Quantcast

ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ ‘ಅಮ್ಮ ಗೌರವ ಪ್ರಶಸ್ತಿ’

ಪ್ರತಿಷ್ಠಿತ ಅಮ್ಮ ಗೌರವ ಹಾಗೂ ಪುಸ್ತಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ನಾಗೇಶ್ ಹೆಗಡೆ, ರಾಜೇಶ್ವರಿ ತೇಜಸ್ವಿ, ಎಚ್ ಟಿ ಪೋತೆ ಸೇರಿದಂತೆ ಐವರಿಗೆ ‘ಅಮ್ಮ ಗೌರವ ಪ್ರಶಸ್ತಿ’ ಹಾಗೂ ಕಾವ್ಯಾ ಕಡಮೆ, ಬಸವರಾಜ ಡೋಣೂರ್, ಡಾ ಕೆ ಎಸ್ ಚೈತ್ರಾ ಸೇರಿದಂತೆ ಐವರಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.  ಇಂದು ಪ್ರತಿಷ್ಠಾನದ ಮುಖ್ಯಸ್ಥರಾದ ಮಹಿಪಾಲರೆಡ್ಡಿ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದರು

`ಅಮ್ಮ ಗೌರವ’ ಪುರಸ್ಕಾರಕ್ಕೆ ಲೇಖಕಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ, ಹಿರಿಯ ವಿಜ್ಞಾನ ಲೇಖಕ, ಅಂಕಣಕಾರ ನಾಗೇಶ ಹೆಗಡೆ, ಸಾಂಸ್ಕೃತಿಕ ವ್ಯಕ್ತಿತ್ವದ ರಾಜಾ ಮದನಗೋಪಾಲ ನಾಯಕ, ಕಲಬುರಗಿ ವಿವಿ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ.ಎಚ್.ಟಿ.ಪೋತೆ ಹಾಗೂ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇಡಂನಲ್ಲಿ ಸಾಮಾಜಿಕ ಕಳಕಳಿಯಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ.ಪಿ.ಎಚ್.ಶಹಾ ಅವರಿಗೆ ಅಮ್ಮ ಪ್ರಶಸ್ತಿ ದೊರಕಿದೆ.

ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಂ ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

rajeshwari-tejasvi

dr-htpote

raja-madangopal-nayak

dr-p-h-shah

One Response

  1. ವಿಜಯೇಂದ್ರ ಕುಲಕರ್ಣಿ (ಮಳ್ಳಿ) ಕಲಬುರಗಿ
    November 14, 2016

Add Comment

Leave a Reply