Quantcast

ಕಟ್ಪಾಡಿ ಎಂಬ ಹೃದಯವಂತ ಕತೆಗಾರ..

ಫಕೀರ್ ಮಹಮ್ಮದ್ ಕಟ್ಪಾಡಿ
ಎಂಬ ಹೃದಯವಂತ ಕತೆಗಾರ…!!

giridhara-karkala

ಗಿರಿಧರ ಕಾರ್ಕಳ 

fakir-mohammed-katpadi2ಸೂಕ್ಷ್ಮ ಸಂವೇದನೆಯ ಅನನ್ಯ ಕತೆಗಾರರು, ನನ್ನ ಬಹುಕಾಲದ ಗೆಳೆಯರೂ ಆಗಿರುವ ಕಟ್ಪಾಡಿಯವರನ್ನು ನೋಡಲು ನಿನ್ನೆ ಅವರ ಮನೆಗೆ ಹೋಗಿದ್ದೆ. 1981 ರಲ್ಲಿ ನಾನು ಮೂಡಿಗೆರೆಯಲ್ಲಿದ್ದಾಗ ನನಗೆ ಪರಿಚಯವಾದವರು.ಆಗಅವರು SBI ನಾನು SBM.
ಆಗಲೇ ಕತೆಗಾರರಾಗಿ ಪ್ರಸಿದ್ಧರಾಗಿದ್ದರು..

‘ಸರಕುಗಳು’ ‘ಕಚ್ಚಾದ’ದಂತಹ ಶ್ರೇಷ್ಠ ಕಾದಂಬರಿಗಳನ್ನು, ‘ನೋಂಬು’ ‘ದಜ್ಜಾಲ’ದಂತಹ ಆರು ವಿಶಿಷ್ಟ ಕಥಾಸಂಕಲನಗಳನ್ನು ಬರೆದ ಕಟ್ಪಾಡಿಯವರು ಅನಾರೋಗ್ಯದಿಂದ ದೈಹಿಕವಾಗಿ ಜರ್ಝರಿತರಾಗಿದ್ದರೂ ಬರೆಯುವ ಅದಮ್ಯ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ..!!

ಮೊಮ್ಮಗನೊಂದಿಗೆ ಖುಷಿಯಿಂದ ಇದ್ದ ಕಟ್ಪಾಡಿ ,ನಾನು ಹೊರಟಾಗ ಗೇಟಿನವರೆಗೂ ಬಂದು ಬೀಳ್ಕೊಟ್ಟದ್ದಲ್ಲದೆ
‘ಕಡವು ಮನೆ’ ಅನ್ನುವ ಅವರ ಮೂರು ನೀಳ್ಗತೆಗಳ ಸಂಕಲನವನ್ನೂ ಪ್ರೀತಿಯಿಂದ ಕೊಟ್ಟರು..!!

ಇವತ್ತು ಮೈಸೂರಿಗೆ ಬಸ್ಸಿನಲ್ಲಿ ಹೋಗಿ ಬರುವಷ್ಟರಲ್ಲಿ ಕಡವು ಮನೆಯನ್ನು ಒಂದೇ ಗುಟುಕಿನಲ್ಲಿ ಓದಿಯೂ ಮುಗಿಸಿದೆ.
ಕಡವು ಮನೆ ಎಂಬ ಕತೆಯಂತೂ ನಿಜಕ್ಕೂ ಅತ್ಯಂತ ಮನೋಜ್ಞ,ಹೃದಯಸ್ಪರ್ಶಿ ಕತೆ. ಓದುವಾಗ ಅದೆಷ್ಟು ಸಲ ಕಣ್ಣೀರು ಜಿನುಗಿತೋ ಗೊತ್ತಿಲ್ಲ….!!

ಇಂಥಾ ನೂರಾರು ಕತೆಗಳನ್ನು ನಮಗೆ ಕೊಡಲಿಕ್ಕಾದರೂ ಫಕೀರ್ ಮಹಮ್ಮದ್ ಕಟ್ಪಾಡಿ ಮತ್ತೆ ಆರೋಗ್ಯವಂತರಾಗಿ ನೂರಾರು ವರ್ಷ ನಮ್ಮೊಂದಿಗಿರಬೇಕು. ಇದು ಕಟ್ಪಾಡಿಯವರ ಓದುಗರೆಲ್ಲರ ಪ್ರೀತಿಯ ಹಾರೈಕೆ…!!

One Response

  1. ಲಲಿತಾ ಸಿದ್ಧಬಸವಯ್ಯ
    November 29, 2016

Add Comment

Leave a Reply