Quantcast

ಅವರು ನಮ್ಮ ಪ್ರೀತಿಯ ಅಜ್ಜ..

n-r-vishukumar

ಎನ್ ಆರ್ ವಿಶುಕುಮಾರ್ 

ಅಜ್ಜ..

ಅವರು ನಮ್ಮ ಪ್ರೀತಿಯ ಅಜ್ಜ.

ಕೇವಲ ಇಂಗ್ಲಿಷ್ ಮಕ್ಕಳ ಮನೋಲೋಕದಲ್ಲಿ ಮಾತ್ರ ಅಡ್ಡಾಡುತ್ತಿದ್ದ ಮಾಂಡ್ರೇಕ್, ಬಾಂಡ್ ಲೇಡಿ ಮಾಡೆಸ್ಟಿ ಬ್ಲೆಸ್ , ಫ್ಯಾಂಟಮ್, ಡಾಬು ಇತ್ಯಾದಿ ಕಾಮಿಕ್ ಪಾತ್ರಗಳನ್ನು ಕನ್ನಡದ ಮಕ್ಕಳ ಮನೋಲೋಕಕ್ಕೂ ಕರೆ ತಂದು ಪರಿಚಯ ಮಾಡಿಸಿ ಕೊಟ್ಟ ಮಾಂತ್ರಿಕ.

m-b-singh3ಬ್ಲಿಟ್ಜ್, ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ, ಫೆಮಿನಾ ,ಇತ್ಯಾದಿ ಇಂಗ್ಲಿಷ್ ನಿಯತಕಾಲಿಕೆ ಪತ್ರಿಕೆಗಳ ಮಾದರಿಯಲ್ಲಿ ಕನ್ನಡಕ್ಕೂ ಸಹ ಸುಧಾ , ಮಯೂರ ಇಂತಹ ನಿಯತಕಾಲಿಕ ಪತ್ರಿಕೆಗಳನ್ನು ರೂಪಿಸಿ ಕನ್ನಡಿಗರ ಮನೆ ಮನಗಳಿಗೆ ತಲುಪಿಸಿದ ರೂವಾರಿ.

ಕನ್ನಡ ಸಾಹಿತ್ಯ ಲೋಕಕ್ಕೆ, ರಂಗಭೂಮಿಗೆ, ಕನ್ನಡ ಬೆಳ್ಳಿ ತೆರೆಗೆ ಹಲವಾರು ಹೊಸ ಪ್ರತಿಭೆಗಳನ್ನು ಪರಿಚಯಿಸಿ ಪ್ರೋತ್ಸಾಹಿಸಿದ ಕನ್ನಡ ಪತ್ರಿಕೋದ್ಯಮದ ಪರಿಚಾರಕರು.

ಹಳ್ಳಿಗಾಡಿನಿಂದ ಬಂದು ಬೆಂಗಳೂರಿನ ಬೆರಗಿಗೆ ಬೆದರಿ ಕಕ್ಕಾಬಿಕ್ಕಿಯಾಗಿದ್ದ ಪತ್ರಿಕೋದ್ಯಮದ ಹಲವಾರು ಹಳ್ಳಿ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತವರು.

ಅವರಿಗೆ ಅರಿವಿಲ್ಲದೆ ತುಕ್ಕು ಹಿಡಿದ ಕಬ್ಬಿಣದಂತಿದ್ದ ಯುವ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು, ಹೀಗೆ ಹಲವು ರಂಗಗಳ ಅಭಿಜಾತ ಪ್ರತಿಭೆಗಳಿಗೆ ಪ್ರೋತ್ಸಾಹದ ಕುಲುಮೆಯಲ್ಲಿ ಕಾಯಿಸಿ ಹೊಸ ರೂಪು ನೀಡಿ ನಾಡಿಗೆ ಪರಿಚಯಿಸಿದ ಸಹೃದಯಿ ಸಂಪಾದಕ.

ಹೀಗೆ ಹೇಳುತ್ತಾ ಹೋದರೆ ಅದೊಂದು ವಿಶೇಷಣಗಳ ಧಾರವಾಹಿ ಸರಣಿ ಆಗುತ್ತದೆ.
ಅಂತಹ ಅಜ್ಜ ನಮ್ಮ ನಿಮ್ಮೆಲ್ಲರ ಪ್ರೀತಿಯ ಎಂ. ಬಿ . ಸಿಂಗ್ ಮೊನ್ನೆ ಮೊನ್ನೆಯಷ್ಟೇ ನಮ್ಮನ್ನೆಲ್ಲ ಆಗಲಿ ಹೋದರು.

2 Comments

  1. Anonymous
    October 31, 2016
  2. H.r. Sujatha
    October 31, 2016

Add Comment

Leave a Reply