Quantcast

ಕ್ಲಿಕ್ ಆಯ್ತು ಕವಿತೆ: ನಟರಾಣಿ ನಾನು ನಟರಾಜನಲ್ಲ..

ನಾಗೇಶ ಮೈಸೂರು

ನಟರಾಣಿ ನಾನು
ನಟರಾಜನಲ್ಲ
ಪ್ರಳಯವಲ್ಲ ಪ್ರಥಮ
ಪುನರುಜ್ಜೀವನ ಸಂಭ್ರಮ

ಮೆಟ್ಟಿ ನಿಲ್ಲುವೆ ಪುರುಷದ
ಅಹಂಕಾರದ ನಿಮಿತ್ತ
ಸೃಷ್ಟಿಗದೆ ಮೂರ್ತರೂಪು
ತಿರೋಧಾನ ಅನುಗ್ರಹಕೆ

click-aytu-kavite-5ನಡೆದುಂಟು ಯುಗಾಂತರ
ತ್ರಿಕಾರ್ಯಗಳ ಬಡಿಗೆ
ಸ್ಥಿತಿ ಲಯ ಕಾಲ ನಡುವೆ
ಸೃಷ್ಟಿಯಾಗಿ-ಸುತ ಉದ್ಭವ..

ನಾ ಕಾಣದಾನಂತ ಮೊತ್ತ
ಪುರುಷದಾಡಂಬರವಷ್ಟೇ ವ್ಯಕ್ತ
ಅವ್ಯಕ್ತ ತಾನೆ ಶಕ್ತಿಯ ಬುಡ
ನಾನೇ ನೀನಾದ ಸ್ವಯಂವರ..

ಸಾಕು ಮಾಡಿಕೊ ದ್ವಂದ್ವ
ಅರ್ಧನಾರಿ ಪೂರ್ಣನಾರೀಶ್ವರ
ನಾಣ್ಯದೆರಡು ಮುಖ ಕಾಣೆ
ಮಿಕ್ಕೆಲ್ಲ ನಿಗೂಢ ಶಿಲ್ಪದಂತೆ ಕಲ್ಪಿತ..!

ನೀ ಕಂಡ ಬದಿ ನಿನ್ನದು
ಅವ ಕಂಡದ್ದು ಅವನದು
ಅರೆಬರೆ ಎರಡರ ನಡುವಿದ್ದೂ
ಅಸ್ಪಷ್ಟತೆ ಕಾಡುವ ಬದುಕೆ ಸಿದ್ಧ !!

Add Comment

Leave a Reply