Quantcast

ಕ್ಲಿಕ್ ಆಯ್ತು ಕವಿತೆ: ಜಗಜನನಿಯ ನಾಟ್ಯ

praveenkumar-goni

ಪ್ರವೀಣಕುಮಾರ್ ಗೋಣಿ

sheರೌದ್ರ ನರ್ತನದ ಭಂಗಿಯಲ್ಲಿ
ರುದ್ರನ ಏರಿ ನಲಿಯುತ್ತಿರುವ
ದೇವಿಯ ಕಂಗಳಲಿ
ಜಗದೊಳಗೆ ತನ್ನ ಸಂತತಿಯ
ಮೇಲಾಗುತ್ತಿರುವ ಶೋಷಣೆಗೆ
ಆಕ್ರೋಶದ ಬೆಂಕಿ ಹೊತ್ತಿ ಉರಿಯುತ್ತಿದೆ .
ಜಗನ್ಮಾತೆ ಎಂದು ಪದಗಳಲ್ಲೇ ಸಿಂಗರಿಸಿ ದೇವಿಯೆಂದು ಸ್ತ್ರೀಯ ಕರೆದು ಅಟ್ಟಕ್ಕೇರಿಸಿ
ಭೋಗದ ಸರಕಾಗಿ ಗುಲಾಮತನದಲ್ಲಿ
ಸೆರೆಯಾಗಿಸಿ ದಾಸಿಯನ್ನಾಗಿಸಿಕೊಂಡು
ನಿರಂತರದಿ ದಾಸ್ಯದ ಗೂಡಲ್ಲಿ
ಕಟ್ಟಿ ಹಾಕಿ ಅಬ್ಬರಿಸುವ ಪುರುಷ
ಪುಂಗವರ ಮೆಟ್ಟಿ ನಿಂತು ಆರ್ಭಟಿಸುತ್ತಿರುವ ಗೌರಿಯ ನಯನಗಳಲ್ಲಿ ನಿಲ್ಲದಂತೆ ಸೆಡುವು ಧುಮ್ಮಿಕ್ಕುತ್ತಿದೆ .

ತ್ಯಾಗದ ಬೆಲೆಯ ಮರೆತು
ಪ್ರೀತಿ ,ವಾತ್ಸಲ್ಯಗಳ ಕಿಮ್ಮತ್ತ ತೊರೆದು
ಕಾಮದ ಕಹಳೆಯ ಮೊಳಗಿಸುತ
ಹುರಿದುಮುಕ್ಕಿ ಹರುಷಪಡುವ
ಭೀಭತ್ಸತೆಗೆ ಬೆಂಕಿಯಿಕ್ಕಲು
ಹಾತೊರೆವಂತೆ ನರ್ತಿಸುತಿಹಳು ದುರ್ಗೆ ನಿಲ್ಲದಂತೆ .

ಹಣೆಯ ಮೇಲಿನ ಕುಂಕುಮದ ಬೊಟ್ಟಲ್ಲಿ
ಹರಡಿದ ಕೇಶರಾಶಿಯಲ್ಲಿ
ಉಗ್ರಗೊಂಡ ನಯನಗಳ ಬೆಳಕಲ್ಲಿ
ಕಾಂತಿಯೊಂದು ಕಂಗೊಳಿಸುತ್ತಿದೆ
ಎಡವಿದ ಮನುಜರ ಸರಿದಾರಿ
ಹಿಡಿಸಲು ಹಾತೊರೆವ ಅಮ್ಮನೊಬ್ಬಳ
ಕುಕ್ಕುಲತೆ ಪರಿ ಪರಿಯಾಗಿ ಹೂವಿನಿಂದ ಹರಿದುಬರುವ ಪರಿಮಳದಂತೆ ಜಗವನ್ನೆಲ್ಲ ತಾಕುತ್ತಿದೆ .

Add Comment

Leave a Reply

%d bloggers like this: