Quantcast

‘ದಕ್ಷಿಣಾಯನ’ಕ್ಕೆ ಬನ್ನಿ

ದಕ್ಷಿಣಾಯನ

ನವೆಂಬರ್ 18, 19, 20 ರಂದು ಮೂರು ದಿನಗಳ “ಅಭಿವ್ಯಕ್ತಿ-ರಾಷ್ಟ್ರೀಯ ಸಮಾವೇಶ” ವನ್ನು ಗೋವಾದಲ್ಲಿ ಹಮ್ಮಿಕೊಂಡಿದೆ.

ರವೀಂದ್ರ ಭವನ ಮಾರ್ಗೋವಾದಲ್ಲಿ ಸಮಾವೇಶ ನಡೆಯುವುದು. ಮೊದಲ ದಿನ ‘ಅಭಿವ್ಯಕ್ತಿ ಸಂಕಲ್ಪ ಜಾಥಾ’ ನಡೆಯುವುದು. ಪಂಜಾಬಿನ ಲೇಖಕ ಆತ್ಮಜೀತ ಸಿಂಗ್ ಜಾಥಾ ಚಾಲನೆ ಮಾಡುವರು. ಡಾ. ಹಮೀದ್ ದಾಭೋಲ್ಕರ್, ಮೇಘನಾ ಪನ್ಸಾರೆ, ಶ್ರೀವಿಜಯ ಕಲಬುರ್ಗಿ, ಡಾ. ಗಣೇಶ್ ದೇವಿ ಕರ್ನಾಟಕದ ಪ್ರಮುಖ ಲೇಖಕರು ಪಾಲ್ಗೊಳ್ಳವರು.

protestರಾಷ್ಟ್ರೀಯವಾದ ದೇಶಭಕ್ತಿ ಮಾನವೀಯತೆ, ಅಭಿವೃದ್ಧಿ ಪರಿಕಲ್ಪನೆಗಳು, ಸಂಸ್ಕೃತಿ – ವಿಜ್ಞಾನ, ಕೋಮುವಾದ ಮತ್ತು ಜನ ಚಳವಳಿ, ಬಂದೂಕು ಹಿಂದಿನ ಕಾಶ್ಮೀರ, ಕೋಮುವಾದ ವಿರೋಧಿ ಕ್ರಿಯಾ ಯೋಜನೆಗಳು, ಕ್ರಾಸ್ ರೋಡಿನ ಭಾರತ, ಮಾಧ್ಯಮ : ಸ್ವಾತಂತ್ರ್ಯ – ಒಳನೋಟಗಳು, ಭಾರತೀಯ ಕಲೆ, ಸಿನಿಮಾ ಜಾನಪದದಲ್ಲಿ ಪುರಾಣ ಮತ್ತು ಸಾಮಾಜಿಕ ಆತ್ಮಸಾಕ್ಷಿಗಳು, ದಲಿತರ ಸವಾಲುಗಳು ಮತ್ತು ಎದುರುಗೊಳ್ಳುವ ಬಗೆಗಳು ಈ ಕುರಿತು ಪ್ಯಾನೆಲ್ ಚರ್ಚೆಗಳು ನಡೆಯಲಿವೆ.

ಸರ್ವ ಭಾಷಾ ಸಂವಾದ ಮತ್ತು ಬಹುಭಾಷಾ ಕವಿಗೋಷ್ಠಿ ಕೂಡ ಇವೆ.

ಪೆರುಮಾಳ ಮುರುಗನ್, ಕೆ ಸಚ್ಚಿದಾನಂದನ್, ಲೀಲಾ ಸ್ಯಾಮ್ಸನ್, ಬೇಜ್ವಾಡ್ ವಿಲ್ಸನ್ ಅಮೃತ ಕಾಸಾರ್, ಸತ್ಯೇಂದ್ರ ಸೋನಾರ್, ಯೋಗೇಂದ್ರ ಯಾದವ್, ರಾಜದೀಪ ಸರ್ದೇಸಾಯಿ, ಪ್ರಶಾಂತ್ ಭೂಷಣ್ , ಚಮನಲಾಲ್, ಜಿಗ್ನೇಶ್ ಮೇವಾನಿ, ಡಾ. ಕುಮಾರ್ ಸಪ್ತರ್ಷಿ, ಶಫೀಕ್ ಶೇಖ್, ಸುಬೋಧ್ ಕೆರಕರ್, ಆನಂದ ಪಟವರ್ಧನ್, ನಿಖೀಲ್ ವಾಗ್ಳೆ, ಆನಂದ ಕರಂಧಿಕರ್ ಮೊದಲಾದ ನೂರಾರು ಲೇಖಕರು ಚಿಂತಕರು ಸಮಾಜ ವಿಜ್ಞಾನಿಗಳು ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದಿಂದಲೂ ಭಾಗವಹಿಸಲು ಇಚ್ಚಿಸುವವರು ಈ ತಿಂಗಳ 25 ರ ಒಳಗೆ ತಮ್ಮ ಹೆಸರನ್ನು ನೊಂದಾಯಿಸಬೇಕು. ಪ್ರತಿನಿಧಿ ಶುಲ್ಕ 1 ಸಾವಿರ ರೂ ಗಳು. ಪ್ರಯಾಣ ವೆಚ್ಚ ಸೇರಿಲ್ಲ

ಸಂಪರ್ಕ
ಬಸೂ (ಬಸವರಾಜ ಸೂಳಿಭಾವಿ)
9480286844

Add Comment

Leave a Reply