Quantcast

ಬಾಬುಲಾಲ್… ಅಂಬಿಗ

kumaraa raaita

ಕುಮಾರ ರೈತ 

ಬಾಬುಲಾಲ್… ಅಂಬಿಗ.

ಇದು ಮನೆತನದ ವೃತ್ತಿಯೂ ಹೌದು. ಈತನ ಮಗನೂ ಅಪ್ಪನ ಹಾದಿಯನ್ನೇ ಅನುಸರಿಸಿದ್ದಾನೆ. ಪಾರಂಪಾರಿಕವಾಗಿ ಇದೇ ಕಾಯಕ, ಆದರೆ ಸ್ವಂತಕ್ಕೊಂದು ದೋಣಿ ಇಲ್ಲ. ಇದು ಇವರಿಬ್ಬರ ವ್ಯಥೆ ಮಾತ್ರವಲ್ಲ. ವಾರಣಾಸಿಯ ಬಹುತೇಕ ಅಂಬಿಗರ ವ್ಯಥೆಯೂ ಹೌದು. ದೋಣಿಗಳ ಮಾಲೀಕರ ಬಳಿ ಇವರ ಕೆಲಸ. ಸಂಜೆ ಹೋಗುವಾಗ ಅವರು ಒಂದಿಷ್ಟು ನೀಡುವ ಹಣವೇ ಇವರಿಗೆ ಸಂಬಳ. ಆದರಿದು ಜೀವನಕ್ಕೆ ಏನೂ ಸಾಲದು.

ganga-riverವಾರಣಾಸಿಯಲ್ಲಿ ಇದ್ದಷ್ಟೂ ದಿನವೂ ಬೆಳಕು ಮೂಡುವ ಮುಂಚೆ ಗಂಗಾನದಿ ತಟಕ್ಕೆ ಧಾವಿಸುವಿಕೆ. ಎರಡನೇ ದಿನ ದೋಣಿಯೇರಿದಾಗ ಹುಟ್ಟು ಹಾಕತೊಡಗಿದವರು ಇದೇ ಬಾಬುಲಾಲ್. ಈ ವಿಶಿಷ್ಟ ನಗರದ ನೂರಾರು ವರ್ಷಗಳ ಚರಿತ್ರೆ ಈತನ ನಾಲಿಗೆ ಮೇಲೆ ನಲಿದಾಡುತ್ತದೆ.

ಇಲ್ಲಿರುವ 87 ಘಾಟುಗಳ ಹುಟ್ಟು, ಬೆಳವಣಿಗೆಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಾರೆ. ಇದರಲ್ಲಿ ನಿಜ, ದಂತಕಥೆ ಎಲ್ಲವೂ ಬೆರೆತು ಹೋಗಿದೆ ಎನಿಸುತ್ತದೆ. ಇಲ್ಲಿನ ವಿಷಯಗಳನ್ನು ಕೇಳಿದ ನಂತರ ಬಾಬುಲಾಲ್ ಅವರದ್ದೇ ನಿಜಕಥೆ ಕೇಳಬೇಕೆನ್ನಿಸುತು.

ಗಂಗಾನದಿ ಸ್ವಚ್ಚತೆ ವಿಷಯದ ಬಗ್ಗೆ ಬಂದಾಗ ಬಾಬು ಭಾವುಕರಾದರು. ಈ ಕಾರ್ಯಕ್ಕೆ ಚಾಲನೆ ನೀಡಿದವರು ರಾಜೀವ್ ಗಾಂಧಿ. ಅವರ ನಂತರ ಬಂದ ಪ್ರಧಾನಿಗಳಲ್ಲಿ ಮೋದಿ ಮಾತ್ರ ಆಸಕ್ತಿ ವಹಿಸಿದ್ದಾರೆ. ಆದರೆ ಈ ಸ್ವಚ್ಚತಾ ಆಂದೋಲನ ಎಲ್ಲಿಯ ತನಕ ಬಂದು ನಿಲ್ಲುತ್ತದೆಯೋ ನೋಡಬೇಕು ಎಂದರು.

‘ಗಂಗೆ ತನ್ನ ಈ ದಡದಲ್ಲಿ ವಾಸಿಸುವ ಎಲ್ಲರನ್ನೂ ಪೊರೆಯುತ್ತಾ ಬಂದಿದ್ದಾಳೆ. ಅವಳು ಉಳಿದರಷ್ಟೆ ನಾವೂ ಉಳಿಯಲು ಸಾಧ್ಯ. ಬಂದವರೆಲ್ಲರಿಗೂ ಇದು ಅರ್ಥವಾಗಬೇಕಷ್ಟೆ’ ಎಂದೇಳಿ ದೊಡ್ಡ ನಿಟ್ಟುಸಿರು ಹೊರಬಿಟ್ಟರು.

Add Comment

Leave a Reply

%d bloggers like this: