Quantcast

ಚಹವ ಹೀರಿದ ತುಟಿಯ ಬಿಸಿಮುತ್ತು

‘ಆಹಾ..ಚಹಾ’ ಸರಣಿ

ಮತ್ತೇರಿಸುವ  ಚಹಾ !!

ಸರೋಜಿನಿ ಪಡಸಲಗಿ

ಚಹವ ನೀ ಹೀರಿಲ್ಲ ರುಚಿಯ ಅರಿತಿಲ್ಲ
ಎನಬೇಡ ನೀನು
ಅದರಲಿರುವ ಗಮ್ಮತ್ತು ಹಿಕ್ಮತ್ತು
ನನಗ್ಗೊತ್ತು  ತಿಳಿ ನೀನು

ಚಹವ ಹೀರದಿದ್ದರೇನು  ಅದ ಸವಿಯದಿದ್ದರೇನು
ಅದರ  ಮಹಿಮೆ ನಾ
ಅರಿಯೆ ಅಂದುಕೊಂಡೆಯೇನು
ಹೇಳಲಾ  ಒಂದು ಗುಟ್ಟು ನಿನಗೆ
ನಗಲಾರೆ  ನೀ ಅನ್ಕೊಂಬೆ ನಾನು
ಚಹವ ಹೀರಿದ  ತುಟಿಯ
ಬಿಸಿಮುತ್ತು  ಮತ್ತೇರಿಸದು ಏನು

ನನ್ನ ಪುಟ್ಟ ಮನದಲೊಂದು
ಸಣ್ಣ  ಹುಚ್ಚು  ಆಸೆ
ಸ್ಟೈಲಾಗಿ  ಕಪ್  ಹಿಡಿದು
ಕಾಲ್ ಮೇಲೆ ಕಾಲ್ಹಾಕಿ
ನಾನು ನೀನು ಇದಿರು ಬದಿರಾಗಿ
ಕಣ್ಣಲೊಂದು  ಇಣುಕ್ಹಾಕಿ
ಹಬೆ ಹಾಯ್ವ ಚಹ ಸೊರ್ರೆಂದು
ಹೀರಿದರೆ  ಮನ ಹಾಡದೇ ಹುಚ್ಚಾಗಿ

ಜಗತುಂಬ  ಚಹದ ಹಪಹಪ
ಅರಿಯದ ಹುಚ್ಚು ತಹತಹ
ಕಳಕೊಳ್ಳುವಿಯಲ್ಲೆ ಆ ಸ್ವರ್ಗಸುಖ
ಎನುತಿರಲು ನೀನು
ಹೊಗೆ ಹಾಯುವ  ತಾಮ್ರವರ್ಣದ
ಈ ಧರೆಯ ಅಮೃತ
ನೀರೂರಿಸಿ  ಬಾಯಲಿ ಮನ ಉಸಿರುತಿದೆ
ರುಚಿ ನೋಡಿ ಬಿಡಲೇ ಒಂದು ಬಾರಿ

4 Comments

  1. Sarojini Padasalagi
    March 10, 2017
  2. Sarojini Padasalagi
    March 9, 2017
  3. shrivatsadesai
    March 9, 2017

Add Comment

Leave a Reply