Quantcast

BIG BREAKING NEWS: ‘ಟೈಮ್ಸ್ ನೌ’ನಿಂದ ಅರ್ನಬ್ ಹೊರಕ್ಕೆ..

download-5

‘ಟೈಮ್ಸ್ ನೌ’ನಿಂದ ಅರ್ನಬ್ ಹೊರಕ್ಕೆ..

ಹೌದು, ಹಾಗಂತ ಟೈಮ್ಸ್ ನೌ ನಿಂದ ಹೊರಬಿದ್ದಿರುವ ಸುದ್ದಿ ತಿಳಿಸಿದೆ.

ಇಂದು ಸಂಜೆ ನಡೆದ ಸಂಪಾದಕೀಯ ಸಭೆಯಲ್ಲಿ ಅರ್ನಾಬ್ ತಾನು ಪ್ರಧಾನ ಸಂಪಾದಕ ಹಾಗೂ ಸುದ್ದಿ ವಿಭಾಗದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ತಾವು ಟೆಲಿವಿಷನ್ ಪತ್ರಿಕೋದ್ಯಮದಲ್ಲೇ ಮುಂದುವರಿಯುವುದಾಗಿ ಸಹಾ ಅವರು ತಿಳಿಸಿದ್ದಾರೆ ಎಂದು ‘ಅವಧಿ’ ಯ ಮೂಲಗಳು ಖಚಿತಪಡಿಸಿವೆ

ಟೆಲಿವಿಷನ್ ಪತ್ರಿಕೋದ್ಯಮದ ವಾಚಾಳಿ, ಬಾಯಾಳಿ ಎಂದೆಲ್ಲಾ ಹೆಸರಾಗಿದ್ದ- ದ್ವೇಷ, ಪ್ರೀತಿ ಎರಡನ್ನೂ ದೇಶಾದ್ಯಂತ ಗಳಿಸಿದ್ದ ಅರ್ನಾಬ್ ಅವರ ಈ ತೀರ್ಮಾನ ಹಲವರಿಗೆ ‘ಷಾಕ್’

ಖಚಿತವಾಗದ ಮೂಲಗಳ ಪ್ರಕಾರ ಅರ್ನಾಬ್

ರಾಜೀವ್ ಚಂದ್ರಶೇಖರ್ ಅವರ ಜೊತೆ ಸೇರಿ

ಹೊಸ ಚಾನಲ್ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ 

ಟೆಲಿವಿಷನ್ ಪತ್ರಿಕೋದ್ಯಮಕ್ಕೆ ಹೊಸ ವ್ಯಾಕರಣ ಬರೆದದ್ದು, ಅದು ಯಶಸ್ಸು ತಂದುಕೊಡುತ್ತದೆ ಎನ್ನುವುದನ್ನು ಸಾಬೀತಪಡಿಸಿದ್ದು ಅರ್ನಾಬ್. ಮಾರ್ಗ ಯಾವುದಾದರೂ ಸರಿ, ಗುರಿ ಮುಖ್ಯ ಎನ್ನುವಂತೆ ಟಿ ಆರ್ ಪಿ ಗಳಿಸುವ ಗುರಿ ಮಾತ್ರ ಇರಿಸಿಕೊಂಡು ಎಲ್ಲರನ್ನೂ ಬಾಯಿ ಬಡಿಯುತ್ತಾ, ಸರ್ಕಾರದ ಪರವಾಗಿ ಅತಿ ವಿನಯಶೀಲವಾಗಿ ವರ್ತಿಸುತ್ತಾ ಅರ್ನಾಬ್ ಅನಿವಾರ್ಯ ಮಾದರಿ ಎನ್ನುವಂತಾಗಿ ಹೋಗಿದ್ದರು

ಈ ಮಾದರಿಯೇ ಸರಿಯಾದ ಮಾದರಿ ಎನ್ನುವಂತೆ ಉಳಿದ ಚಾನಲ್ ಗಳೂ ಸಹಾ ಹಿಂಬಾಲಿಸಲು ಆರಂಭಿಸಿದ್ದವು

ಟೈಮ್ಸ್ ನೌ ಮಾತ್ರವಲ್ಲದೆ ತಾವು ಪ್ರಧಾನ ಸಂಪಾದಕರಾಗಿದ್ದ ‘ಇ ಟಿ ನೌ’ ಗೆ ಸಹಾ ಅವರು ರಾಜೀನಾಮೆ ನೀಡಿದ್ದಾರೆ

UPDATE

ಈ ಮಧ್ಯೆ ARNAB IS BACKಎನ್ನುವ ಪ್ರೊಮೊ ಹಾಗೂ ಟ್ವೀಟ್ ಸಹಾ ಕಾಣಿಸಿಕೊಂಡಿದೆ

e41347a1-09ed-45c4-9875-ec616f360bb8 7c99558f-8f3a-4c98-961d-5f797716cc9b

arnab

arnab modi

arnab interview satish acharya

arnab interview

 

4 Comments

 1. Shivashankar
  November 2, 2016
 2. nempe devaraj
  November 2, 2016
 3. Prabhakar joshi
  November 1, 2016
 4. Anonymous
  November 1, 2016

Add Comment

Leave a Reply