Quantcast

ಉಮಾ’ಶ್ರೀ’ ಜಯ’ಶ್ರೀ’

gundanna-samudaya

ಸಿ ಕೆ ಗುಂಡಣ್ಣ 

ವೃತ್ತಿ ರಂಗಭೂಮಿ , ಚಲನ ಚಿತ್ರ ರಂಗದ ಇತಿಹಾಸದ ನಾಯಕಿ ನಟಿ  ಬಿ.ಜಯಮ್ಮ. ಇವರು ಕರ್ನಾಟಕ ಕಂಡ ಶ್ರೇಷ್ಠ ವೃತ್ತಿ ಕಂಪನಿಯ ಮಾಲೀಕರು ಹಾಗೂ ಶ್ರೇಷ್ಠ ನಟ, ಗುಬ್ಬಿ ವೀರಣ್ಣ ನವರ ಕುಟುಂಬವೂ ಹೌದು.

ಅವರ ೧೦೦ನೇ ಜನ್ಮ ದಿನದ ಶತಾಬ್ದಿ ಕಾರ್ಯಕ್ರಮಗಳು ನಗರದ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ ೧೪,೧೫ ಮತ್ತು ೧೬ ರ ಅಕ್ಟೋಬರ್ ೨೦೧೬ ರಂದು ನಡೆಯಿತು.

ಅಕ್ಟೋಬರ್ ೧೬ ರಂದು ನಡೆದ ಸಮಾರೋಪ ಸಮಾರಂಭದಲ್ಲಿ “ನವೀನ ಸದಾರಮೆ” ನಾಟಕವನ್ನು ಬಿ.ಜಯಶ್ರೀ (ಗುಬ್ಬಿವೀರಣ್ಣನವರ ಮೊಮ್ಮಗಳು) ಅವರು ನಿರ್ದೇಶಿಸಿ, ಗುಬ್ಬಿವೀರಣ್ಣ ನವರು ನಟಿಸುತ್ತದ್ದ ಕಳ್ಳ ನ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದರು. ಇವರ ಜೊತೆ ಉಮಾಶ್ರೀ ಸದಾರಮೆ ಪಾತ್ರದಲ್ಲಿ ಆ ಪಾತ್ರದ ಗಾಯನ ಮತ್ತು ಅಭಿನಯ ಎರಡನ್ನೂ ಚಿರಕಾಲ ನೆನಪಿನಲ್ಲಿಡುವಂತೆ ಅಭಿನಯಿಸಿದರು.

ಇವರುಗಳೊಟ್ಟಿಗೆ, ರಾಜನಾಗಿ ರಮೇಶ್ ಪಂಡಿತ್, ಕುಂಟಿಯಾಗಿ ಲಕ್ಷೀ ಭಾಗವತರ್, ಭಟನಾಗಿ ಪ್ರಕಾಶ್ ಇವರುಗಳು ಅಭಿನಯಿಸಿದರು. ಲಕ್ಷೀ ಭಾಗವತರ್ ಅವರ ಕಂಠ ಸಿರಿ, ಜಯಶ್ರೀ ಅವರ ಕಂಠದಂತೆಯೇ ಸಾಮ್ಯತೆ ಇದ್ದುದು ಅದ್ಭುತ.
ಬಹಳ ವಿಶೇಷವಾಗಿ, ಕಳ್ಳ ಮತ್ತು ಕುಂಟಿಯ ಪಾತ್ರಗಳ ಪ್ರಸಾಧನವನ್ನು ರಾಮಕೃಷ್ಣ ಬೆಳ್ತೂರ್ ಅವರು ಚೆನ್ನಾಗಿ ಮಾಡಿದ್ದರು.

ವೃತ್ತಿ ಕಂಪನಿಯ ಸಂಗೀತವನ್ನು ೮೬ ವರ್ಷಗಳ ಅನುಭಾವಿ ನಟ, ಗಾಯಕ ಪರಮಶಿವನ್ ಅವರು ನಿರ್ದೇಶಿಸಿದರು.
ಬೆಳಕು ವಿನ್ಯಾಸ, ಜಾರು ಪರದೆ ಇವುಗಳು ವೃತ್ತಿ ಕಂಪನಿಯ ಘಮಲನ್ನು ಪ್ರೇಕ್ಷಕರಿಗೆ ನೀಡಿತ್ತು. ಒಟ್ಟಾರೆ, ಈ ನಾಟಕ ಪ್ರದರ್ಶನ, ಈ ದಶಕದ ಅತ್ತುತ್ತಮ ಪ್ರಯೋಗ ಎಂದು ಹೇಳಬಹುದು.

ಪ್ರದರ್ಶನದ ಒಂದು ತುಣುಕು , ನಿಮಗಾಗಿ..

[fbvideo link=”https://www.facebook.com/gundanna.chickmagalur/videos/1497224413638844/” width=”500″ height=”400″ onlyvideo=”1″]

Add Comment

Leave a Reply

%d bloggers like this: