Quantcast

ವಿಜಯನಗರ ಬಿಂಬ ಡಿಪ್ಲೊಮಾ ಸಂಭ್ರಮ

ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಹಿರಿಯರ ವಿಭಾಗದ ರಂಗಭೂಮಿ ಡಿಪ್ಲೊಮಾಗೆ ಇದೀಗ 5 ನೇ ವಷ೯ಡಾ ಸಂಭ್ರಮ. 16 ವರ್ಷ ಮೇಲ್ಪಟ್ಟ ರಂಗಾಸಕ್ತರು ಈ ಡಿಪ್ಲೊಮಾಗೆ ಸೇರಬಹುದು.

ನಾಲ್ಕು ವಷ೯ಕ್ಕೆ ನಾಲ್ಕು ಯಶಸ್ವಿ ರಂಗಪ್ರಯೋಗಗಳನ್ನು ರಂಗಕ್ಕೆ ನೀಡಿದೆ. ಆ ರಂಗ ಪ್ರಯೋಗಗಳು ನಾಡಿನೆಲ್ಲೆಡೆ ಹಾಗೂ ಹೊರ ರಾಜ್ಯಗಳಲ್ಲಿ ಅನೇಕ ಮರುಪ್ರದಶ೯ನಗಳನ್ನು ಕಂಡಿದೆ. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ .

ಇಷ್ಟೇ ಅಲ್ಲದೆ ನಮ್ಮ ವಿದ್ಯಾಥಿ೯ಗಳು ಅನೇಕ ಬೀದಿ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ತಮ್ಮದೇ ತಂಡ ಕಟ್ಟಿಕೊ೦ಡು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಅಲ್ಲದೆ ಹಲವಾರು ಶಾಲೆಗಳಲ್ಲಿ ರಂಗೆ ಶಿಕ್ಷಕರಾಗಿ ದುಡಿಯುತ್ತ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ನಾಲ್ಕು ವಷ೯ಗಳಲ್ಲಿ ನಮ್ಮ ಕೇಂದ್ರವು ಅನೇಕ ನಟರನ್ನು ಅಲ್ಲದೆ ಅನೇಕ ನಾಟಕಕಾರರನ್ನು , ನಿದೇ೯ಶಕರನ್ನು ರಂಗಭೂಮಿಗೆ ನೀಡಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ಈ ಬಾರಿ ಹಿರಿಯರ ವಿಭಾಗ 5 ನೇ ವಷ೯ಕೆ ಕಾಲಿಟ್ಟಿದೆ. ರಂಗ ತರಬೇತಿಯ ಜೊತೆಗೆ ಅನೇಕ ನಾಟಕಗಳನ್ನು ರಂಗಕ್ಕೆ ತರುವುದು, ನಾಟಕೋತ್ಸವ, ಕಾಯಾ೯ಗಾರ, ಕಮ್ಮಟ, ವಿಚಾರ ಸಂಕಿರಣಗಳನ್ನು ಆಯೋಜಿಸಿ 5ನೇ ವಷ೯ವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಿದ್ದೇವೆ.

ಈ ನವೆಂಬರ್ 1, 2016 ರಿಂದ ಡಿಪ್ಲೊಮಾ ದ ತರಗತಿಗಳು ಪ್ರಾರಂಭವಾಗಲಿದೆ . ರಂಗಾಸಕ್ತರು ದಾಖಲಾತಿಗಾಗಿ 080-23300967 ಸಂಪಕಿ೯ಸಬಹುದು. ಮೊದಲು ಬಂದವರಿಗೆ ಆದ್ಯತೆ .

sankanatti-chandri-vijayanagara-bimba

Add Comment

Leave a Reply

%d bloggers like this: