Quantcast

ಕ್ಲಿಕ್ ಆಯ್ತು ಕವಿತೆ: ಯಾಕೆಂದರೆ ಕ್ಯಾಮರಾ ಕಣ್ಣಿದೆ

ತೆರೆದಷ್ಟು ಪುಟಗಳು ಕ್ಯಾಮರಾ ಕಣ್ಣಿಗೆ

nagaraj-huded

ನಾಗರಾಜ ಎಂ ಹುಡೇದ

ನೆನಪುಗಳು ಮಾಸಿಲ್ಲ
ಹಸಿರು ಹುಲ್ಲಂತೆ ನಳನಳಿಸುತ್ತಿದೆ.
ಯಾರ ಕಥೆ ಹೇಳಲಿ?
ಒಂದೇ ಚಿತ್ರದಲ್ಲಿ
ನೂರು ಕಥೆ, ನೂರು ಪುಟ
ಇದು ನನ್ನದೂ.

ಗುಲಾಬಿ ಹೂವಿನದು ಪ್ರೇಮ ಕವನ
ನಿಮ್ಮದು ಹೋರಾಟದ ಕವನ
ನನ್ನದು ವ್ಯಥೆಯ ಕವನ.
ಇತಿಹಾಸದ ಭವನ
ತೆರೆದಷ್ಟು ಪುಟಗಳು
ಕ್ಯಾಮರಾ ಕಣ್ಣಿಗೆ.

ಆಕಾಶದಂತೆ ಅನಂತ
ದುರ್ಬೀನು ಹಾಕಿದರೆ
ಮುಗಿಲಾರದ ಚಿತ್ರಗಳು
ತಮ್ಮಷ್ಟಕ್ಕೆ ತಾವೇ ಮಾತಾಡುತ್ತವೆ.
ತಾಳ ತಪ್ಪದೇ ನರ್ತಿಸುತ್ತವೆ
ಯಾಕೆಂದರೆ ಕ್ಯಾಮರಾ ಕಣ್ಣಿದೆ.
ಈಗ ಯಾರೋ ನನ್ನದೆ ಚಿತ್ರವನ್ನು
ಹಾಡಾಗಿಸಿದ್ದಾರೆ.
ಧನ್ಯವಾದವನ್ನೂ ಹೇಳಿದ್ದಾರೆ.

Add Comment

Leave a Reply