Quantcast

ಹೋಪದಾ ಬ್ಯಾಡದಾ ಕೇಂಡೆ..

ಮೊನ್ನೆ ಹೋಗಿ ಕಂಡಕಂಡ ಬಂದೆ ಆಯ್ತಾ
ಗೀತಾ ಹೆಗ್ಡೆ ಕಲ್ಮನೆ 
ಅಯ್ಯಾ! ಮಾರುತಿ
ಅಂದು ನೀ ಸಮಾಧಾನಿಸಿ
ಇವರ ಸಹವಾಸ
ಸಾಕು ಸಾಕೆಂದು
ಹೆಗಲನೇರಿಸಿ ಸುಯ್ಯ….ಎಂದು
ನನ್ನ ಗಾಳಿಯಲ್ಲಿ ಹೊತ್ತೊಯ್ದಿದ್ದು
ಅಕಾ!
ಆಗಲೆ ವರುಷ
ಕಳೆದೋಯಿತಲ್ಲ ;
ಮತ್ತೆ ಈ ವರುಷ
ಹೋಪದಾ ಬ್ಯಾಡದಾ ಕೇಂಡೆ.
ಕುಕ್ಕುರುಗಾಲಲ್ಲಿ ಕಳಿತವ
ಚಂಗನೆ ನೆಗೆದೆದ್ದ
ತಲೆ ಕೆರೆದು ಮೂತಿ ಉಜ್ಜಿ
ಈ ರಾಮನಿಗ್ಯಾಕೆ
ಈಟೊಂದು ಪೀರುತಿ
ಹಬ್ಬ ಬಂದರೆ ಸಾಕು
ಅಲ್ಲಿಗೆ ಹೋಪ ತಯಾರಿ!!
ಅಲ್ಲಾ ಮಾರಿರೆ
ನಿಮಗೇನಾದರೂ ಗ್ಯಾನ ಇತ್ತಾ ಅಂತ ಕಂಡೆ
ಹೋಪುದು ಎಲ್ಲಿಗೆ?
ಭೂಲೋಕಕ್ಕಾ……
ಎಂತದೂ ಬ್ಯಾಡಾ

ಸುಮ್ಕಿರಿ.

ಮೊನ್ನೆ ಹೋಗಿ ಕಂಡಕಂಡ ಬಂದೆ ಆಯ್ತಾ
ಜನ ಎಲ್ಲಾ ಬೊಬ್ಬಿಡ್ತ್ರು
ಮಳೆ ಇಲ್ಲ ಪಾನಕ ಮಾಡೋದ್ಯಾಂಗೆ?
ಐದು ರೂಪಾಯಿ ಮೈಲಿಗೆ ನೀರಲ್ಲೆ ಕರಡ್ತ್ರು
ಬ್ಯಾಳಿ ರೇಟು ಗಗನಕ್ಕೆ ಹೊಯ್ದಮ್ರು
ಬಾಳಿಹಣ್ಣು ಸೌತೆಕಾಯಿ ಮುಟ್ಟೂಕ್ಯಡಿಯಾ
ಮತ್ತಿನ್ನೆಂತಾ ಮಾಡ್ತೀರು ನೀವೆ ಕಾಣಿ!
ಇವತ್ತಿನ ಪೇಪರ್ ಕಂಡ್ರ್ಯಾ

ಆಲೆ ಮನೆ ಬೆಲ್ಲ
ಡಬ್ಬಲ್ ರೇಟಾಯ್ತು
ಸುಮ್ನೆ ಜನ ಕೊರಗಿ ಕೊರಗಿ
ಸವಕಲಾಯ್ತಾ ಕೂಕಂಡೀರು.
ಆ ನಾಡಿಗಿಂತ
ಈ ಕಾಡೇ ವಾಸಿ
ನಾವ್ ನಿಮ್ಮಬ್ಬ ಪಸಂದಾಗಿ
ಇಲ್ಲೆ ಮಾಡ್ತೀರು
ಬಿರಿನೆ ಹೋಗಿ ಸೀತವ್ವನ
ಕರ್ಕಂಡ ಬನ್ನಿ..!!

2 Comments

  1. Sangeeta Kalmane
    March 13, 2017
  2. s.p.vijayalakshmi
    March 13, 2017

Add Comment

Leave a Reply