್ಕಿನ ಬಗ್ಗೆ ಮಾತಾಡುತ್ತೇವೆ. ಹಾಗೆಯೇ ಸಾವಿತ್ರಿ ಫುಲೆಯವರಿಗೂ ಜೈಕಾರ ಹಾಕುತ್ತೇವೆ. ನಾವು ದಲಿತರಿಗೆ ಕೊಡಮಾಡುವ ಭೂಮಿಯನ್ನು ಆ ಸಮುದಾಯದ ಮಹಿಳೆಯ ಹೆಸರಿಗೆ ನೋಂದಾವಣೆ ಮಾಡಬೇಕೆಂದು ಕೂಡ ಒತ್ತಾಯಿಸಬೇಕು.

ದಲಿತ ದಮನಿತ ಯುವ ಜನತೆಗೆ ಸಮಾವೇಶದ ಕರೆ:

ಮನುವಾದಿ ಮೋಡಿಯಿಂದ ತಲೆಕೊಡವಿ ಹೊರಬನ್ನಿ; ಬಾಬಾ ಸಾಹೇಬರ ಸಮತೆಯ ನಾಡಿಗಾಗಿ ತಲೆಯೆತ್ತಿ ಹೋರಾಡುವ ಬನ್ನಿ.,

ಹಕ್ಕೊತ್ತಾಯಗಳು:

  1. ಬಡವರ ಆಹಾರದ ಹಕ್ಕು ರಕ್ಷಣೆಯಾಗಬೇಕು: ಆಹಾರ ಸರ್ವಾಧಿಕಾರವನ್ನು ಹೇರುತ್ತಿರುವ ಗೋರಕ್ಷಣೆ ಹೆಸರಿನ ಗೂಂಡಾಗಿರಿಯನ್ನು ನಿಷೇಧಿಸಬೇಕು. ದಲಿತ – ದಮನಿತರ ರಕ್ಷಣೆಗೆ ವಿಶೇಷ ಕಾರ್ಯಪಡೆ ರಚನೆಯಾಗಬೇಕು.
  2. ದಲಿತ – ದಮನಿತರ ಭೂಮಿಯ ಪಾಲು ದಕ್ಕಲೇಬೇಕು: ಸರ್ಕಾರಿ, ಹೆಚ್ಚುವರಿ ಮತ್ತು ಮೀಸಲು ಭೂಮಿಗಳು ಆದ್ಯತೆ ಮೇರೆಗೆ ದಲಿತ – ದಮನಿತ ಸಮುದಾಯಗಳಿಗೆ ಹಂಚಿಕೆಯಾಗಬೇಕು.
  3. ಮೀಸಲಾತಿ ನೀತಿ ಖಾಸಗಿ ಕ್ಷೇತ್ರಕ್ಕೂ ಅನ್ವಯವಾಗಬೇಕು: ಖಾಸಗಿಕ್ಷೇತ್ರಕ್ಕೆ ಲಗಾಮು ಹಾಕಿ ಸಾರ್ವಜನಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನೀತಿ ಘೋಷಣೆಯಾಗಬೇಕು. ಖಾಸಗಿ ಇರುವ ತನಕ ಅದರಲ್ಲೂ ಮೀಸಲಾತಿ ಜಾರಿಗೆ ತರಬೇಕು.
  4. ಎರಡುತಿಂಗಳಲ್ಲಿ ದಲಿತರಿಗೆ ಭೂಮಿ ಕೊಡಲು ಸರ್ಕಾರ ಒಂದು ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು.
  5. ಉಡುಪಿ ಮಠಗಳಲ್ಲಿ ನಡೆಯುತ್ತಿರುವ ಪಂಕ್ತಿಭೇದವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮಠಕ್ಕೂ ಮುತ್ತಿಗೆ ಹಾಕಲಾಗುವುದು

Add Comment

Leave a Reply