Quantcast

‘ಚೌಕಾಭಾರ’ಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ

raghu-shivamogga-director-chouka-bara2015 ನೇ ವರ್ಷದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಮೆ. ಸತೀಸ್ ಪಿಕ್ಚರ್ ಹೌಸ್ , ಬೆಂಗಳೂರು ಸಂಸ್ಥೆ ನಿರ್ಮಿಸಿದ್ದ “ಚೌಕಾಭಾರ” ಕಿರುಚಿತ್ರವು ಭಾಜನವಾಗಿದೆ.

ಪ್ರಶಸ್ತಿಯು ಐವತ್ತು ಸಾವಿರ ರೂ.ಗಳ ನಗದು ಬಹುಮಾನ ಒಳಗೊಂಡಿದೆ.

2015 ನೇ ವರ್ಷದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಆಯ್ಕೆಗಾಗಿ ಕಿರುಚಿತ್ರ ನಿರ್ದೇಶಕಿ ರೇಖಾರಾಣಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಪತ್ರಕರ್ತ ಬಾ.ನಾ.ಸುಬ್ರಮಣ್ಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರು ( ಚಲನಚಿತ್ರ ) ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದರು.
rukkojitouch-screen-book2014 ನೇ ವರ್ಷದ ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ‘ಟಚ್ ಸ್ಕ್ರೀನ್’ ಪುಸ್ತಕ ಮತ್ತು 2015 ನೇ ವರ್ಷದ ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ‘ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆ’ ಪುಸ್ತಕವು ಭಾಜನವಾಗಿದೆ.

ಪ್ರಶಸ್ತಿಯು, ಲೇಖಕರು ಮತ್ತು ಪ್ರಕಾಶಕರಿಗೆ ತಲಾ ಇಪ್ಪತ್ತು ಸಾವಿರ ರೂ.ಗಳ ನಗದು ಬಹುಮಾನ ಒಳಗೊಂಡಿದೆ.

2014 ಮತ್ತು 2015 ನೇ ವರ್ಷದ ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.

ಪತ್ರಕರ್ತೆ ಡಾ. ಯು.ಬಿ.ರಾಜಲಕ್ಷ್ಮಿ ಮತ್ತು ಪತ್ರಕರ್ತ ಚ.ಹ. ರಘುನಾಥ್ ಇವರು ಸಮಿತಿಯ ಸದಸ್ಯರಾಗಿದ್ದರು.

Add Comment

Leave a Reply