Quantcast

‘ಚಾಹತ್’ ಚಹಾದ ನೆನಪಿನಲ್ಲಿ

ಕುಸುಮಾ ಪಟೇಲ್

ಅಚಾನಕ್ಕಾಗಿ ಅಂದು
ಅಣ್ಣನೊಡನೆ ನೀ ಬಂದದ್ದು
ನಮ್ಮೊಡನೆ ಚಹಾ ಕುಡಿದದ್ದು
ನೆಪ ಮಾತ್ರ

ಅಸಲಿಯತ್ತು
ನೀ ನನ್ನ
ನಾ ನಿನ್ನ
ನೋಡಬೇಕಿತ್ತು

ಚಹ ಕುಡಿದು
ಸದ್ದಿಲ್ಲದೆ
ನೀ ಹೊರಟುಹೋದೆ
ಜೊತೆಗೆ
ಮನದ ಚಿತ್ತಾರದ ಮೇಲೆ
ಸಹಿ ಮಾಡಿ
ಏಳು ಸುತ್ತಿನ ಕೋಟೆಯ
ಕೀಲಿ ಕೈ
ಕೊಂಡು ಹೋದೆ,

ತಿಳಿದದ್ದು ತಡವಾಗಿ.

 

ಈ ಚಹಾ ಕೂಟ
ಆ “ಚಾಹತ್” ಚಹಾದ ನೆನಪಿನಲ್ಲಿ
ಸಂಗಾತಿ ಗೆಳೆಯನಾದ ಖುಷಿಯಲ್ಲಿ
ಮಾಡಿದ್ದೇನೆ ಚಹಾ
ಸಿಹಿವರ್ಜಿತ ಚಹಕ್ಕೂ
ಸಕ್ಕರೆ ಹಾಕಿ

ಬಂದುಬಿಡು ಗೆಳೆಯಾ
ತಡ ಮಾಡದೆ
ಕುಡಿದು ಬಿಡೋಣ
ಜಪಾನಿಗಳ ಹಾಗೆ
ಸದ್ದಿಲ್ಲದೆ-

ಬದುಕ ಪುಟ ತಿರುಗಿಸುತ್ತಾ
ಬಿಸಿ ಆರುವ ಮುನ್ನ
ಘಮಲು ಉಡುಗುವ ಮುನ್ನ
ಬದುಕು ಜಾರುವ ಮುನ್ನ
ಮರೆಯಾಗುವ ಮುನ್ನ-

2 Comments

  1. Shama, Nandibetta
    March 1, 2017
    • kusuma patel
      March 1, 2017

Add Comment

Leave a Reply