Quantcast

ನಾಳೆ ಎ ಎನ್ ಮುಕುಂದ ಅವರ ಕೃತಿ ಬಿಡುಗಡೆ

a-n-mukund-bookಮನುಷ್ಯನ ಮುಖವೇ ಅವನ ವ್ಯಕ್ತಿತ್ವದ ಒಂದು ಅಭಿವ್ಯಕ್ತಿ.

ಈ ಅಭಿವ್ಯಕ್ತಿ ಸದಾ ಒಂದೇ ರೀತಿ ಇರುವುದಿಲ್ಲವಷ್ಟೆ.. ಕಲಾತ್ಮಕ ಎನ್ನಬಹುದಾದ ಪೋರ್ಟ್ರೇಟ್ ಒಂದು ಬಗೆಯ ಸಂದಿಗ್ಧಾರ್ಥದಿಂದ ಕೂಡಿದ್ದು.  ಮತ್ತೆ ಸಂದಿಗ್ಧಾರ್ಥವೆನ್ನುವುದು ಯಾರು ಯಾರನ್ನು ಹೇಗೆ ಸೆರೆಹಿಡಿದಿದ್ದಾರೆ ಎಂಬುದನ್ನು ಅವಲಂಬಿಸಿದ್ದು..

ವ್ಯಕ್ತಿಗಳನ್ನು ಹಾಗೆ ಏಕಾಗ್ರತೆಯಿಂದ ಸೆರೆಹಿಡಿಯಬಲ್ಲ ಕ್ಷಣವಿದೆಯಲ್ಲ, ಅದು ಹೆನ್ರಿಕಾತರ್ಿಯೆ-ಬ್ರೆಸೋನ ಮಾತಿನಲ್ಲಿ, ಒಂದು ‘ನಿರ್ಣಾಯಕ ಕ್ಷಣ’. ಮುಕುಂದರ ಫೋಟೋಗಳ ಯಶಸ್ಸಿರುವುದೇ ಅವರು ಆ ನಿರ್ಣಾಯಕ ಕ್ಷಣವನ್ನು ಹಿಡಿದಿರುವುದರಲ್ಲಿ. ಇದಕ್ಕೆ ನಿದರ್ಶನವಾಗಿವೆ

ಜಿ.ಬಿ. ಜೋಶಿ, ಪು.ತಿ.ನ., ರಾಮಚಂದ್ರ ಶರ್ಮ, ಕೆ.ವಿ.ಸುಬ್ಬಣ್ಣ, ಡಿ.ಆರ್.ನಾಗರಾಜ್ ಮೊದಲಾದವರ ಫೋಟೋಗಳು…. ಅವರ ಕ್ಯಾಮೆರಾಕ್ಕೆ ಸಿಕ್ಕಿರುವ ಲೇಖಕರೆಲ್ಲರೂ ಒಂದಾನೊಂದು ಕಾಲದ ಒಂದು ಕ್ಷಣದಲ್ಲಿ ಒಬ್ಬರಿಗಿಂತ ಒಬ್ಬರು ವೈಯಕ್ತಿಕ ಹಂತದಲ್ಲಿ ಹೇಗೆ ಅಪೂರ್ವವಾಗಿದ್ದರೆಂದು ದಾಖಲಿಸುತ್ತಿದೆ ಈ ಅಪೂರ್ವ ಪುಸ್ತಕ.

ನಮ್ಮಲ್ಲಿ ಇಂಥದೊಂದು ಪುಸ್ತಕ ಇಷ್ಟು ಸರ್ವಾಂಗ ಸುಂದರವಾಗಿ ಪ್ರಕಟವಾಗುತ್ತಿರುವುದು ಇದೇ ಮೊದಲು. ನಮ್ಮ ಲೇಖಕ ಲೇಖಕಿಯರನ್ನು ನಾವು ನೋಡಿರುವುದಕ್ಕಿಂತ ಭಿನ್ನವಾಗಿ ನಮಗೆ ‘ಕಾಣಿಸುವ’ ಈ ಪುಸ್ತಕಕ್ಕಾಗಿ ಮುಕುಂದರಿಗೆ ಸಲ್ಲಬೇಕಾದ್ದು ನಮ್ಮೆಲ್ಲರ ಅಭಿನಂದನೆ ಮತ್ತು ಅಭಿವಂದನೆ.

ಎಸ್. ದಿವಾಕರ್ ( ಮುನ್ನುಡಿಯಿಂದ )

*****

5-g-b-joshi

ಎ.ಎನ್.ಮುಕುಂದ್ ಕಳೆದ ನಾಲ್ಕು ದಶಕಗಳಿಂದ ಓರ್ವ ಗಂಭೀರ ಸಿನಿಮ ವಿಧ್ಯಾರ್ಥಿಯಾಗಿ ವಿಶ್ವದ ಮೇರು ಕೃತಿಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಅವರ ಮುಖ್ಯ ಹವ್ಯಾಸವಾದ ಪೋರ್ಟ್ರೇಟ್ ಫೋಟೋಗ್ರಫಿಯಲ್ಲೂ ಓಜು ಹಾಗು ಸತ್ಯಜಿತ್ ರೇ ಚಿತ್ರಗಳಲ್ಲಿ ಅವರು ಮೆಚ್ಚುವ ಕೆಲವು ಅಂಶಗಳ ಪ್ರತಿಫಲನವನ್ನೆ ಕಾಣಬಹುದು.. ತನ್ನ ಪಕ್ಕದಲ್ಲಿ ಕುಳಿತವರನ್ನೂ ಗಮನಿಸದೆ, ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದುದಕ್ಕೆ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ. ಕೆಲವು ಛಾಯಾಚಿತ್ರಗ್ರಾಹಕರು ಕಾದು ಸೆರೆಹಿಡಿ0ುುವುದು ಅಂತಹ ‘ಒಳಗಿನ ವ್ಯಕ್ತಿ’ಯನ್ನು. ಮುಕುಂದರ ಛಾ0ಾಚಿತ್ರಗಳು ಈ ಧಾಟಿಯವು…

ಈ ಚಿತ್ರಗಳನ್ನು ನೋಡುತ್ತಿರುವಾಗ ಸುಫ್ ಕಾಷರ್್ ಹಾಗು ನಮ್ಮವರೇ ಆದ ಕೆ.ಜಿ. ಸೋಮಶೇಖರ್ ಅವರ ಛಾಯಾಚಿತ್ರಗಳು ನೆನಪಾಗುತ್ತವೆ.. ಕನ್ನಡಕ್ಕೆ ಅಪರೂಪವೆನಿಸುವ ಇಂಥ ಒಂದು ಪುಸ್ತಕ ಕೊಟ್ಟಿದ್ದಕ್ಕಾಗಿ ಮುಕುಂದ್ ಅವರನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಈ ಪುಸ್ತಕವು ನಮ್ಮ ನೋಡುವ ಕ್ರಮಕ್ಕೆ, ಕ್ಲಿಕ್ಕಿಸುವ ಕ್ರಮಕ್ಕೆ ಹೊಸ ಅರಿವು, ಕಸುವು ತರಲೆಂದು ಹಾರೈಸುತ್ತೇನೆ.

ಗಿರೀಶ್ ಕಾಸರವಳ್ಳಿ ( ಹಿನ್ನುಡಿಯಿಂದ )

a-n-mukund

ಎ ಎನ್ ಮುಕುಂದ (1955)

ಈಗಿನ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನನ. ಹರಿಹರ, ದಾವಣಗೆರೆಯಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರಿನ ಬಿ ಎಮ್ ಎಸ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಪದವಿ.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೂವತ್ತು ವರ್ಷ ಸೇವೆಯ ನಂತರ ಹಿರಿಯ ಇಂಜಿನೀಯರ್ ಹುದ್ದೆಯಿಂದ ಸ್ವಯಂ ನಿವೃತ್ತಿ. 1972 ರಿಂದ ಫೋಟೋಗ್ರಫಿಯಲ್ಲಿ ಆಸಕ್ತಿ. ಭಾವಚಿತ್ರ (Portrait) ಫೋಟೋಗ್ರಫಿಯ ಬಗ್ಗೆ ವಿಶೇಷ ಒಲವು. ಕಳೆದ ಮೂವತ್ತು ವರ್ಷಗಳಲ್ಲಿ ಕೇಂದ್ರ ಹಾಗು ರಾಜ್ಯ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ, ನೀನಾಸಂ (ಹೆಗ್ಗೋಡು), ಭಾರತೀಯ ವಿದ್ಯಾ ಭವನ (ಬೆಂಗಳೂರು), ಹಂಪಿ ಕನ್ನಡ ವಿಶ್ವವಿದ್ಯಾಲಯ, ಇನ್ಫೋಸಿಸ್ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅನೇಕ ಊರುಗಳಲ್ಲಿ ಪ್ರಾಯೋಜಿತ ಏಕವ್ಯಕ್ತಿ ಪ್ರದರ್ಶನ ನಡೆಸಿದ್ದಾರೆ.

ರಾಷ್ಟ್ರ ಹಾಗು ರಾಜ್ಯ ಮಟ್ಟದ ಹಲವಾರು ಪತ್ರಿಕೆ/ನಿಯತಕಾಲಿಕೆಗಳಲ್ಲಿ ಮತ್ತು ಸಾಹಿತ್ಯ ಕೃತಿಗಳ ಹೊದಿಕೆಗಳಲ್ಲಿ ನಿರಂತರವಾಗಿ ಇವರ ಭಾವಚಿತ್ರಗಳು ಪ್ರಕಟವಾಗಿವೆ. ಭಾವಚಿತ್ರಗಳಲ್ಲದೆ ಹಲವಾರು ಫೋಟೋ ಫೀಚರ್ ಗಳನ್ನೂ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದುವು ಅಂಧ ಮಕ್ಕಳ ಕುರಿತ ‘Defying Darkness’, ‘ಪುತಿನ ಮತ್ತು ಮೇಲುಕೋಟೆ’, ಕೋಮು ಸೌಹಾರ್ದತೆ ಕುರಿತ ‘Beyond Religion’. ಫೋಗ್ರಫಿಲ್ಲದೆ ಸಾಹಿತ್ಯ, ಸಿನೆಮಾಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಜಗತ್ತಿನ ಕೆಲವು ಶ್ರೇಷ್ಠ ಸಿನೆಮಾಗಳಿಗೆ ಕನ್ನಡ ಉಪಶೀರ್ಷಿಕೆಯನ್ನು ಅಳವಡಿಸಿದ್ದಾರೆ.

Add Comment

Leave a Reply