Quantcast

ಬ್ರೇಕಿಂಗ್ ನ್ಯೂಸ್ ಕೊಟ್ಟಾಯ್ತು..

ಅಶ್ವಿನಿ ಎಂ ಶ್ರೀಪಾದ್ 

ಮೇಲಿಂದ ಕೆಳಕ್ಕೆ ಬಿದ್ದ
ಜೀವಗಳೆರೆಡು ಮೇಲೆ ಹೋಗಾಯ್ತು,
ವೃತ್ತ ಪತ್ರಿಕೆ ಅವ್ರಿಗೆ ಪುಟ ಒಂದರ
ರೋಚಕ ಸುದ್ದಿ ಸಿಕ್ಕಾಯ್ತು ,
ರೋಧನ ಮುಗಿಲು ಮುಟ್ಟಿತೆಂದು
ಬ್ರೇಕಿಂಗ್ ನ್ಯೂಸ್ ಕೊಟ್ಟಾಯ್ತು,
ಟಿವಿ ಚಾನಲ್ ಅವ್ರ ಪ್ಯಾನೆಲ್ ಡಿಸ್ಕಶನ್
deathದಿನವಿಡೀ ಮಾತನಾಡುವ,
ಬಾಯ್ ವೀರರು ಕೂತಾಯ್ತು,
Facebook ಟ್ವಿಟರ್ ನಲ್ಲಿ
RIP ಶ್ರದ್ಧಾಂಜಲಿ ಸೂಚಿಸಿ ಆಯ್ತು,
ಮುಂದೇನು ?
ಆರು ತಿಂಗಳಾಯ್ತು
ಸಿನೆಮಾ ರಿಲೀಸ್ ಆಯ್ತು
ಸ್ಟಂಟ್ ಮಾಡಿದವನ ಫೋಟೋದಲ್ಲಿ
ಗಂಧಹಾರದೊಂದಿಗೆ ಅವನ ಮನೆಯಲ್ಲಿ ನೇತಾಡುತ್ತಿತ್ತು,
ಥಿಯೇಟರ್ ಮುಂದೆ ,
ಹೀರೊನ ಮುಗಿಲೆತ್ತರ ಕಟ್ ಔಟ್ ಮೇಲೆ
ಹಾರ ಹಾರಾಡುತ್ತಿತ್ತು,
ಶಿಳ್ಳೆ – ಚಪ್ಪಾಳೆ -ಪಟಾಕಿ ಸದ್ದಿನ ನಡುವೆ
ಸತ್ತವನ ಹೆಂಡತಿ ಮಕ್ಕಳ, ಅಮ್ಮ-ಅಪ್ಪನ
ಬಿಕ್ಕು ಕೇಳಿಸಲೇ ಇಲ್ಲ !!

Add Comment

Leave a Reply

%d bloggers like this: