Quantcast

ಅರಿವಿನ ‘ರಕ್ತವರ್ಣೆ’

ಅರಿವು ಹರಳುಗಟ್ಟುತ್ತಾ..

ಬೇಲೂರು ರಘುನಂದನ್ ಅವರ ನಾಟಕ ರಕ್ತವಣರ್ೆ ಒಂದು ಅಪರೂಪದ ಕಲಾಕೃತಿ. ಸಾಮಾನ್ಯವಾಗಿ ನಾಟಕ ಅಂದ ತಕ್ಷಣ ಕಾಣಿಸುವ, ಕೇಳಿಸುವ ಮತ್ತು ಅಭಿವ್ಯಕ್ತಿಯಲ್ಲಿ ಕಲಾತ್ಮಕತೆಯನ್ನು ಹೊಂದಿರಬೇಕು. ಈ ಗುಣಗಳು ನಾಟಕಕ್ಕೆ ದಕ್ಕಿದಾಗ ಆ unnamedನಾಟಕ ಯಶಸ್ವಿ ಕಲಾಕೃತಿ ಆಗುತ್ತದೆ. ಈ ಯಶಸ್ವೀ ಗುಣಗಳು ರಕ್ತವಣರ್ೆಯಲ್ಲಿ ಸಶಕ್ತವಾಗಿ ಕಾಣ ಸಿಗುತ್ತವೆ. ಜೀವನಕ್ಕೆ ಲಯ ಇದ್ದ ಹಾಗೆ ನಾಟಕಕ್ಕೂ ಲಯ ಇದ್ದೇ ಇರುತ್ತದೆ. ಆ ಲಯದ ಉಸಿರು ಹೆಣ್ಣಾಗಿದ್ದರೆ, ಅದರ ಹೆಜ್ಜೆ ಗಂಡಿನದ್ದಾಗಿರುತ್ತದೆ. ಈ ಉಸಿರು ಮತ್ತು ಹೆಜ್ಜೆಗಳು, ಈ ನಾಟಕದ ಧ್ವನಿಯ ಕುರುಹುಗಳಾಗಿ, ತೆರೆದು ಕೊಳ್ಳುತ್ತದೆ.

ಈ ನೆಲದ ಸಹನೆಯ ಹೆಣ್ಣು ತನ್ನ ಅಂತರಂಗದ ಕನಸು ಮತ್ತು ಬಹಿರಂಗದ ವಾಸ್ತವವನ್ನು ಹಾಗೂ ಅನೇಕ ಕಷ್ಟ ಕಾರ್ಪಣ್ಯಗಳನ್ನು ದಾಟುವ ಒಂದು ಸಂವೇದನೆಯ ರೂಪಕವಾಗಿ ಈ ನಾಟಕ ತನ್ನ ಅಂತ:ಸತ್ವದ ಒಳಗಿನ ಬೆಳಕನ್ನು ಒಮ್ಮೊಮ್ಮೆ ಉರಿ ಕೆಂಡವಾಗಿಯೂ, ಪುಟ್ಟ ಹಣತೆಯ ದೀಪವಾಗಿಯೂ ಬೆಳಗುತ್ತದೆ.

ನೀರಿಗಿಂತ ರಕ್ತ ದಪ್ಪದಾಗಿರುತ್ತದೆ ಎನ್ನುವ ಮಾತೊಂದಿದೆ. ನೀರಿಗೆ ಬಣ್ಣವಿಲ್ಲ, ರಕ್ತಕ್ಕೆ ಬಣ್ಣವಿದೆ. ಅದಕ್ಕೆ ಜಾತಿ ಧರ್ಮದ ವಾಸನೆ ಇದ್ದರೂ ಇರಬಹುದು. ಇದು ಆಗಾಗ ಮತ್ತೆ ಮತ್ತೆ ಸಾಭೀತಾಗುತ್ತಲೇ ಇದೆ. ರಕ್ತವಣರ್ೆ ನಾಟಕ ಬಹಿರಂಗವಾಗಿ ಇದನ್ನು ಹೇಳಿದರೂ ಹೆಣ್ಣು ಜೀವ ಮಾತ್ರ ಇದನ್ನು ಮೀರುತ್ತಲೇ ಬಂದಿದೆ. ಕಾರಣ ಸ್ಪಷ್ಟ, ಹೆಣ್ಣು ಪ್ರಕೃತಿಯ ಬಹಳ ದೊಡ್ಡ ಅಂಶ ಹೌದು. ಆಕೆ ಅನೇಕ ಸಂಕಷ್ಟದ ದಾರಿಗಳನ್ನು ಮೀರಿ ಗಂಡಿನ ವ್ಯಾಘ್ರತೆಯನ್ನೂ ಅವನ ದೌರ್ಬಲ್ಯವನ್ನು ಸರಿದೂಗಿಸುವ ಸಾಮಥ್ರ್ಯ ಅವಳಿಗಿದೆ. ಹೆಣ್ಣು ಮಗಳೊಬ್ಬಳು ತಾನು ಪ್ರಕೃತಿಯ ಕೂಸು ಎಂದು ಭಾವಿಸಿರುವ ಹಾಗೇ ಇಡೀ ಜೀವ ಸಂಕುಲವೇ ಪ್ರಕೃತಿಯ ಶಿಶುಗಳು ಎನ್ನುವುದು ಆಕೆಯೊಳಗೆ ಅಂಕುರಿಸುವ ಫಲವಂತಿಕೆಯ ಶಕ್ತಿಯೂ ಆಗಿದೆ. ಇದು ಸೋಲು ಗೆಲುವಿನ ಆಟ ಎಂದೇ ತಿಳಿಯಬೇಕು.

ರಘುನಂದನ್ ಬೇಲೂರಿನ ಕಲಾಶಿಲ್ಪವೇ ಉಸಿರಾಡಿದ ನೆಲದಿಂದ ಬಂದವರು. ತನ್ನ ಕಾವ್ಯ ದಿಂದ ಈಗಾಗಲೇ ಚಿರ ಪರಿಚಿತರಾದ ರಘು, ರಕ್ತವಣರ್ೆ ನಾಟಕದ ಮೂಲಕ ರಂಗಭೂಮಿಗೆ ಒಂದು ವಿಶಿಷ್ಟ ಸಂವೇದನೆಯ ಕಲಾಕೃತಿಯನ್ನು ಕೊಟ್ಟಿದ್ದಾರೆ. ಸ್ವತ: ಕವಿಯಾದ್ದರಿಂದ ನಾಟಕದ ಭಾಷೆ ಅತ್ಯಂತ ಕಾವ್ಯಮಯವಾಗಿದೆ. ಈ ನಾಟಕದ ವಸ್ತು, ಪಾತ್ರ, ತಂತ್ರ, ಸನ್ನಿವೇಶ ಇವನ್ನೊಳಗೊಂಡ ಒಟ್ಟೂ ಸಾರಾಂಶದ ಐರನಿ ಎಲ್ಲರ ಉಸಿರೊಳಗೆ ಉಸಿರಾಗುವ ಒಂದು ಮಾಂತ್ರಿಕ ಗುಣವನ್ನು ಹೊಂದಿದೆ.
ಮಗುವೊಂದು ತನ್ನ ತಾಯಿಯ ತೊಡೆಯ ಮೇಲೆ ಜೋಗುಳವ ಕೇಳಿದ ಹಾಗೆ ಈ ನಾಟಕದ ಮಾತುಗಳು ಸಂಗೀತದ ಲಹರಿಯಲ್ಲಿ ಮುಳುಗಿಸಿದರೂ ಅದು ಎಚ್ಚರದ ತೀವ್ರತೆಯಲ್ಲಿ ನಮ್ಮನ್ನು ಹರಳುಗಟ್ಟಿಸುತ್ತದೆ.

ಇಲ್ಲಿಯ ಜಾತಿ ಧರ್ಮದ ಸಂಕಟಗಳು, ಮನಸ್ಸು ಮೈಲಿಗೆಯ ಮಾತುಗಳು ಬಹಿರಂಗವಾಗಿ ಕಂಡರೂ ತಳ ಸಮುದಾಯದ ಸೇವಂತಿ ತನ್ನ ಆಂತರ್ಯದಲ್ಲಿ ಮಾನವೀಕರಣಗೊಳ್ಳುತ್ತಾ ಎಲ್ಲರ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಮಾಡುತ್ತಾಳೆ.
ಧರ್ಮಶಾಸ್ತ್ರಗಳು ನಮ್ಮನ್ನು ಬೇರೆ ಬೇರೆ ಮಾಡಬಹುದು. ಆದರೆ ಈ ನೆಲ ಮತ್ತು ನೀರು ನಮ್ಮನ್ನು ಬೇರ್ಪಡಿಸುವುದಿಲ್ಲ ಎನ್ನುವಂತೆ ಒಂದು ಹೆಣ್ಣಿನ ಸೂಕ್ಷ್ಮ ಮನಸಿನ ವಿರಾಟ ದರ್ಶನದ ಮೂಲಕ, ನಾಟಕ ಮನುಷ್ಯನ ಸಣ್ಣತನಗಳನ್ನು ಬಯಲು ಮಾಡುತ್ತಾ ನಮ್ಮನ್ನೆಲ್ಲಾ ವಿವೇಕದ ಹಾದಿಯಲ್ಲಿ ನಡೆಯುವಂತೆ ಮಾಡುತ್ತದೆ.

ಈ ನಾಟಕ ಜನಸಾಮಾನ್ಯರ ರಸವಿವೇಚನೆಯನ್ನು ಒಳಗೊಂಡಂತೆ ಒಂದು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವಲ್ಲಿ ಸಾಫಲ್ಯಗೊಂಡಿದೆ. ಇಲ್ಲಿ ನಾಟಕಕಾರ ರಘು ತನ್ನ ಸೃಜನಶೀಲತೆಯ ಮೂಲಕ ಕಲ್ಲನ್ನು ಮೇಣದಂತೆ ಕರಗಿಸಿ ಯಶಸ್ವಿ ಶಿಲ್ಪಕಾರನಾಗಿ ಹೊರಹೊಮ್ಮಿದ್ದಾರೆ. ರಕ್ತವಣರ್ೆ ಓದುತ್ತಲೇ ನೋಡುವ ನಾಟಕವೂ ಹೌದು. ನೋಡಿ ಅರ್ಥ ಮಾಡಿಕೊಳ್ಳುವ ಅರಿವಿನ ನಾಟಕವೂ ಹೌದು. ಇಂತಹ ಮಹತ್ವದ ನಾಟಕವನ್ನು ಕೊಟ್ಟ ರಘುನಂದನ್ ಅವರಿಗೆ ಅಭಿನಂದಿಸುತ್ತಾ, ಈ ಬಗೆಯ ನಾಟಕದಿಂದ ಕನ್ನಡ ರಂಗಭೂಮಿ ಮತ್ತು ಕನ್ನಡ ಸಾಹಿತ್ಯ ಸಾರಸ್ವತ ಲೋಕ ಇನ್ನಷ್ಟು ವಿಸ್ತಾರ ಪಡೆದುಕೊಂಡಿದೆ ಎನ್ನುವುದು ನನಗೆ ಹೆಮ್ಮೆ ಎನಿಸುತ್ತದೆ. ಈ ಹೊತ್ತಿನ ಅನೇಕ ತಲ್ಲಣಗಳಿಗೆ ಕಲಾವಿದ ಮತ್ತು ಲೇಖಕ ತನ್ನ ಬರವಣಿಗೆಯ ಮೂಲಕ ಉತ್ತರ ಹುಡುಕುತ್ತಲೇ ಇದ್ದಾನೆ. ಇಂತಹ ಕ್ಲಿಷ್ಟ ಸಾಮಾಜಿಕ ಸಂದರ್ಭದ ಸಂಕೀರ್ಣ ಸಮಸ್ಯೆಗಳಿಗೆ ರಕ್ತವಣರ್ೆ ಎಲ್ಲರ ಕಣ್ಣು ಮತ್ತು ಮನಸ್ಸಿಗೆ ಮಿಂಚು ಹರಿಸುವುದರಲ್ಲಿ ಯಶಸ್ವಿಯಾಗಿದೆ.

– ಸುಬ್ಬು ಹೊಲೆಯಾರ್

raktavarne-cover

ರಘುನಂದನ್ ಸದಾ ನಮ್ಮ ನಡುವೆಯೇ ಇರುವ ಸರಳ ಸಜ್ಜನಿಕೆಯ ಹುಡುಗ. ಎಲ್ಲರೊಂದಿಗೆ ಸ್ನೇಹದಿಂದಿರುವ, ಸದಾ ಯಾವುದೋ ಅನ್ವೇಷಣೆಯಲ್ಲಿರುವ ಮುಖಭಾವದಲ್ಲಿ ಮುಗ್ಧತೆ ಹಾಗೂ ವಿವೇಕಗಳೆರಡೂ ಸಂದಭರ್ಾನುಸಾರವಾಗಿ ಅವರಲ್ಲಿ ಹೊರ ಹೊಮ್ಮುತ್ತಿರುತ್ತವೆ.

`ಕಟ್ಟುಪದಗಳು’ ಎಂಬ ಹೆಸರಿನಲ್ಲಿ ನಿದರ್ಿಷ್ಟ ವಸ್ತುವನ್ನು ಒಳಗೊಂಡ ಪದ್ಯ ಪ್ರಯೋಗಗಳು ಈಗಾಗಲೇ ಹಲವು ಸಂಕಲನಗಳಾಗಿ ಪ್ರಕಟಗೊಂಡಿವೆ. ರಕ್ತವಣರ್ೆ ರಘುನಂದನ್ ಬರೆದ ಮೊದಲನೇ ನಾಟಕ. ಈ ನಾಟಕದಲ್ಲಿಯೂ ಹೆಣ್ಣು ಮತ್ತು ಹೆಣ್ಣಿನ ಯಾತನೆ, ಇಂದ್ರಿಯ ಗಮ್ಯತೆ, ಶರೀರದ ಭಾಷೆ, ಹಾಗೂ ಕುಲ ಮೂಲಗಳ ಸುತ್ತ ಅನ್ವೇಷಣೆ ನಡೆದಿದೆ.

ಗಂಡಿನೊಳಗಣ ಹೆಣ್ಣು, ಹೆಣ್ಣಿನೊಳಗಣ ಗಂಡು ಗುಣಗಳು ಸಂದಭರ್ಾನುಸಾರಿಯಾಗಿ ಹೊರ ಹೊಮ್ಮುತ್ತವಷ್ಟೆ. ಈ ನಾಟಕದಲ್ಲಿ ಪುರುಷ ರೂಪದ ವಲ್ಲೀಶನ ಒಳಗೆ ನಡೆಯುವ ಮನೋ ಸಂಘರ್ಷ, ಸ್ತ್ರೀ ರೂಪದ ಸೇವಂತಿಯೊಳಗಿನ ದೇಹ ಮತ್ತು ಮನಸ್ಸಿನ ವಾಂಛೆಗಳ ಸಂಘರ್ಷಗಳನ್ನು ನಾಟಕಕಾರ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಗಂಡಾಗಿ, ಹೆಣ್ಣಿನ ಶರೀರದ ಸಂವೇದನೆಗಳನ್ನು ನಾಟಕಕಾರರು ಕಾವ್ಯರೂಪಿ ಭಾಷೆಯಲ್ಲಿ ಹಿಡಿಯಲೆತ್ನಿಸಿದ್ದಾರೆ.

ವೈದಿಕ ? ಶೂದ್ರವೆನ್ನುವ ಸಂಕರದಲ್ಲಿಯೂ ಉಳಿಯುವ ಗಂಡು ಹೆಣ್ಣಿನ ಮೈ ಮನಗಳ ಸಂಘರ್ಷ ಎಲ್ಲಾ ಕಾಲದಲ್ಲಿಯೂ ಕಾಡುವಂತದ್ದಾಗಿದೆ. ಇಂತಹ ಸೂಕ್ಷ್ಮವಾದ ಎಳೆಯೊಂದನ್ನು ರಘುನಂದನ್ ಸಂಘರ್ಷದ ನಂತರವೂ ಸ್ವಸ್ಥವಾದ ಬದುಕು ಸಾಧ್ಯ ಎನ್ನುವಂತೆ ಕಾವ್ಯ ? ನಾಟಕ ರೂಪದಲ್ಲಿ ಸಮರ್ಥವಾಗಿ ರಕ್ತವಣರ್ೆಯಲ್ಲಿ ಹಿಡಿದಿಟ್ಟಿದ್ದಾರೆ.

– ಡಾ. ಎಚ್.ಎಲ್. ಪುಷ್ಪ

2 Comments

  1. Anonymous
    November 2, 2016
  2. Anonymous
    November 2, 2016

Add Comment

Leave a Reply