Quantcast

ಕ್ಲಿಕ್ ಆಯ್ತು ಕವಿತೆ: ಬಾಲ್ಯಕೆ ಬೆಂಕಿ ಬಿದ್ದಿದೆ!

shivadasಶಿವದಾಸ್

ವರ್ಷ ಹರುಷದಿ ಸುರಿ ಸುರಿದಂತೆ
ಹೊಳೆ ಹರಿ ಹರಿದು ನಗುವಾಗ
ದೋಣಿಯಾಟಕೆ ಕೈ ಬೀಸಿ ಕರೆದಂತೆ
ಹಾಳೆ ಹಿಡಿದು ಓಡ್ತಿದ್ದೆ ಅಕ್ಕನ ಜೊತೆಯಾಗ.

ಮಳೆಯಿಲ್ಲ ನೀರಿಲ್ಲ ಸಂಜೆ ಸೂರ್ಯ ಸುಡುವಾಗ
ಕೆಂಬಣ್ಣವೇ ಬೆಂಕಿಯಾಯಿತೆ!?
ತಪ್ಪಿಯೊಮ್ಮೆ ಸುರಿದರೆ ಜಲಧಾರೆ
ಒಳಗಿಂದಷ್ಟೇ ಕೇಕೆ! ಬಾಗಿಲಿಗೆ ಬೀಗ!

ಹರಿದು ಮುರಿದು ಮೇಲೆ ಕೆಳಗೆ ಮಡಚಿ
ಮಾಡುವ ಪೇಪರ್ ದೋಣಿ ಮರೆಸಿಬಿಟ್ಟಳು ಅಮ್ಮ
ಓದು ಬರಹ ಲೆಕ್ಕಕೆ ಕೂರಿಸಿಬಿಟ್ಟಳು ಚೆಚ್ಚಿ
ಬಾಲ್ಯದ ದೋಣಿಗೆ ಬೆಂಕಿಯಚ್ಚಿ ನೆನಪ ಕಹಿ ಮಾಡಿ!

Add Comment

Leave a Reply