Quantcast

ಹೊಸ ಕಣ್ಣಿನ ‘ಗಿಡಗಿಡುಗ’

ಕಥಾ ಸಿಯಾಹ್

‘ಕಥಾ ಸಿಯಾಹ್’  ತಂಡವು ಜುಲೈ ೨೦೧೫ ರಲ್ಲಿ ಕ್ಯಾರೆನ್ ಡಿ’ಮೆಲ್ಲೊ ಹಾಗೂ ಸುನಯನ ಪ್ರೇಮ್ ಚಂದರ್ ರವರಿಂದ, ಹೆಣ್ಣುಮಕ್ಕಳ ದೃಷ್ಟಿಕೋನದಿಂದ, ನೈಜ ಅನುಭವಗಳ ಆಧಾರಿತ ಸೃಜನಶೀಲ ರಂಗಪ್ರಯೋಗಗಳನ್ನು ಮಾಡುವ ಸಲುವಾಗಿ ಸ್ಥಾಪಿತವಾಯಿತು. ನಮ್ಮ ರಂಗಪ್ರಯೋಗಗಳು ವ್ಯಾಪಕವಾಗಿ ಸಂಶೋಧಿಸಿದ ಕಥಾವಸ್ತುಗಳನ್ನು ಉಳ್ಳದ್ದಾಗಿದ್ದು, ರಂಗಪ್ರಯೋಗಗಳ ಮೂಲಕ ಪ್ರದರ್ಶನ ಕಲೆಗೆ ಅಳವಡಿಸಿಕೊಳ್ಳಲಾಗುತ್ತದೆ.

ರಚನೆ: ಸ್ವಾತಿ ಸಿಂಹ

ನಿರ್ದೇಶನ: ಕ್ಯಾರೆನ್ ಡಿ’ಮೆಲ್ಲೊ.

ದಿನಾಂಕ: ಶುಕ್ರವಾರ, 3ನೇ ತಾರೀಖು, ಮಾರ್ಚ್ 2017

ಸಮಯ: ಸಂಜೆ 7:30ಕ್ಕೆ

ಸ್ಥಳ: ಏ.ಡಿ.ಏ ರಂಗಮಂದಿರ, ಬೆಂಗಳೂರು.

ಟಿಕೆಟ್ ಬೆಲೆ : ರೂ.100/-

 

 

ನಾಟಕದ ಕುರಿತು

‘ಗಿಡಗಿಡುಗ’ ನಾಟಕ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಘಟಿಸುವ ಪುಟಾಣಿಯ ಕತೆ. ಆಕೆಯ ಪುಟ್ಟ ರಮ್ಯ ಕಲ್ಪನಾ ಲೋಕ ನಾಟಕೀಯ ತಿರುವು ಪಡೆಯುತ್ತದೆ, ಆಕೆ ತನ್ನ ಪ್ಯಾಂಟ್, ರಕ್ತದಿಂದ ಕೆಂಪಾಗಿರುವುದನ್ನು ಕಂಡಾಗ. ತನ್ನ ಜಾತಿ-ಧರ್ಮದ ಗಡಿ ದಾಟಿ ಆಕೆ ತನ್ನ ಲೈಂಗಿಕತೆಯನ್ನು ಶೋಧಿಸುತ್ತಿರಲು, ತನ್ನ ಭಾವನಾಲಹರಿ ಮತ್ತು ಮನೆಯವರ ರೀತಿ-ನೀತಿ ಇವುಗಳ ನಡುವಿನ ಬಿರುಕನ್ನು ಅರ್ಥ ಮಾಡಿಕೊಳ್ಳಲು ಮತ್ತು ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೆಣಗುತ್ತಾಳೆ.

ಈ ಎರಡು ಲೋಕದ ನಡುವಿನ ಕಂದರ ಆಕೆಯನ್ನು ತಬ್ಬಿಬ್ಬಾಗಿಸುತ್ತದೆ. ಹೂವರಳಿದಷ್ಟೇ ಹಗೂರವಾಗಿ, ಅಗೋಚರವಾಗಿ ಆಕೆ ಸಂಸಾರದ ಸಂಪ್ರದಾಯಬದ್ಧ ಹೆಣ್ಣಾಗಿ ಮಾರ್ಪಡುತ್ತಿರಲು, ‘ಗಿಡಗಿಡುಗ’ ಹೆಣ್ಣಿನ ದೇಹದ ಮೇಲೆ ಸಾಧಿಸಲಾಗುವ ನಿಗ್ರಹದ ಕುರಿತಾಗಿ ಕಾಲಾತೀತ ಪ್ರಶ್ನೆಯನ್ನು ಎತ್ತಿಕೊಳ್ಳುತ್ತದೆ. ಹೆಣ್ಣಿನ ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಶಕ್ತಿ ಇವುಗಳ ಮೇಲೆ ನಿಯಂತ್ರಣ ಸಾಧಿಸುವ ಅಗತ್ಯವಿದೆಯೇ? ಮಡಿ, ಮೈಲಿಗೆ, ರಕ್ಷಣೆ, ಭದ್ರತೆ ಇವೆಲ್ಲವೂ ನಿಯಂತ್ರಣದ ಇತರೆ ರೂಪವೇ?

ಬ್ರಿಟೀಷ್ ಕೌನ್ಸಿಲ್ ಮತ್ತು ರೇಜ್ ಆಯೋಜಿಸಿದ ರೈಟರ್ಸ್ ಬ್ಲಾಕ್ – ೪ರ ಭಾಗವಾಗಿ ಈ ನಾಟಕ ಆಂಗ್ಲ ಭಾಷೆಯಲ್ಲಿ ರಚಿಸಲ್ಪಟ್ಟಿತು. ಮೂಲ ಆಂಗ್ಲ ಭಾಷೆಯಲ್ಲಿ ಇದನ್ನು ಬರೆದವರು ಸ್ವಾತಿ ಸಿಂಹ.

ರಚನೆ:  ಸ್ವಾತಿ ಸಿಂಹ

ಕನ್ನಡಕ್ಕೆ: ವರಾವರ

ಸ್ವಾತಿ ಸಿಂಹ ಒಬ್ಬ ನಾಟಕಕಾರ್ತಿ ಹಾಗೂ ನಟಿ. ಇವರು ಫ಼್ಲೇಮ್ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಿಂದ ರಂಗಭೂಮಿ ಶಿಕ್ಷಣದಲ್ಲಿ ಪದವಿ ಹಾಗೂ ಶಾಂಘಾಯ್ ಥಿಯೇಟರ್ ಅಕಾಡೆಮಿ ಇಂದ ಇಂಟರ್ ಕಲ್ಚರಲ್ ಕಮ್ಯುನಿಕೇಶನ್ ಸ್ಟಡೀಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ಮಕ್ಕಳ ನಾಟಕಗಳನ್ನೂ ಬರೆದಿದ್ದಾರೆ. ಸದ್ಯಕ್ಕೆ ರಾಯಲ್ ಎಕ್ಸ್ಚೇಂಗ್, ಮ್ಯಾನ್ಚೆಸ್ಟರ್ ರವರ ವತಿಯಿಂದ “ಔರೊಬೊರೋಸ್” ನಾಟಕವನ್ನು ಬರೆಯಲು ಇವರನ್ನು ನಿಯೋಜಿಸಿದ್ದಾರೆ. ಪ್ರಸ್ತುತ, ಜವಾಹಾರ್ಲಾಲ್ ನೆಹರೂ ಯೂನಿವರ್ಸಿಟಿ ಯಲ್ಲಿ ರಾಜಕೀಯ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಮಾಡುತ್ತಿದ್ದಾರೆ.

ನಿರ್ದೇಶನ: ಕ್ಯಾರೆನ್ ಡಿ’ಮೆಲ್ಲೊ

ಕ್ಯಾರೆನ್ ಡಿ’ಮೆಲ್ಲೊ ರವರು ಬೆಂಗಳೂರಿನಲ್ಲಿ ನೆಲೆಸಿರುವ ರಂಗಕರ್ಮಿ. ಕಥಾಸಿಯಾಹ್ ತಂಡದ ಕಲಾತ್ಮಕ ನಿರ್ದೇಶಕರು ಹಾಗೂ ಇಂಡಿಯನ್ ಆನ್ಸಂಬಲ್ ರಂಗತಂಡದ ಸದಸ್ಯೆ. ಖ್ಯಾತ ನಿರ್ದೇಶಕರ  ಅಭಿಷೇಕ್ ಮಜುಂದಾರ್ ರವರ ಬಳಿಯಲ್ಲಿ ರಂಗಕಾರ್ಯಾಗಾರ ಗಳಲ್ಲಿ ತೊಡಗಿಸಿಕೊಂಡು ರಂಗ ಕಲೆ ಕಲಿತು ಕರಗತಗೊಳಿಸಿಕೊಂಡವರು. ಇವರು ಮಕ್ಕಳಿಗೆ ಹಾಗೂ ವಯಸ್ಕರಿಗೆ ಶಾಲಾ ಕಾಲೇಜುಗಳಲ್ಲಿ ರಂಗಶಿಕ್ಷಣ ವನ್ನು ನಿರ್ವಹಿಸುತ್ತಿದ್ದಾರೆ.

Add Comment

Leave a Reply