Quantcast

ಕ್ಲಿಕ್ ಆಯ್ತು ಕವಿತೆ: ಯಾರಿವನು ಪುರುಷ?

ವಿದಾಯದ ವೈಖರಿ

kusuma-patel
ಕುಸುಮಾ ಪಟೇಲ್ 

ಯಾರಿವನು?
ಪರಶಿವನೋ
ಪರಶುರಾಮನೋ
ಕಾಮನೋ, ಯಾ
ದೇವ, ದಾನವ, ಮಾನವ
ಸಮ್ಮಿಶ್ರನೋ?

she lineartಯಾರಿವನು?
ಪುರುಷ
ಯಾರಿವನು?

ಕಂಚುಕ ತೊಟ್ಟ
ಕಂಚಿನಿಯ ನೃತ್ಯಕ್ಕೆ
ಬೆನ್ನ
ಅಣಿ ಮಾಡಿಕೊಟ್ಟವನು
ಯಾರಿವನು?
ಈ ಮನ್ಮಥನು-

ನೃತ್ತ, ನೃತ್ಯ
ನಾಟ್ಯ, ತಾಂಡವಗಳ
ನಡುವೆ ಬಿಕ್ಕಟ್ಟು
ಕಲರಿಯಿಲ್ಲದ ಕಲರಿಪಯ್ಯಟ್ಟು
ಹೇಳು ನಿರೂಪಕ
ನೀ ಮರ್ಮದ ಗುಟ್ಟು-

ಇಲ್ಲಿದೆ ನಿಮಗಾಗಿಯೇ
ಪ್ರದರ್ಶನದ ಮುಂದಣ
ತಾಲೀಮಿನಲ್ಲಿ
ಸದ್ದಿಲ್ಲದ, ಸಜ್ಜಾಗದ, ರಂಗಮಂಚದ
ನಗ್ನ, ಅಪೂರ್ಣ, ಆಕಾರಗಳ ನಡುವೆ
ಮನಸಿಜನ ಮಾತಿಗೆ ಮರುಳಾದ
ಪುರುಷ, ಪ್ರಕೃತಿಯ
ನಾಟ್ಯದ ಪರಿ
ವಿದಾಯದ ವೈಖರಿ

Add Comment

Leave a Reply

%d bloggers like this: