Quantcast

ಕ್ಲಿಕ್ ಆಯ್ತು ಕವಿತೆ: ನನ್ನಲ್ಲಿ ಬೆಳಕಿಲ್ಲ

nagaraj-alur

ನಾಗ್

ಅರರೆ..

ಯಾರದು,
ಮಣ್ಣಲ್ಲಿ ಮಣ್ಣಾಗಲು
ಚಿರನಿದ್ರೆಗೆ ಜಾರಿದ ನನ್ನ ಎಚ್ಚರಿಸಿದ್ದು..
ನನ್ನ ಚಿತ್ರ ಕ್ಲಿಕ್ಕಿಸಿದ್ದು..?
cameraಶೀತಲ ಸಮರದ ಸಮಯದಲ್ಲಿ,
ಪೂರ್ವ ಜರ್ಮನಿಯಲ್ಲಿ ಜನಿಸಿ
ಯಾವ ಯೋಧನ ಬೆನ್ನೇರಿದ್ದೆ?
ಅಥವ ಯಾವ ವಿಲಾಸಿಯ ಕೈ ಸೇರಿದ್ದೆ?
ನನಗದಾವುದರ ಅರಿವಿಲ್ಲ..

ದಶಕಗಳ ಕಾಲ ಓರ್ಗಾನ್‌ನ ಬೆಟ್ಟದಲ್ಲಿ
ಹುದುಗಿದ್ದೆ..
ಯಾರ ಎದೆಗೆ ಗುಂಡು ತಗುಲಿ?
ಯಾರ ಕೈ ಜಾರಿ?
ನನಗದಾವುದರ ನೆನಪಿಲ್ಲ..

ಯಾರೋ ಚಾರಣಿಗರ,
ಅಚ್ಚರಿಗೆ,
ಕುತೂಹಲಕ್ಕೆ ನಾ ಸಿಲುಕಿ..
ಮೈ ದವಡಿ ಎಚ್ಚರಗೊಂಡಿದ್ದೇನೆ..
ನನ್ನೊಳಗಿದ್ದ
ನೆನಪುಗಳು, ನಶಿಸಿವೆಯಂತೆ
ಯಾವ ಕುರುಹೂ ಉಳಿದಿಲ್ಲ..

ಪ್ರಾಯಶಃ ಯಾವುದೋ
ವಸ್ತು ಸಂಗ್ರಹಾಲಯದ
ಕಪಾಟು ಸೇರಲಿದ್ದೇನೆ..
ನಾ ಕಂಡಿದ್ದನ್ನು,
ನಿನಗೆ ತೋರಲೀಗ
ನನ್ನಲ್ಲಿ ಬೆಳಕಿಲ್ಲ..

Add Comment

Leave a Reply