Quantcast

ಕಾವ್ಯಾ, ಬಸವರಾಜ ಡೋಣೂರ್, ಚೈತ್ರಾ ಸೇರಿದಂತೆ ಐವರಿಗೆ `ಅಮ್ಮ ಪ್ರಶಸ್ತಿ’

ಪ್ರತಿಷ್ಠಿತ ಅಮ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಾವ್ಯಾ ಕಡಮೆ, ಬಸವರಾಜ ಡೋಣೂರ್, ಡಾ ಕೆ ಎಸ್ ಚೈತ್ರಾ ಸೇರಿದಂತೆ ಐವರಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.  ಇಂದು ಪ್ರತಿಷ್ಠಾನದ ಮುಖ್ಯಸ್ಥರಾದ ಮಹಿಪಾಲರೆಡ್ಡಿ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನೂ ಘೋಷಿಸಲಾಗಿದೆ. ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ ‘ಅಮ್ಮ ಗೌರವ ಪ್ರಶಸ್ತಿ’ ಸಂದಿದೆ.

ಬೀದರಿನ ಪ್ರೇಮಾ ಹೂಗಾರ ಅವರ ಗಜಲ್ `ಪ್ರಣೀತೆ’, ಅಮೆರಿಕ ನ್ಯೂಜೆರ್ಸಿಯಾದ ಕಾವ್ಯ ಕಡಮೆ ಅವರ ಕಾದಂಬರಿ ಪುನರಪಿ’, ಮಧ್ಯಪ್ರದೇಶ ಕೇಂದ್ರೀಯ ವಿವಿ ಕುಲಸಚಿವ ಡಾ.ಬಸವರಾಜ ಡೋಣುರ ಅವರ ವಿಮರ್ಶೆ `ನೋಟ -ನಿಲುವು’, ಬಾಳಾಸಾಹೇಬ ಲೋಕಾಪುರ ಅವರ `ಕೃಷ್ಣೆ ಹರಿದಳು’, ಡಾ.ಕೆ.ಎಸ್.ಚೈತ್ರಾ ಅವರ `ಬಳೆಗಳ ಭಾರ ಹೊತ್ತು’ ಕೃತಿಗಳನ್ನು 16 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆಯಾಗಿವೆ.

ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕ, ಪ್ರಮಾಣ ಪತ್ರ ಒಳಗೊಂಡಿರುತ್ತದೆ.

ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಂ ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

dr-donur

kavya

lokapur

prema-hugar

dr-k-s-chaitra

 

Add Comment

Leave a Reply