Quantcast

ಕಮಲ ಕಂಡ ‘ಚಂದ್ರ’

ಜಾಗತಿಕ ಕಾವ್ಯದ ಬನಿಯನ್ನು ಪರಿಚಯಿಸಿದ, ಹೆಣ್ಣಿನ ಲೋಕಕ್ಕೆ ಬೆಳಕಿಂಡಿಯಾದ ಎಂ ಆರ್ ಕಮಲ ಈಗ ಹೊಸ ಪುಸ್ತಕ ಹೊರತಂದಿದ್ದಾರೆ.

‘ನೆತ್ತರಲ್ಲಿ ನೆಂದ ಚಂದ್ರ’ ನೀವು ಓದಲೇಬೇಕಾದ ಕೃತಿ.

ಎಂ ಆರ್ ಕಮಲಾ ಈ ಕೃತಿಗೆ ಬರೆದಿರುವ ಅರಬ್ ಸಾಹಿತ್ಯದ ಪರಿಚಯ ಅದರ ಮಹತ್ವವನ್ನು ಇನ್ನೂ ಹೆಚ್ಛ್ಚಿಸಿದೆ.

ಎರಡನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ.

m r kamala

ಮರೆವಿನ ಪಾಪ

ದಿಮಾ ಹಿಲಾಲ್

ಹುಟ್ಟಿದ್ದು-ಮೆಡಿಟರೇನಿಯನ್ ತೀರದಲ್ಲಿ
ಅಮ್ಮಂದಿರು ಮೀಯಿಸಿದ್ದು -ಕಿತ್ತಳೆ ನೀರಿನಲ್ಲಿ
ನೆರಳು ಕೊಟ್ಟಿದ್ದು -ಆಲಿವ್, ದೇವದಾರು ಮರಗಳು!
ಪೂರ್ವ ಎಂದರೆ ಕೊಳಕು, ಕತ್ತಲು, ವಿಚಿತ್ರ ಎನ್ನುವ
ಅಮೆರಿಕಾದಲ್ಲೀಗ ನಮ್ಮ ವಾಸ.

ನಮ್ಮಜ್ಜಿಯರು ಒಪ್ಪವಾಗಿ ತಲೆ ಬಾಚಿದ್ದು
ಮರೆತೇ ಹೋಗುತ್ತಿದೆ.
ಕೂದಲು ಕೆಂಚಗಿದ್ದರೆ,
ಕಣ್ಣು, ಮೈ ಬಣ್ಣ ತಿಳಿಯಾಗಿದ್ದರೆ ಎನಿಸುತ್ತಿದೆ.
`ಬಾಬರ್ಿ’ಯಷ್ಟು ಸುಂದರವಾಗಿ `ಶಹ್ರಜಾದೆ’ ಕಾಣಿಸುತ್ತಿಲ್ಲ
ಫ್ರೆಂಚ್ನ `ಬೋನ್ಜೂರ್’ ಪದಕ್ಕಿರುವ ಸೊಗಸು `ಸಲಾಂ’ಗಿಲ್ಲ.
ವಸಾಹತುಶಾಹಿಗಳ ಭಾಷೆ ಬೀಗಿಸುತ್ತಿದೆ
ಅರೇಬಿಕ್ನಲ್ಲಿ ಖುರಾನ್ ಹಾಡುವುದು ನೆನಪಾಗುತ್ತಿಲ್ಲ.

ನಾವಿಲ್ಲಿ ಬಂದಾಗ
ನಮ್ಮ ಉಗುರುಗಳೇ ಅಂಗೈಯನ್ನು ಚುಚ್ಚಿದ್ದವು.
ದಿನವೂ `ರಾತ್ರಿ ಹತ್ತರ ಸುದ್ದಿ’ಯಲ್ಲಿ
ನಮ್ಮ ನೆಲದ ಮಕ್ಕಳ ಕಣ್ಣುಗುಡ್ಡೆಗಳು ಗುಂಡೇಟಿನಿಂದ ಹೊಮ್ಮುವುದನ್ನು
ಸೋದರ-ಸೋದರಿಯರು ರಕ್ತ ಕಾರುವುದನ್ನು ತಪ್ಪದೇ ನೋಡುತ್ತಿದ್ದೆವು
ಅಃಖ ಅವರನ್ನು ಉಗ್ರವಾದಿಗಳೆಂದು ಘೋಷಿಸಿದೆ!

ಆದರೀಗ ನೋವು, ಯಾತನೆ, ಛಿದ್ರಗೊಂಡ ಶರೀರ,
ಸ್ಮಶಾನ ಯಾತ್ರೆಗಳಿಗೆ ಬೆನ್ನು ತಿರುಗಿಸಿದ್ದೇವೆ.
ಇಷ್ಟಕ್ಕೂ ನಾವೇನು ಮಾಡಲು ಸಾಧ್ಯ?
ಈ ನೆಲದಲ್ಲಿ ಒಮ್ಮೆ ನಿಂತಿದ್ದನ್ನು ಮರೆಯುತ್ತೇವೆ
ನಮಗೆ `ಪಶ್ಚಿಮ ಪ್ಯಾಕೇಜ್’ನ ಅರೇಬಿಯಾ ಬೇಕು!

ಈ ಎಲ್ಲದರಿಂದ ತಪ್ಪಿಸಿಕೊಳ್ಳಲು
`ಬೆಲ್ಲಿ ಡ್ಯಾನ್ಸ್’ ನೋಡಲು ಕ್ಲಬ್ಬಿಗೆ ಓಡುತ್ತೇವೆ
ಜಾಸ್ಮಿನ್, ಶ್ಯಾಷೆ ಹೆಸರಿನ ನರ್ತಕಿಯರು
ಹೆಚ್ಚು ಕಮ್ಮಿ ಬೆತ್ತಲಾಗಿದ್ದಾರೆ.
ಎಂಟು ಡಾಲರ್ಗೆ ಒಂದು ಪ್ಲೇಟ್ `ಹಮ್ಮಸ್’ ತಿಂದು
ಊರು, ಮನೆ ಎಷ್ಟು ಕಾಡುತ್ತದೆಯೆಂದು
ಪರಸ್ಪರ ಮಾತಾಡಿಕೊಳ್ಳುತ್ತೇವೆ!

fill-in4

`ಮಸಿ’ ಬಾವಿಯಲ್ಲಿ ಮಳೆಯ ಪ್ರೇಮಿ

ಘಾದಾ ಅಲ್ ಸಮ್ಮಾನ್

ನಾ ಸತ್ತ ಮೇಲೂ
ಈ ಪತ್ರಗಳು ನಿನ್ನ ಬಳಿಗೆ ನನ್ನನ್ನೊಯ್ಯುತ್ತದೆ
ಈ ಹುಚ್ಚು ಪ್ರೀತಿ-ಒಂದಿಷ್ಟು ಬದಲಾಗದೆ.
ನಾ ಸತ್ತ ಮೇಲೆ…
ಈ ಹಾಳೆಗಳೊಳಗೊಳಗೆ ಹುಡುಕು
ಪದಗಳ ಆಳಕ್ಕೆ ಇಳಿ
ಸಾಲು ಸಾಲಿನಲ್ಲೂ ನನ್ನ ಕಾಣುತ್ತೀಯ
ದಿಗ್ಭ್ರಮೆಗೊಂಡ ಗೂಬೆ…ಮೌನವಾಗಿ ಹಾರುತ್ತೇನೆ.
ನೊಂದು ಪುಸ್ತಕದ ಅಂಚನ್ನೇನಾದರೂ ಸುಟ್ಟರೆ
ಅಜ್ಜಿಯ `ಡಮಾಸ್ಕಸ್’ ಕಥೆಯ ಮಾಂತ್ರಿಕಳಂತೆ
ನಿನ್ನಲ್ಲಿಗೆ ಹಾರಿ ಬರುತ್ತೇನೆ.
ಪ್ರೇಮಿಯು ಕೂದಲೆಳೆ ಸುಟ್ಟಾಗೆಲ್ಲ ಅವನಿಗೆ ಕೊಡುತ್ತಾಳೆ.
ನಾ ಸತ್ತ ಮೇಲೆ…
ಹಾಳೆಯ ಅಂಚನ್ನು ಸಿಟ್ಟಿನಿಂದ ಹರಿದರೆ
ನಿನಗೇ ಕೇಳುವಂತೆ ನರಳುತ್ತೇನೆ
ಪ್ರೀತಿ ಕಣ್ಣುಗಳ ಧಾರಾಳವಾಗಿ ಹಾಳೆಯ ಮೇಲೆ ಚೆಲ್ಲಿದರೆ
ನೀನೆಲ್ಲಿದ್ದರೂ ಬೈರುಟ್ನ ನನ್ನ ಗೋರಿಯ ಮೇಲೆ
ಸೂರ್ಯ ಮೂಡುತ್ತಾನೆ!

One Response

  1. Anonymous
    November 6, 2016

Add Comment

Leave a Reply