Quantcast

ಒಂದೈಡಿ ಕಾರ್ಡು..

rajakumar-madivalar

ರಾಜಕುಮಾರ್ ಮಡಿವಾಳರ 

ಮೊನ್ನೆ ಅವಳು ಸಾರಾ
PUC ಪಾಸಾಗುವವರೆಗೆ
ಅವಳ ಪಾದದ ಸೈಜು
ನನಗೆ ಗೊತ್ತಿತ್ತು ಆಗಾಗ
ಚಪ್ಪಲಿ ತಂದು ಕೊಡುತ್ತಿದ್ದೆ

deathರಸೂಲ್ ಚಾಚಾನ ಮಗ
ಅವನಂಗಿಯ ಸೈಜೂ ನನಗೆ
ಗೊತ್ತು ರಂಜಾನ್ “ಸುರಕುಂಭ”
ನಮ್ಮ ಮನೆಗೆ ಕಳಿಸಾದಾಗೆಲ್ಲ
ಒಂದು ಹೊಸ ಅಂಗಿ ಈಗಲೂ

ವಾರದ ಹಿಂದಿನಿಂದ ಕೆಟ್ಟ ಕನಸು
ಮೈತುಂಬ ಮೊನಚು ಬಾಣ
ಮಾರನೇ ದಿನ ಎದೆ ಹೊಕ್ಕ ಗುಂಡು
ಒಂದು ದಿನ ICU ನಲ್ಲಿ ನಾನು
I am sorry ಕೈ ಚೆಲ್ಲಿದ ವೈದ್ಯರ ಗುಂಪು!

ಹೀಗೆಲ್ಲ ಹೆಣವಾದ ದಿನ ರಸೂಲ್
ಸಾರಾ ಚಿಕ್ಕಪ್ಪ ಟೋನಿ ಆಟೋ ಶಿವು
ಎಲ್ಲ ಬರುತ್ತಾರೆ ನನ್ನ ಹೆಣದ ಸುತ್ತ
ಸಣ್ಣ ಮುಖ ಮಾಡಿ ನಿಲ್ಲುತ್ತಾರೆ ಅಳುತ್ತ
ದುಃಖಕ್ಕಿಂತ ಅವರಿಗೆ ಒಂದೇ ದಿಗಿಲು

ಇಂವಾ ಯಾತರಾಂವಾ? ಕ್ಯಾ ಕರನಾ ದಫನ್?
ಏನ್ ಬೆಂಕಿಗ್ ಹಾಕೂದಾ? ಯಾ ಖ್ಹುದಾ!
ಕನಸು ಮುಗಿದು ಕಣ್ತೆರೆಯುತ್ತೇನೆ ನಿಧಾನ
ಪರ್ಸ್ ತೆಗೆದು ನೋಡುತ್ತೇನೆ ಒಂದೈಡಿ ಕಾರ್ಡು
ಆಸ್ಪತ್ರೆಯವರು ಕೊಟ್ಟಿದ್ದು ದೇಹ ದಾನ
-ದ್ದು. ಸಮಾಧಾನ!

 

One Response

  1. Sangeeta
    October 27, 2016

Add Comment

Leave a Reply