Quantcast

ಕ್ಲಿಕ್ ಆಯ್ತು ಕವಿತೆ : ತನ್ನಂತಾನೆ ಸೆಲ್ಫಿ..

ಕಾಲದೇಶಗಳಾಚೆಯ ಉತ್ಪನನ

%e0%b2%a8%e0%b2%be%e0%b2%97%e0%b3%87%e0%b2%b6-%e0%b2%ae%e0%b3%88%e0%b2%b8%e0%b3%82%e0%b2%b0%e0%b3%81

ನಾಗೇಶ ಮೈಸೂರು

ಇದು ಅಟ್ಲಾಂಟಿಸ್ ಹರಪ್ಪ ಮೆಹಂಜೋದಾರೊ
ಫೆರೋ ಮಾಯನ್ನರಾಚೆಯ ಕಾಲದ ಚಿತ್ರಕ
ಇತಿಹಾಸ ಪುರಾಣ ಕಾಲಕ್ರಮೇಣ ದರ್ಶಕ
ತನ್ನಂತಾನೆ ಸೆಲ್ಫಿ ತೆಗೆದುಕೊಂಡ ಬಗೆ ಹೀಗೆ..

she-cameraಮೋಸ ಹೋಗಬಾರದು ಮಣ್ಣು ಹಿಡಿದ ಬಗೆಗೆ
ಕೊಳೆತು ಮುದುಡಿ ನಾರಿದಂತೆ ಇರುವಿಕೆ
ಮಣ್ಣಾಗಿ ಹೋದ ಚರಿತ್ರೆಯೆಲ್ಲ ಗುಪ್ತಗಾಮಿನಿ
ಅಕ್ಷರ ಚಿತ್ತಾರಗಳಾಗಿಹೋಗಿವೆ ಅದರಲ್ಲಿ..
ಅಲ್ಲೆಲ್ಲಿತ್ತು ಆಧುನಿಕ ಕ್ಯಾಮರಾ ಸವಲತ್ತು ?
ಮೂಗು ಮುರಿಯುವುದು ಬೇಡ ಅವಹೇಳನದೆ..
ಪುನರಾವರ್ತಿಸಿದೆ ಕಾಲದೇಶ ಅವಕಾಶ
ಮರುಕಳಿಸುತದನದನೇ ಪದೇ ಪದೇ
ಅದೇ ಕೃತ ತೇತ್ರಾ ದ್ವಾಪರ ಕಲಿಯುಗ
ಮತ್ತದೇ ರಾಮ ರಾವಣ ಕೃಷ್ಣ ಕಂಸ ಅವತಾರ
ಮತ್ತವೆ ಆಯುಧಗಳಿತ್ತೆಂದ ಮೇಲೆ ಮತ್ತಿನ್ನೇನು ?

ಮಹಾಯುದ್ಧಗಳಾಗದ ಕಾಲಮಾನವಿಲ್ಲೆಲ್ಲಿತ್ತು?
ಅದ ಸೆರೆ ಹಿಡಿಯದ ಕ್ಯಾಮರಗಳೂ ಅಷ್ಟೆ;
ವಿದುರನ ಕಣ್ಣೊ, ಮಸೂರದ ನಿಸ್ತೇಜ ದಿಟ್ಟಿಯೊ
ಚಿತ್ರಕಾರನ ಕುಂಚವೋ, ಶಿಲ್ಪಿಯ ಉಳಿಯೊ
ಕಸುವಿನ ಜತೆ ಅಸುವನ್ನೆ ಕೆತ್ತಿಬಿಡುವ ಕೋವಿಯೊ
ಏನೊ ಒಂದು ಅಸ್ತ್ರ ಸೆರೆ ಹಿಡಿದಿದ್ದು ಮಾತ್ರ ಸತ್ಯ..
ಇದು ಅದರ ಪಳೆಯುಳಿಕೆ, ಡೈನೊಸಾರ ಬಳಗ..

ಇದೇನೀಗ ಕೈಗೆ ಬಂದ ಇತಿಹಾಸದ ತುಣುಕೊ
ಪ್ರಳಯಾಂತಕ ತಾಂಡವ ನೃತ್ಯದ ಪಲುಕೊ
ಚಿತ್ರ ತೆಗೆವ ಸರಕೋ, ಚಿತ್ತ ಭ್ರಮಿಸುವ ಕೆಣಕೋ
ದುರಸ್ತಿಗೆ ನಿಂತ ವಯೋವೃದ್ಧನ ದಿರಿಸು
ತೊಟ್ಟು ನಿಂತಿದೆ ತನ್ನ ಅಂತ್ಯಕ್ರಿಯೆಗೆಂಬಂತೆ
ಸೋಜಿಗದ ನೋಟಗಳಿಗೆ ನಾಚಿ ಮುದುಡುತ್ತ..

Add Comment

Leave a Reply