Quantcast

ನವೆಂಬರ್ ೧೫ ರಂದು ಬಿ ಎ ಸನದಿ, ನೇಮಿಚಂದ್ರಗೆ ಪ್ರಶಸ್ತಿ ಪ್ರದಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ನೀಡಲಾಗುವ ಡಾ ಗುಬ್ಬಿವೀರಣ್ಣ ಪ್ರಶಸ್ತಿ ಹಾಗೂ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ಪ್ರಕಟಿಸಿದ್ದಾರೆ.

2015ನೇ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ದಿನಾಂಕ: 15-11- 2016ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಶ್ರೀ ಸುರೇಶ್ ತಲ್ವಾಲಕರ್ ರವರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ರೂ.5.00ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಹೊಂದಿದೆ. ಉಳಿದ ಎಲ್ಲಾ ಪ್ರಶಸ್ತಿಗಳು ರೂ.3.00ಲಕ್ಷ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ.

ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಶ್ರೀ ಸುರೇಶ್ ತಲ್ವಾಲಕರ್, ಮುಂಬೈ
‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ ಶ್ರೀ ಪೀಟರ್ ಲೂಯಿಸ್, ದ.ಕ

ಜಕಣಾಚಾರಿ ಪ್ರಶಸ್ತಿ ಶ್ರೀಮತಿ ಎನ್. ಪುಷ್ಪಮಾಲಾ, ಬೆಂಗಳೂರು

‘ಸಂತ ಶಿಶುನಾಳ ಷರೀಫ ಪ್ರಶಸ್ತಿ’ ಶ್ರೀಮತಿ ರತ್ನಮಾಲಾ ಪ್ರಕಾಶ್, ಬೆಂಗಳೂರು:

‘ಶ್ರೀ ನಿಜಗುಣ ಪುರಂದರ ಪ್ರಶಸ್ತಿ’ ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು

‘ಕುಮಾರವ್ಯಾಸ ಪ್ರಶಸ್ತಿ’ ಶ್ರೀಮತಿ ಕಮಲಮ್ಮ ವಿಠ್ಠಲರಾವ್, ಬೆಂಗಳೂರು

ಶಾಂತಲಾ ನಾಟ್ಯ ಪ್ರಶಸ್ತಿ ಶ್ರೀಮತಿ ಎಂ. ಶಕುಂತಲಾ, ಬೆಂಗಳೂರು

ಜಾನಪದ ಶ್ರೀ ಪ್ರಶಸ್ತಿ’ ಶ್ರೀ ಸತ್ತೂರ ಇಮಾಂಸಾಬ್, ಬಳ್ಳಾರಿ

‘ಡಾ. ಗುಬ್ಬಿವೀರಣ್ಣ ಪ್ರಶಸ್ತಿ ಶ್ರೀ ಆರ್. ಪರಮಶಿವನ್, ಬೆಂಗಳೂರು

‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಶ್ರೀಮತಿ ನೇಮಿಚಂದ್ರ, ಬೆಂಗಳೂರು.

‘ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ ಶ್ರೀ ಎಂ.ಎಸ್. ಸಿಂಧೂರ

‘ಬಿ.ವಿ. ಕಾರಂತ ಪ್ರಶಸ್ತಿ’ ಡಾ. ನ.ರತ್ನ, ಮೈಸೂರು

‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ ಶ್ರೀ ಜಂಬಣ್ಣ ಅಮರಚಿಂತ, ರಾಯಚೂರು

‘ಪಂಪ ಪ್ರಶಸ್ತಿ’ ಡಾ. ಬಿ.ಎ.ಸನದಿ, ಕುಮಟಾ, ಉತ್ತರ ಕನ್ನಡ ಜಿಲ್ಲೆ.

Add Comment

Leave a Reply