Quantcast

ಶ್ಯಾಮ ಬಂದ ರಾಧೆಯೆಡೆಗೆ..

ಸುಧಾ ಆಡುಕಳ

ಶ್ಯಾಮ ಬಂದ ರಾಧೆಯೆಡೆಗೆ | ಸೂರ್ಯನಿಳಿವ ಹೊತ್ತು|
ರಾಧೆಯೀಗ ಹಣ್ಣುಮುದುಕಿ| ಕುಳಿತಿದ್ದಳು ಕೌದಿಯ ಹೊದ್ದು|
ಬಂದೇ ರಾಧೆ ಎಂದ ಶ್ಯಾಮ | ಬರುವಿಯೆಂದು ಗೊತ್ತು|
ಕಾಯುತ್ತಿದ್ದೆಯೇನು ರಾಧೆ | ಶ್ಯಾಮ ನುಡಿದ ಸೋತು |

ಕಾಯ್ವ ಮಾತು ಯಾಕೆ ಬಂತು | ಇಲ್ಲೇ ಇದ್ದೆ ನೀನು |
ಹೋದೆ ಕಾದೆ ಎಂಬುದೆಲ್ಲ | ಬರಿಯ ಭ್ರಮೆಯ ಮಾತು |
ರಾಧೆ ಕೈಯ್ಯ ಹಿಡಿದ ಶ್ಯಾಮ | ಕೈಯ್ಯ ತುಂಬ ಸುಕ್ಕು |
ಇಷ್ಟು ಒರಟು! ಎಷ್ಟು ದುಡಿದೆ?| ಎಂದ ಮುತ್ತನಿಟ್ಟು |

krishna

ಲೆಕ್ಕಕ್ಕಿಲ್ಲಿ ಜಾಗವಿಲ್ಲ |ಸುರಿದ ಬೆವರ ಧಾರೆ |
ಹನಿಹನಿಯಲು ನೀನೆ ಇದ್ದೆ | ಈಗ ಬಂದೆ ಎದುರಿಗೆ|
ಸುಕ್ಕಲ್ಲ ಇದು ನಿನ್ನ ರುಜು| ನನ್ನೆಲ್ಲ ಸ್ರಮದ ದುಡಿಮೆಗೆ|
ಹಸಿರ ರಾಶಿ ವನದ ತುಂಬ| ಸಾಕ್ಷಿಯಾಗಿದೆ ಒಲವಿಗೆ|

ಬೃಂದಾವನವೇ ವಲಸೆ ಬಂದು| ನೆಲೆಸಿದಂತಿದೆ ಇಲ್ಲಿಯೆ|
ನಾನು ಬರದೆ ಹೇಗೆ ಇರಲಿ?| ಶ್ಯಾಮ ನುಡಿದ ರಾಧೆಗೆ|
ಕಣ್ಣಾ ನಿನ್ನ ಮೈಯ್ಯ ನುಣುಪು| ಚಿಗುರ ತುದಿಯ ನವಿರಲಿ|
ನಿನ್ನ ಕೊಳಲ ಮಧುರಗಾನ| ಹೂವಿನ ಪಿಸುಮಾತಲಿ|

ಕೌದಿಯೊಳಗ ಬಿಸಿಯ ಗಾಳಿ| ಶ್ಯಾಮನೆದೆಯ ಸೋಕಿತು|
ಸುಕ್ಕುಗಟ್ಟಿದ ರಾಧೆ ಕರವು|ಪ್ರೇಮ ಕವನವಾಯಿತು

One Response

  1. S.p.vijaya Lakshmi
    November 12, 2016

Add Comment

Leave a Reply