Quantcast

ಕಲಾಪ್ರಿಯರಿಗೆ ಡಬಲ್ ಧಮಾಕಾ..!!

ಗಿರಿಧರ ಕಾರ್ಕಳ

ಬೆಂಗಳೂರಿನ ಕಲಾಸಕ್ತರಿಗೆ ಈಗ ಹಬ್ಬ..!!

ದಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯು 58 ನೇ ರಾಷ್ಟ್ರೀಯ ಕಲಾಪ್ರದರ್ಶನವನ್ನೇರ್ಪಡಿಸಿದ್ದರೆ ಚಿತ್ರ ಕಲಾ ಪರಿಷತ್ತಿನ ಆವರಣದಲ್ಲಿ ರಾಷ್ಟ್ರ ಮಟ್ಟದ ಕಲಾಶಿಬಿರಕ್ಕಾಗಿ ಯುವ ಕಲಾವಿದರ ದಂಡೇ ನೆರೆದಿದೆ…!!

ರಾಷ್ಟ್ರದಾದ್ಯಂತ ಆಯ್ಕೆ ಮಾಡಿದ ನೂರಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ ವರ್ತಮಾನ ಭಾರತದ ಕಲಾ ಲೋಕದ ದಿಕ್ಸೂಚಿಯೂ ಹೌದು.

ನಮ್ಮ ಕಲಾಲೋಕದ ದಿಗ್ಗಜರಲ್ಲೊಬ್ಬರಾದ ಅಲಮೇಲ್ಕರ್ ಅವರ ಸಮಗ್ರ ಕಲಾಕೃತಿಗಳ ಪ್ರದರ್ಶನವೂ ಅದೇ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿರುವುದು ಕಲಾಸಕ್ತರಿಗೆ ಹಬ್ಬದ ವಿಶೇಷ ಪಾಯಸದೂಟವೇ ಸರಿ…!!!

ಕಲಾಪ್ರಿಯರು, ಕಲಾವಿದರು, ಈ ಎರಡೂ ತಾಣಗಳಿಗೆ ಅವಶ್ಯ ಭೇಟಿ ನೀಡಿ..

Add Comment

Leave a Reply