Quantcast

ನವಿರಾಗಿ ಕಚಗುಳಿ ಇಟ್ಟು..

ಪ್ರೇಮಕಾವ್ಯ

ಸರೋಜಿನಿ ಪಡಸಲಗಿ

ಮೂಡಣದ ಕೆಂಪಿನಲಿ ಪಡುವಣದ ತಂಪು ಬೆರೆಸಿ
ಹೃದಯದಂಗಳದಿ ಒಂದು ನಂದಾದೀಪವಾ ಬೆಳಗಿಸಿ
ಎದೆತುಂಬ ಬೆಚ್ಚಗಿನ ಮೃದು ನೆನಪುಗಳುಬ್ಬರಿಸೆ
ನವಿರಾಗಿ ಕಚಗುಳಿ ಇಟ್ಟು ಹರಿವ ಮಧುರ ಭಾವಧಾರೆಯೇ ಪ್ರೇಮ ಕಾವ್ಯ

ಹೊಳೆವ ಕಂಗಳ ತುಂಬ ಕನಸುಗಳ ಸಂತೆ
ಸುಳಿವ ತಂಗಾಳಿಯಲಿ ತೇಲುತಿಹ  ಹಂಸಗೀತೆ
ಮನತುಂಬ ಉಕ್ಕುತಿಹ  ಅನುರಾಗದ ಗುಂಜಾರವತೆ
ಆಗ  ಕಚಗುಳಿ ಇಟ್ಟು ಹರಿವ ಮಧುರಭಾವ ಧಾರೆಯೇ  ಪ್ರೇಮಕಾವ್ಯ

ಚುಕ್ಕಿ ಚಂದ್ರಮನ ಬೆಳ್ಳಿ ಬೆಳಕ ಹೊಳೆಯಲಿ
ನವಿಲ ನಾಟ್ಯ ಲಾಸ್ಯದಲಿ ತೇಲಿ ಬರುವ ಪ್ರೀತಿ ನೆನಪಲಿ
ಮನ ಮತ್ತೇರಿ ಹೊಯ್ದಾಡಿ ತೂರಾಡಿ ತೊನೆಯುತಿರೆ
ನವಿರಾಗಿ  ಕಚಗುಳಿ ಇಟ್ಟು ಹರಿವ ಮಧುರ ಭಾವಧಾರೆಯೇ ಪ್ರೇಮ ಕಾವ್ಯ

Add Comment

Leave a Reply