Quantcast

ವಿಶಿಷ್ಟ ‘ಕತೆ ಮಾತು’

ಬೆಳಗಾವಿಯಲ್ಲಿ ಒಂದಷ್ಟು ಕತೆಗಾರರು ಸೇರಿ ಒಬ್ಬರ ಕತೆಗಳ ಬಗ್ಗೆ ಇನ್ನೊಬ್ಬರು ಮಾತನಾಡುವ ವಿಶಿಷ್ಟ “ಕತೆ ಮಾತು” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

13ನೇ ನವೆಂಬರ್ 2016, ಬೆಳಗಾವಿಯಲ್ಲಿ. ಸ್ಥಳವನ್ನು ತಿಳಿಸುತ್ತೇನೆ.

ಕಾರ್ಯಕ್ರಮದ ಆಶಯ:
ಸಮಕಾಲೀನ ಕತೆಗಾರ ಗೆಳೆಯರು ಕೂತು ಪರಸ್ಪರರ ಕೃತಿಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳುವ ತನ್ಮೂಲಕ ಹೊಸ ಹೊಳಹುಗಳನ್ನು ಅರಿಯುವ ಚಿಕ್ಕ ಪ್ರಯತ್ನ.

ಒಬ್ಬರು ತಮ್ಮ ಮೆಚ್ಚಿನ ಸಹಲೇಖಕನ ಮೆಚ್ಚಿದ ಕತೆಯೋ, ಕತೆ ಸಂಕಲನವೋ ಅಥವಾ ಅವರು ಬರೆದೆಲ್ಲ ಕತೆಗಳ ಬಗ್ಗೆಯೋ ಅರ್ಧ ಗಂಟೆ ಮಾತನಾಡುವುದು. ಹೀಗೆ ಸೇರಿದ ಎಲ್ಲ ಕತೆಗಾರರ ಬಗ್ಗೆ ಮಾತುಕತೆ ಮಾಡುವುದು.

unnamedಇದನ್ನು ಅನೌಪಚಾರಿಕವಾಗಿ ಮಾಡುವ ಉದ್ದೇಶ ಇರುವುದರಿಂದ ಇಲ್ಲಿ ಎಲ್ಲರೂ ಸಮಭಾಗಿಗಳು. ಅಧ್ಯಕ್ಷ, ಅತಿಥಿ ಕುರ್ಚಿಗಳು ಇರುವುದಿಲ್ಲ.

ಕಾರ್ಯಕ್ರಮಕ್ಕೆ ಇರುವ ಮಹತ್ತರ ಉದ್ದೇಶ ಸಮಕಾಲೀನ ಕತೆಗಾರರನ್ನು ಸೇರಿಸಿ ಒಬ್ಬರನ್ನೊಬ್ಬರು ಬೇರೆ ಬೇರೆ ಕೋನಗಳಿಂದ ನೋಡುವುದಷ್ಟೆ.

 

-ಮಂಜುನಾಥ, ಇಂದ್ರಕುಮಾರ ಎಚ್.ಬಿ., ಮಯೂರ ಬರಗಾಲೆ, ಪ್ರವೀಣ
ದೋಸ್ತಿ ಖಾತೆ.

Add Comment

Leave a Reply

%d bloggers like this: