Quantcast

ಸರಳುಗಳ ಈ ಚಿತ್ತಾರ… – ಡಾ ಪ್ರೇಮಲತ ಬಿ

dr-premalata_b-370x315ಡಾ ಪ್ರೇಮಲತ ಬಿ

ಕಬ್ಬಿಣದ ಚೌಕಟ್ಟಿನ ಕಿಟಕಿ ಹಿಂದೆ

ಸರಳುಗಳ ಚಿತ್ತಾರ ಕಾಡಿತ್ತೆನಗೆ!

ಮುಚ್ಚಿಟ್ಟಿದ್ದೇನು ದೇಹವೋ, ಮನಸೋ

ಬೆಳಕಿಂಡಿಯ ವಯ್ಯಾರದ ಕಂಬಿ ನಡುವೆ!click-kavte4

ಗವ್ವನೆಯ  ಕತ್ತಲ ಕೋಣೆಯೊಳಗೆ

ನಿಡುಸುಯ್ದು ಬಿಟ್ಟ ನಿಟ್ಟುಸಿರ ಬಿಸಿಗೆ

ಕಾಯುತ್ತ ಕರಗಿಹ ಕನಸುಗಳ ಬೇಗುದಿಗೆ

ತಿದಿಯಾಗಿ ಕಾಡಿದ ವಿಧಿಯ ಕತ್ತಲೆ

ಬೆಳಕಿನ ನಡುವೆ ನಿನ್ನ ತಣ್ಣನೆಯ ಬಲವೆ!

ಹಿಡಿದಿಟ್ಟು ಕೆಡವಿ ಈ ದೇಹವನ್ನು

ಹೊರಗರಿಸಿ, ಬರಸೆಳೆದುಕೊಳ್ಳುವೆ

ನನ್ನ ಚೇತನವನ್ನು

ನೀನು ಕರುಣೆಯ ಗವಾಕ್ಷಿಯೋ

ಬಂದಿಯಾಗಿಸಿದ ರಾಕ್ಷಸಿಯೋ

ಕುಸಿದು ಬೀಳದಂತೆ ಕೈಗೆ

ದೊರೆತ ಭದ್ರ ಆಸರೆಯೋ

ಅಯೋಮಯವಾಗಿ ಹರಿದಿದೆ

ಈ ನಿನ್ನ ನಿರಂತರ ಆಕಾರ!!

Add Comment

Leave a Reply

%d bloggers like this: