Quantcast

ಖಾಯಿಲೆ ಬಂದು ಬಿಟ್ಟಿದೆ..

ಪ್ರಸಾದ್ ರಕ್ಷಿದಿ 

ನನ್ನ ಬಟ್ಟೆಗಳನ್ನು ಹೊಲೆದು ಕೊಡುವವರು ಅಶ್ಮತ್ ಭಾಯಿ.

ಮೋಟಾರು ಎಲೆಕ್ರಿಕಲ್ ಕೆಲಸ ಮಾಡುವವರು ಶೇಖು,

ವೆಲ್ಡಿಂಗು, ಇರಿಗೇಷನ್ ಕೆಲಸಗಳಿಗೆ ಬರುವ ಆಖಿಲ್ ,

ನಾಟಕದ ಪ್ರಚಾರದ ಕಲೀಲ್ ಭಾಯ್,

ಸಣ್ಣ ಪುಟ್ಟ ವ್ಯಾಪಾರಕ್ಕೆಬರುವ ಅಸ್ಲಾಂ,

kukkujadka-linesಡೀಸೆಲ್ ಎಂಜಿನ್ ಕೆಲಸದ ಕಲೀಲ್, ಮುನ್ನಾ,

ನಾನು ಉಸ್ತುವಾರಿ ನಡೆಸುವ ತೋಟದ ಮೆಣಸು (ಖಾಯಂ ಆಗಿ) ವ್ಯಾಪಾರ ಮಾಡುವ ಝಾಹೆರ್, ಮುಸ್ತಾಫಾ,

ತೋಟದ ಮೇಸ್ತ್ರಿ ಸೈಯದ್,

ನಮ್ಮ ಮನೆಯಲ್ಲಿ ಮೆಣಸು ಕೊಯಲು ಬರುವ ಅಚ್ಚಿ, ರಝಾಕ್,

ನಮ್ಮಲ್ಲಿಗೆ ತರಕಾರಿ ತರುವ ಇಮ್ತಿಯಾಝ್ ,

ಹಣ್ಣಂಗಡಿ ಸುಲೈಮಾನ್,

ನಮ್ಮೂರಿನ ಹೋಟೆಲಿನ ಮಮ್ಮದು, ಹೈದರಾಲಿ,

ನಮ್ಮ ರಂಗ ಮಂದಿರ ವಿದ್ಯುದೀಕರಣ ಮಾಡಿಸಿ ಕೊಟ್ಟ ಅಶ್ಮತ್ ಸಾಬರು,

ನೀರಿನ ಟ್ಯಾಂಕ್ ಕೊಟ್ಟ ಜಾವೀದ್,

ನಾನು ತಲೆ ಕೆಟ್ಟಾಗಲೆಲ್ಲ ರಾಜಕೀಯ ಚರ್ಚೆ ಮಾಡುವ ಅಮೀರ್ ಜಾನ್, ಮತ್ತು ಷರೀಫ್,

ನಮ್ಮ ನಾಟಕತಂಡದ ಪ್ರವಾಸಗಳಿಗೆ ವ್ಯಾನ್ ಒದಗಿಸುವ ಇಬ್ರಾಹಿಂ ಮತ್ತು ಇಬ್ರಾಹಿಂ,

ಗೆಳೆಯರಾದ ಇಸ್ಮಾಯಿಲ್, ಹಮೀದ್. ಅಥಾವುಲ್ಲಾ.ಇಸಾಕ್

ನಾನು ಚಿಕ್ಕವನಿದ್ದಾಗ ನಮ್ಮ ಮನೆಗೆ ಹಾಲು ತಂದು ಕೊಡುತ್ತಿದ್ದ ನನ್ನನ್ನು ಎತ್ತಿಕೊಂಡು ಆಟವಾಡಿಸುತ್ತಿದ್ದ ಅಬ್ದುಲ್ ಮಾನ್

ನಮ್ಮ ನೆರೆಮನೆಯ ಅಜ್ಜ ಮಾಮುಬ್ಯಾರಿಗಳು

ಇವರೆಲ್ಲ ನಮ್ಮಲ್ಲಿ, ನಾನು ಅವರಲ್ಲಿ ಟೀ ಕುಡಿದು.. ಊಟಮಾಡಿ..

ಗುಣಪಡಿಸಲಾಗದ ಭೀಕರ ಖಾಯಿಲೆ ಬಂದು ಬಿಟ್ಟಿದೆ..

Add Comment

Leave a Reply