Quantcast

ನಿನಗೊಂದು ಸಲಾಮ್..

kusuma-patel

ಕುಸುಮಾ ಪಟೇಲ್ 

click-kavte4ಕಿಟಕಿಯಲಿ ಬೆಳಕು ಕಂಡ
ಕೈ ಬೆರಳು
ಎಳೆದು ತಂದಿದೆ ನೋಡು
ಇತಿಹಾಸದ
ಅಮ್ರೀನಳ ನೆರಳು-

ಬೆಳಕು ಕಾಣದ ಖೋಲಿ
ಸೂರ್ಯನಿಣುಕದ ಮೂಲೆ
ಹಗಲು ರಾತ್ರಿ ಹೊದ್ದು
ಬದುಕ ದಾರಿ ಕತ್ತಲು-

ಶತಶತಮಾನದ ಶೋಷಣೆಗೆ
ಸಿಡಿದೆದ್ದ ನಿನ್ನ
ಈ ಕೈ ಬೆರಳು
ಹುಡುಕಿ ಹಿಡಿದಿದೆ-ನೋಡು
ಸೂರ್ಯನಾ ನೆರಳು-

ಕತ್ತಲೆಯ ಕೋಣೆಯ
ತಲ್ಲಣಕೆ
ಬರೆದ ಶಾಯರಿಗಳು
ಮಾರಾಳಿ ವಿಧಿಗೆ
ನೀ
ಕೇಳಿದ ಪ್ರಶ್ನೆಗಳು??

ಕರಾಳ ಬದುಕಿನ
ಮುಳ್ಳು ಹಾದಿಗೆ
ನವಿರು, ನವಿರು
ಶಾಯರಿ ಕೊಟ್ಟ
ಅಮ್ರೀನ್/ ಉಮ್ರಾವ್-
ಮನ ತುಂಬಿ, ಎದೆ ತುಂಬಿ
ನಿನಗೊಂದು ಸಲಾಮ್.

Add Comment

Leave a Reply

%d bloggers like this: