Quantcast

ನಮ್ಮ ಸ್ಟಾಂಡರ್ಡ್ ಬಗ್ಗೆ ‘ಸ್ಟಾಂಡರ್ಡ್ ಅಂಡ್ ಪೂರ್’ ಹೇಳಿದ್ದು

rajaram tallur low res profile

ರಾಜಾರಾಂ ತಲ್ಲೂರು

ಜಗತ್ತಿನ ಪ್ರಮುಖ ಆರ್ಥಿಕ ವಿಶ್ಲೇಷಣಾ ಸಂಸ್ಥೆಗಳಲ್ಲೊಂದಾದ ಸ್ಟಾಂಡರ್ಡ್ ಅಂಡ್ ಪೂರ್ (Standard &Poor) ಭಾರತದ ಆರ್ಥಿಕ ಸ್ಥಿತಿಯನ್ನು -BBB ಎಂದು ಅಂದಾಜಿಸಿದೆ. ಅಂದರೆ ಅರ್ಥ: ಆರ್ಥಿಕ ಬದ್ಧತೆಗಳನ್ನು ಪೂರೈಸುವ ಸಾಮರ್ಥ್ಯ ಇದೆಯಾದರೂ, ಆರ್ಥಿಕ ದುಃಸ್ಥಿತಿ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳ ಕಾರಣದಿಂದಾಗಿ ಈ ಬದ್ಧತೆಗಳನ್ನು ಪೂರೈಸಲು ಸಾಧ್ಯವಾಗದಿರುವ ಸ್ಥಿತಿ ಇದೆ ಎಂದು.

ಸ್ವತಂತ್ರವಾಗಿ ನಡೆಯುವ ಈ ಖಾಸಗಿ ವಿಶ್ಲೇಷಣೆಗಳು ಅವರಿಗೆ ಲಭ್ಯ ಇರುವ, ಅವರು ಸರಿಯಿರಬಹುದೆಂದು ನಂಬಿರುವ ಮಾಹಿತಿಗಳನ್ನಾಧರಿಸಿರುತ್ತದೆ.

avadhi-column-tallur-verti- low res- cropಭಾರತದಲ್ಲಿ ನೀತಿ ನಿರ್ಮಾಣ ಬಲಗೊಳ್ಳುತ್ತಿರುವುದರಿಂದ ವಾಣಿಜ್ಯ ಮತ್ತು ಹಣಕಾಸಿನ ಸ್ಥಿತಿ ಸುಧಾರಿಸುತ್ತಿದೆಯಾದರೂ, ದುಡ್ಡಿನ ಕೊರತೆಯ ಅಗಾಧ ಗಾತ್ರ, ಬೆನ್ನು ಮುರಿಯುವಷ್ಟು ಹೇರಿಕೊಂಡಿರುವ ಸಾಲ ಮತ್ತು ತೀರಾ ಕಳಪೆ ತಲಾ ಆದಾಯಗಳು ಪರಿಸ್ಥಿತಿಯನ್ನು ಹದಗೆಡಿಸುತ್ತಿವೆ ಎಂಬುದು ಅವರ ವಿಶ್ಲೇಷಣೆಯ ಸಾರ.

ಅವರು ದೀರ್ಘಕಾಲಿಕವಾಗಿ –BBB ದರ್ಜೆ ಮತ್ತು ಅಲ್ಪಕಾಲಿಕ ನೆಲೆಯಲ್ಲಿ A3 ದರ್ಜೆಯನ್ನು ಭಾರತಕ್ಕೆ ನೀಡಿದ್ದಾರೆ.

ಸಿಂಗಾಪುರ ಮೂಲದ ವಿಶ್ಲೇಷಕರು ಮಾಡಿರುವ ಈ ವಿಶ್ಲೇಷಣೆಯು ಪೂರ್ವ ನಿರ್ಧರಿತವಾಗಿ ಮಾರುಕಟ್ಟೆ ಆರ್ಥಿಕತೆಯ ಪರನಿಲ್ಲುವ ಅದರ ನಿಲುವಿನ ದ್ಯೋತಕವಾದರೂ, ಅವರು ಕೊಡುತ್ತಿರುವ ಅಂಕಿ-ಸಂಖ್ಯೆಗಳು ನಮ್ಮನ್ನು ಎಚ್ಚರಿಸದಿದ್ದರೆ, ನಮ್ಮ ಹಾದಿ ವಿನಾಶದ ಕಡೆಗೇ ಎಂಬುದಕ್ಕೆ ಬೇರೆ ದೊಡ್ಡ ವಿಶ್ಲೇಷಣೆ ಅಗತ್ಯ ಇಲ್ಲ.

 ಅವರ ವಿಶ್ಲೇಷಣೆಗಳ ಸಾರಾಂಶ ಇಲ್ಲಿದೆ:

* ಭಾರತದ “ಪ್ರಜಾತಾಂತ್ರಿಕ ವ್ಯವಸ್ಥೆ” ಮತ್ತು “ ಮುಕ್ತ ಪತ್ರಿಕೋದ್ಯಮ” ಗಳಿಂದಾಗಿ ಇಲ್ಲಿನ ನೀತಿ ನಿರೂಪಣೆಗಳಲ್ಲಿ ಸ್ಥಿರತೆ ಇದೆ ಮತ್ತು ಅದು ಸಾಗುತ್ತಿರುವ ಹಾದಿಯನ್ನುಮುಂದಾಗಿ  ಊಹಿಸುವುದು ಸಾಧ್ಯ. ಇದು ಭಾರತದ ಶಕ್ತಿಯಾದರೆ, ಇಲ್ಲಿನ ತೀರಾ ಕಳಪೆ ತಲಾ ಆದಾಯ ಮತ್ತು ದುರ್ಬಲ ಸಾರ್ವಜನಿಕ ಹಣಕಾಸು ಭಾರತದ ದೌರ್ಬಲ್ಯ.

* 2017 ವೇಳೆಗೆ ಬರಲಿರುವ ಹೊಸ GST ತೆರಿಗೆ ವ್ಯವಸ್ಥೆ, ಸರಳಗೊಳ್ಳುತ್ತಿರುವ ಕಾನೂನುಗಳು ಕಾರ್ಮಿಕ ಮಾರುಕಟ್ಟೆಯಲ್ಲಿ ಸಡಿಲನ್ನೂ, ಇಂಧನ ಕ್ಷೇತ್ರದಲ್ಲಿ ಪರಿವರ್ತನೆಯನ್ನೂ ತರಲಿವೆ.

* ಚಾಲ್ತಿ ಖಾತೆಯಲ್ಲಿ ಭಾರತದ ಹಣಕಾಸು ಕೊರತೆ 1.4%  ಇದ್ದು, 2018 ತನಕವೂ ಹೀಗೇ ಮುಂದುವರಿಯಬಹುದು; ರಾಜಸ್ವ ಸಂಗ್ರಹ ಬಲಗೊಂಡರೆ ಹೊರಸಾಲ ಇಲ್ಲದೆ ಹಣಕಾಸಿನ ಕೊರತೆಯ ಸ್ಥಿತಿ ಸುಧಾರಿಸಬಹುದು.

* ಸದ್ಯ ಸರಕಾರಕ್ಕೆ ಬರುತ್ತಿರುವ ಪ್ರತೀ ನೂರು ರೂಪಾಯಿಗಳಲ್ಲಿ 5 ರೂಪಾಯಿ ಹೊರಗಿನ ಸಾಲ. ಆದರೆ 2018 ರ ವೇಳೆಗೆ ಈ ಸ್ಥಿತಿ ಸ್ವಲ್ಪ ಸುಧಾರಿಸೀತು ಎಂಬ ನಿರೀಕ್ಷೆ ಇದೆ.

* 2016 ರ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು US$369 ಬಿಲಿಯದಷ್ಟಾಗಿದ್ದು, ಇದು ಸುಮಾರು ನಾಲ್ಕೂವರೆ ತಿಂಗಳ ಚಾಲ್ತಿ ಖಾತೆ ಪಾವತಿಗಳಿಗೆ ಸಾಕಾಗುವಷ್ಟಾಗಿರುತ್ತದೆ.

download-5* 2016ಕ್ಕೆ ಭಾರತದ ಜಿಡಿಪಿ US$ 1700 ಮಾತ್ರ. ಆದರೆ, ಅದರ ಸಮಕಾಲೀನ ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಈಗ ಇರುವ 7.9% ಬೆಳವಣಿಗೆಯ ದರ  2016-18ರ ಹೊತ್ತಿಗೆ 8% ದರದಲ್ಲಿ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ.

* ಸಾಲದ ಹೊರೆ ಭಾರತವನ್ನು ದುರ್ಬಲಗೊಳಿಸಿದ್ದು, ಸರ್ಕಾರಿ ಸಾಲದ ದೊಡ್ಡ ಹೊರೆಯ ಚರಿತ್ರೆಯೇ ಭಾರತಕ್ಕಿದೆ. ಸರ್ಕಾರದ ಆದಾಯದಲ್ಲಿ ಕೊರತೆ ಮತ್ತು ವೆಚ್ಚದಲ್ಲಿ ನಿಯಂತ್ರಣ ಇಲ್ಲದಿರುವಿಕೆಗಳೆರಡೂ ಈ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತಿವೆ.

* ಸರ್ಕಾರದ ಆದಾಯ GDP ಯ 21% ನಷ್ಟು. ಸರ್ಕಾರದ ವೆಚ್ಚದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರಗಳಿಗೆ ಸಬ್ಸಿಡಿ ರೂಪದಲ್ಲಿ 2% ಅಪವ್ಯಯ ಆಗುತ್ತಿದೆ.

* ಅಲ್ಪಕಾಲಿಕ ಅವಧಿಯಲ್ಲಿ ಸರ್ಕಾರದ ಆದಾಯ GST  ಮತ್ತು ತೆರಿಗೆ ತಳಹದಿಯ ವಿಸ್ತರಣೆಯ (ಅಂದರೆ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಿಸುವುದು) ಮೂಲಕ ಸುಧಾರಿಸೀತೇ ಹೊರತು ಸಬ್ಸಿಡಿ ಕಡಿತಗಳಂತಹ ಸುಧಾರಣೆಗಳ ಮೂಲಕ ಆಗಲಾರದು.

* ಸರ್ಕಾರದ ಆದಾಯದಲ್ಲಿ GDPಯ 69% ರಷ್ಟು ಸರ್ಕಾರಿ ಸಾಲಗಳ ಮರುಪಾವತಿ ಮತ್ತು ಬಡ್ಡಿಯ ಮರುಪಾವತಿಗೇ ಬೇಕಾಗುತ್ತಿದೆ. ಈ ಪರಿಸ್ಥಿತಿ ಸದ್ಯಕ್ಕೆ ತೀರಾ ಸುಧಾರಿಸುವಂತೆ ಕಾಣುತ್ತಿಲ್ಲ. ದೇಶದ ಬ್ಯಾಂಕುಗಳೇ ತಮ್ಮ ಹಣದಲ್ಲಿ 22%ದಷ್ಟನ್ನು ಸರ್ಕಾರಕ್ಕೆ ಸಾಲ, ಸೆಕ್ಯುರಿಟಿಗಳ ರೂಪದಲ್ಲಿ ನೀಡಿರುತ್ತವೆ. ಹಾಗಾಗಿ ಸರ್ಕಾರಕ್ಕೆ ಇನ್ನಷ್ಟು ಸಾಲಗಳನ್ನು ಒದಗಿಸಲು ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸಾಧ್ಯವಾಗದು.

* ಬಾಸೆಲ್ III  ಬಂಡವಾಳ ನಿಯಮಗಳನ್ನು ಅನುಸರಿಸುವ ಮಟ್ಟಕ್ಕೇರಲು 2019ರ ವೇಳೆಗೆ ಭಾರತವು ತನ್ನ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ US$45 ಬಿಲಿಯ (ಅಂದರೆ GDPಯ 2%) ಬಂಡವಾಳ ಹೂಡಿಕೆ ಮಾಡಬೇಕು. ಆದರೆ ಸರಕಾರ ಕೇವಲ US$11  ಬಿಲಿಯ ಹೂಡುವ ಬದ್ಧತೆ ಪ್ರಕಟಿಸಿದೆ.

* ಗ್ರಾಹಕದರ ಸೂಚ್ಯಂಕದ ಹಣದುಬ್ಬರ (CPI inflation) ಸುಧಾರಣೆಗೆ ರಿಸರ್ವ್ ಬ್ಯಾಂಕು ಕ್ರಮಗಳನ್ನು 2015 ಫೆಬ್ರವರಿಯಲ್ಲಿ ಆರಂಭಿಸಿದ್ದು, 2017  ಮಾರ್ಚ್ ವೇಳೆಗೆ ಅದು ನಿರೀಕ್ಷಿತ 5% ಗುರಿ ತಲುಪುವ ನಿರೀಕ್ಷೆ ಇದೆ.

* ಹಣಕಾಸಿನ ಕ್ಷೇತ್ರಕ್ಕೆ ಒಳಹರಿವು ಮತ್ತು ದೇಶದೊಳಗಿನ ಹಣದುಬ್ಬರಗಳು ಜೊತೆಯಾಗಿ, ವಹಿವಾಟು ಒತ್ತಡಗಳಿಗೆ ಕಾರಣವಾಗುವುದರಿಂದ ಉತ್ಪಾದಕತೆಯಲ್ಲಿ ಬೆಳವಣಿಗೆ ಆಗದಿದ್ದರೆ, ಅದು ವಿದೇಶ ವಿನಿಮಯ ದರದ ಮೇಲೆ ಪರಿಣಾಮ ಮಾಡಿ, ದೇಶದ ಸ್ಪರ್ಧಾಸಾಮರ್ಥ್ಯಕ್ಕೆ ಹಾನಿ ಮಾಡಬಹುದು.

rating-aaa

ಹೆಚ್ಚಿನ ಓದಿಗಾಗಿ:

ಕ್ರೆಡಿಟ್ ರೇಟಿಂಗಿನ ದರ್ಜೆಗಳು ಮತ್ತು ಅರ್ಥವಿವರಣೆ:

Investment Grade

AAA: An obligor rated ‘AAA’ has extremely strong capacity to meet its financial commitments. ‘AAA’ is the highest issuer credit rating assigned by Standard & Poor’s.
AA: An obligor rated ‘AA’ has very strong capacity to meet its financial commitments. It differs from the highest-rated obligors only to a small degree. Includes:AA+: equivalent to Moody’s Aa1 (high quality, with very low credit risk, but susceptibility to long-term risks appears somewhat greater)
AA: equivalent to Aa2
AA−: equivalent to Aa3
A: An obligor rated ‘A’ has strong capacity to meet its financial commitments but is somewhat more susceptible to the adverse effects of changes in circumstances and economic conditions than obligors in higher-rated categories.A+: equivalent to A1
A: equivalent to A2
BBB: An obligor rated ‘BBB’ has adequate capacity to meet its financial commitments. However, adverse economic conditions or changing circumstances are more likely to lead to a weakened capacity of the obligor to meet its financial commitments.
Short-term issue credit ratings

The company rates specific issues on a scale from A-1 to D. Within the A-1 category it can be designated with a plus sign (+). This indicates that the issuer’s commitment to meet its obligation is very strong. Country risk and currency of repayment of the obligor to meet the issue obligation are factored into the credit analysis and reflected in the issue rating.

A-1: obligor’s capacity to meet its financial commitment on the obligation is strong
A-2: is susceptible to adverse economic conditions however the obligor’s capacity to meet its financial commitment on the obligation is satisfactory
A-3: adverse economic conditions are likely to weaken the obligor’s capacity to meet its financial commitment on the obligation
B: has significant speculative characteristics. The obligor currently has the capacity to meet its financial obligation but faces major ongoing uncertainties that could impact its financial commitment on the obligation
C: currently vulnerable to nonpayment and is dependent upon favorable business, financial and economic conditions for the obligor to meet its financial commitment on the obligation
D: is in payment default. Obligation not made on due date and grace period may not have expired. The rating is also used upon the filing of a bankruptcy petition.

Add Comment

Leave a Reply