Quantcast

ಕನ್ನಡ ರಂಗಭೂಮಿಯ ‘ಇ.ಈ’ ಇನ್ನಿಲ್ಲ

ಕೆ ಎಸ್ ಡಿ ಎಲ್ ಚಂದ್ರು 

ಸಾವಿರ ಶಾಯರಿಗಳ ಸರದಾರ, ನಾಟಕಕಾರ ಇ.ಈ ಎಂದೇ ಖ್ಯಾತರಾದ ಇಟಗಿ ಈರಣ್ಣ ಇನ್ನಿಲ್ಲ.

ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ,ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿ , ಶಾಯರಿಗಳನ್ನು ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈರಣ್ಣನವರದು.
ರೂಪಾಂತರದ ಹಿತೈಷಿಗಳಾದ ಈರಣ್ಣನವರ ಆತ್ಮೀಯತೆ, ಸಹೃದಯತೆ ಈಗ ಬರೀ ನೆನಪು.

ಅವರ ಯಹೂದೀ ಹುಡುಗಿ ‘ರೂಪಾಂತರ’ದ ಯಶಸ್ವಿ ನಾಟಕಗಳಲ್ಲಿ ಒಂದು. ಈ ನಾಟಕವನ್ನು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ವಿದ್ಯಾಲಯದ ವಿದ್ಯಾರ್ಥಿನಿಯರಿಗಾಗಿ ಮತ್ತು ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಸದಸ್ಯರಿಗಾಗಿ ನಿರ್ದೇಶನ ಮಾಡುವ ಪುಣ್ಯ ನನ್ನದಾಗಿತ್ತು.

ಕಳೆದರೆಡು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಈರಣ್ಣನವರ ಸಮಕ್ಷಮದಲ್ಲಿ ಯಹೂದಿ ಹುಡುಗಿ ನಾಟಕವನ್ನು ಪ್ರರ್ದಶಿಸಿದ್ದು ನನ್ನ ಅವರ ಕೊನೆಯ ಭೇಟಿ.

ಅವರ ‘ಕನ್ನಡ ಶಾಯರಿಗಳು’ ಪುಸ್ತಕವನ್ನು ರೂಪಾಂತರ ಪ್ರಕಟಿಸಲು ಅನುಮತಿ ನೀಡಿದ್ದ ಇಟಗಿ ಈರಣ್ಣನವರ ಮತ್ತು ರೂಪಾಂತರದ ಗೆಳೆಯರ ಬಾಂಧವ್ಯ ಚಿರಂತನವಾದದ್ದು. ಇಟಗಿ ಈರಣ್ಣನವರ ಅಗಲಿಕೆ ಕನ್ನಡ ಸಾಂಸ್ಕ್ರತಿಕ ಲೋಕಕ್ಕೆ ಮತ್ತು ರೂಪಾಂತರಕ್ಕೆ ಅಪಾರ ನಷ್ಟ

ಅವರ ಅಂತ್ಯಕ್ರಿಯೆಯನ್ನು ಇಂದು ಮಂಡ್ಲಿಯ ವೀರಶೈವ ರುದ್ರಭೂಮಿಯಲ್ಲಿ ಅಪರಾಹ್ನ ೦೩.೦೦ಕ್ಕೆ ನೆರವೇರಿಸಲಾಗುವುದು.

ಮನೆ ನ೦ ೩೧# ಶಾರದಾ ಸದನ
ಶಿವಪ್ಪನಾಯಕ ಬಡಾವಣೆ
ಬಿ ಬ್ಲಾಕ್ , ೧ ನೇ ಮುಖ್ಯ ರಸ್ತೆ ಆಲ್ಕೊಳ ರಸ್ತೆ
ಎ ಪಿ ಎಂ ಸಿ ಯಾರ್ಡ್ ಎದರುಗಡೆ ಶಿವಮೊಗ್ಗ

 

3 Comments

  1. R.shivs Kumar as want kurki
    March 14, 2017
  2. Kr siddagangamma
    March 13, 2017

Add Comment

Leave a Reply