Quantcast

ಸಾರ್… ನಾಳೆ ಬೆಳಗ್ಗೆ ನಾನು ಏನುಣ್ಣಲಿ?

rajaram tallur low res profile

ರಾಜಾರಾಂ ತಲ್ಲೂರು

ಒಬ್ಬ ವ್ಯಕ್ತಿ ಆರೋಗ್ಯವಂತನಾಗಿ ಬದುಕುವುದಕ್ಕೆ, ಆತ/ಆಕೆ ಪ್ರತಿದಿನ ಕನಿಷ್ಟ 1800 ಕ್ಯಾಲರಿ ಆಹಾರ ಸೇವಿಸಬೇಕಾಗುತ್ತದೆ. ಅದಕ್ಕಿಂತ ಕಡಿಮೆ ಆಹಾರ ಸೇವನೆಯನ್ನು “ಹಸಿವು ತಣಿದಿರದ” ಸ್ಥಿತಿ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸುತ್ತದೆ. ಭಾರತಕ್ಕೆ 117 ದೇಶಗಳ ‘ಜಾಗತಿಕ ಹಸಿವಿನ ಇಂಡೆಕ್ಸ್’ ಪಟ್ಟಿಯಲ್ಲಿ ಈಗ ಬಡ 97ನೇ ಸ್ಥಾನ.

avadhi-column-tallur-verti- low res- cropವಾಸ್ತವದಲ್ಲಿ, ದಕ್ಷಿಣ ಏಷ್ಯಾ ಮತ್ತು ಸಬ್ ಸಹಾರನ್ ಆಫ್ರಿಕಾದ ದೇಶಗಳಲ್ಲಿ ಇರುವ ಸಣ್ಣ ಹಿಡುವಳಿದಾರರು ಜಗತ್ತಿನ ಆಹಾರ ಸರಬರಾಜಿನ ಬೆನ್ನೆಲುಬಾಗಿದ್ದು, ಜಗತ್ತಿನಲ್ಲಿರುವ ಒಟ್ಟು ರೈತಾಪಿ ವರ್ಗದಲ್ಲಿ 90% ರೈತರು ಈ ಪ್ರದೇಶಗಳಲ್ಲೇ ಬದುಕುತ್ತಿದ್ದಾರೆ ಮತ್ತು ಅಭಿವ್ರದ್ಧಿಶೀಲ ದೇಶಗಳೂ ಸೇರಿದಂತೆ ಜಗತ್ತಿನ ಜನರ ಹಸಿವನ್ನು ನೀಗುತ್ತಿರುವ 80% ಆಹಾರ ಇಲ್ಲೇ ಬೆಳೆಯಲಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಹಸಿವೆಂಬುದು ಆಹಾರದ ಸರಬರಾಜಿನ ಸಮಸ್ಯೆ ಅಲ್ಲವೇ ಅಲ್ಲ; ಬದಲಾಗಿ ಬಡತನ, ಅರಾಜಕತೆ, ಭೂಮಿ-ನೀರು ಮತ್ತಿತರ ಸಂಪನ್ಮೂಲಗಳ ಒಡೆತನದಲ್ಲಿ ಅಸಮಾನತೆ, ಮಹಿಳೆಯರ ಕುರಿತಾದ ಲಿಂಗತಾರತಮ್ಯಗಳು ಹಸಿವಿನ ಮೂಲ ಕಾರಣ ಎಂಬುದು ಈಗಾಗಲೇ ಅಂಕಿ-ಸಂಖ್ಯೆಗಳ ಮೂಲಕ ಖಚಿತಗೊಂಡಿರುವ ವಿಚಾರ.

ಪರಿಸ್ಥಿತಿ ಹೀಗಿರುವಾಗ, ಜಗತ್ತಿನ ಆಹಾರ ಸುರಕ್ಷತೆಯನ್ನೇ ಬೆರಳೆಣಿಕೆಯ ಕಾರ್ಪೋರೇಟ್ ದೈತ್ಯರ ಕೈಗೆ ಒಪ್ಪಿಸುವ ‘ಸೂಪರ್ ಕಾರ್ಪೋರೇಟೀಕರಣದ’ ಸಂಚೊಂದು ರೂಪುಗೊಳ್ಳುತ್ತಿದೆ. ಜಾಗತಿಕ ಅರ್ಥವ್ಯವಸ್ಥೆಯ ದೊಡ್ಡಣ್ಣರಾದ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ನಿನ ಕಾನೂನು ನಿರ್ಮಾಪಕರು ಜಗತ್ತನ್ನು ಹೊಸದೊಂದು ದುರಂತದಂಚಿಗೆ ದೂಡಲಾರಂಬಿಸಿದ್ದಾರೆ.

ಇತ್ತೀಚೆಗಿನ ತನಕವೂ ಜಗತ್ತಿನಾದ್ಯಂತ ಹತ್ತಾರು ಕಂಪನಿಗಳು ಬೀಜಗಳು ಮತ್ತು ರಾಸಾಯನಿಕಗಳ ಮಾರುಕಟ್ಟೆಯಲ್ಲಿ ತಮ್ಮ ಪಾಲಿಗಾಗಿ ಸೆಣಸಾಡುತ್ತಿದ್ದವು, ಈಗ ನಡೆದಿರುವ ಮೆಗಾ ಮರ್ಜರ್ ಪ್ರಯತ್ನಗಳು ಪೂರ್ಣಗೊಂಡಾಗ ಪರಿಸ್ಥಿತಿ ಏನಾಗಲಿದೆ ಗೊತ್ತೆ?

ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ನಿಗೆ ಸೇರಿದ ಕೇವಲ ಮೂರು ಕಾರ್ಪೋರೇಟ್ ಗಳು,

* ಜಗತ್ತಿನ 60% ಬೀಜಗಳು,

* ಜಗತ್ತಿನ 70% ಆಗುವಷ್ಟು ರಾಸಾಯನಿಕಗಳು ಮತ್ತು ಕೀಟನಾಶಕಗಳು,

* ಹಾಗೂ ಜಗತ್ತಿನ 100% ಜೆನೆಟಿಕಲಿ ಮೊಡಿಫೈಡ್ ಬೀಜಗಳ ಮಾಲಕತ್ವ ಹೊಂದಲಿವೆ.

ಅದು ಹೇಗೆಂದರೆ,

# ಈಗಾಗಲೇ ಜರ್ಮನಿಯ ಜೆನೆಟಿಕ್ ಮಾಲುಗಳ ಮಾರಾಟ ಸಂಸ್ಥೆ ಬಾಯರ್ (BAYER) ಅಮೆರಿಕದ ರಾಸಾಯನಿಕ ಮತ್ತು ಬಯೋಟೆಕ್ ಸಂಸ್ಥೆ ಮಾನ್ಸಾಂಟೊ (MONSANTO) ವನ್ನು 66 ಬಿಲಿಯ ಡಾಲರ್ ಗಳಿಗೆ ತನ್ನ ತೆಕ್ಕಗೆ ಹಾಕಿಕೊಂಡಿದೆ.

# ಅಮೆರಿಕದ ರಾಸಾಯನಿಕಗಳ ಸಂಸ್ಥೆಗಳಾದ ಡುಪಾಂಟ್  (Du PONT) ಮತ್ತು  ಡೋವ್(DOW) ಗಳ ವಿಲೀನದ ಚರ್ಚೆ ನಡೆದಿದೆ.

food-politics# ಸ್ವೀಡನ್ನಿನ ಬೀಜಗಳು ಮತ್ತು ಜೆನೆಟಿಕ್ ಮಾಲುಗಳ ಸಂಸ್ಥೆ ಸಿಂಜೆಂಟಾ (SYNGENTA)  ವನ್ನು ಖರೀದಿಸಲು ಕೆಮ್ ಚೀನಾ (CHEM CHINA)  ಯೋಜಿಸುತ್ತಿದೆ.

ಇದೇ ವೇಳೆಗೆ,  ಜಗತ್ತಿನ ಪ್ರಮುಖ ಕ್ರಷಿ ಯಂತ್ರೋಪಕರಣ ಕಂಪನಿಗಳು ದತ್ತಾಂಶಗಳ ಬಳಕೆ, ರೊಬೊಟಿಕ್ಸ್ ಮತ್ತು ಕ್ರಷಿ ಭೂಮಿಯ ಕಣ್ಗಾಪು ತಂತ್ರಜ್ನಾನಗಳನ್ನು ಸಿದ್ಧಪಡಿಸುತ್ತಿದ್ದು, ಜಗತ್ತಿನ ಕ್ರಷಿ, ಹೊಸದೊಂದು ಕಾರ್ಪೋರೇಟ್ ತಿರುವಿಗೆ ಸಿದ್ಧಗೊಳ್ಳಲಾರಂಭಿಸಿದೆ. ಭಾರತವೂ ತನ್ನ ಕಾರ್ಪೋರೇಟೀಕರಣದ ನೀತಿಯನ್ನು ಸಡಿಲಗೊಳಿಸಿ ಇವರಿಗೆಲ್ಲ ಅವಕಾಶ ಮಾಡಿಕೊಡುವ ಹವಣಿಕೆಯಲ್ಲಿದೆ.

ಈ ರೀತಿಯ ಬೆಳವಣಿಗೆಗಳು ಮೊದಲ ಹೊಡೆತ ಕೊಡಲಿರುವುದೇ, “ನನ್ನ ಹೊಲದಲ್ಲಿ ನಾನೇನು ಬೆಳೆಯಬೇಕು ಎಂಬ ನನ್ನ ಸ್ವಾತಂತ್ರ್ಯಕ್ಕೆ”. ಈ ಹೊಸ ಜಾಗತಿಕ ಬೆಳವಣಿಗೆಗಳ ಫಲವಾಗಿ ಪ್ರಾದೇಶಿಕ ಕ್ರಷಿ ವೈವಿದ್ಯತೆಗಳು ಸಂಪೂರ್ಣವಾಗಿ ಮಾಯ ಆಗಲಿವೆ. (ಇದು ಸುಮಾರಿಗೆ ಇಡಿಯ ಜಗತ್ತು ಕಡ್ಡಾಯವಾಗಿ ಇಂಗ್ಲೀಷಿನಲ್ಲೇ ವ್ಯವಹರಿಸಬೇಕು ಎಂದು ಫರ್ಮಾನು ಹೊರಡಿಸಿದ ಹಾಗೆ!)

world-food

ಇಲ್ಲಿಗೆ, ಸಣ್ಣ ರೈತನ ಕತೆ – ಪಡ್ಚ!

ಕೇವಲ ಸ್ಟಾಟಿಸ್ಟಿಕ್ಸ್ ಆಧಾರದಲ್ಲಿ ಈ ದೇಶದಲ್ಲಿ ಬತ್ತ, ಈ ದೇಶದಲ್ಲಿ ಗೋದಿ, ಇಲ್ಲಿ ಕಬ್ಬು ಎಂದು ಕಂಪನಿಗಳು ಶುರುಹಚ್ಚಿಕೊಳ್ಳಲಿವೆ ಎಂಬ ಆತಂಕ ಎಲ್ಲೆಡೆ ಮನೆಮಾಡುತ್ತಿದೆ. ಇಂತಹದೊಂದು ದಿನ ಎದುರಾದರೆ, ಬತ್ತ ಬೆಳೆಯುವ ನಾನು ನನ್ನದೇ ಮನೆಯ ಗೋದಿ ಚಪಾತಿ ತಿನ್ನುವುದು ಸಾಧ್ಯ ಆಗದು!

© Copyright 2010 CorbisCorporation

ಹೆಚ್ಚಿನ ಓದಿಗಾಗಿ:

ಜಾಗತಿಕ ಹಸಿವಿನ ಇಂಡೆಕ್ಸ್ ಬಗ್ಗೆ ಇತ್ತೀಚಿನ ವರದಿ ಇಲ್ಲಿದೆ: http://www. indiaenvironmentportal.org.in/ files/file/2016%20Global% 20hunger%20index%20Getting% 20to%20zero%20hunger.pdf

Add Comment

Leave a Reply