Quantcast

ಮಾಯಾವತಿಯವರು ಈಗ ಹೊಸದಾಗಿ ಈ EVM ವಿವಾದ ಏಕೆ ಹುಟ್ಟುಹಾಕುತ್ತಿದ್ದಾರೆ?

ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (EVM) ಒಂದು ಸಂವಾದ

ಶ್ರೀಧರ ಪ್ರಭು

– ಮಾಯಾವತಿಯವರು ಈಗ ಹೊಸದಾಗಿ ಈ EVM ವಿವಾದ ಏಕೆ ಹುಟ್ಟುಹಾಕುತ್ತಿದ್ದಾರೆ? 2007 ರಲ್ಲಿ EVM ಮುಖಾಂತರವೇ ಆಯ್ಕೆಯಾಗಿ ಅವರು ಮುಖ್ಯಮಂತ್ರಿಯಾಗಿದ್ದರಲ್ಲವೇ?

EVM ವಿವಾದವನ್ನು ಮಾಯಾವತಿಯವರು ಹುಟ್ಟುಹಾಕಿದ್ದಲ್ಲ. ಭಾರತೀಯ ಜನತಾ ಪಾರ್ಟಿಯಲ್ಲಿರುವ ಡಾ. ಸುಬ್ರಮಣಿಯನ್ ಸ್ವಾಮಿ ಹುಟ್ಟುಹಾಕಿದ್ದು. ೨೦೦೯ ರ ಚುನಾವಣೆಯಲ್ಲಿ ೯೦ ಮತಕ್ಷೇತ್ರಗಳಲ್ಲಿ ಅಕ್ರಮವೆಸಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಎಂದು ಆರೋಪಿಸಿ ಡಾ ಸ್ವಾಮಿ ದೆಹಲಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದರು. ದೆಹಲಿ ಹೈಕೋರ್ಟ್ ಸ್ವಾಮಿಯವರ ವಾದ ಒಪ್ಪಲಿಲ್ಲ. ತದನಂತರ ೨೦೧೨ ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅಪೀಲು ದಾಖಲಿಸಿದರು. ಈ ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಒಂದು ರೀತಿಯಲ್ಲಿ ತಪ್ಪೊಪ್ಪಿಕೊಂಡುಬಿಟ್ಟಿತು. 19.01.2013 ರಲ್ಲಿ ಒಂದು ಸಭೆ ನಡೆಸಿ ಪೇಪರ್ ಟ್ರೇಲ್ ಇರುವ ಹೊಸ ಯಂತ್ರಗಳನ್ನು ಜಾರಿಗೆ ತರುವುದಾಗಿ ಘೋಷಿಸಿತು.

ಅದರೊಂದಿಗೆ ಸುಪ್ರೀಂ ಕೋರ್ಟಿನಲ್ಲೇ, ಹೇಗೆ EVM ಗಳನ್ನು ಸ್ಯಾಟೆಲೈಟ್ ತಂತ್ರಜ್ಞಾನ ಬಳಸಿ ದುರುಪಯೋಗ ಮಾಡಬಹುದು ಎಂಬುದನ್ನು ಸಾಬೀತುಪಡಿಸಲಾಯಿತು.

ಕೊನೆಗೆ ಅಂತಿಮ ತೀರ್ಪನ್ನುನೀಡಿದ ಸುಪ್ರೀಂ ಕೋರ್ಟ್ EVM ಬಳಕೆ ಸಂವಿಧಾನದ ಆಶಯಗಳಿಗೆ ವಿರೋಧ ಎಂದು ತೀರ್ಮಾನಿಸಿ, EMV ಗಳನ್ನು ಈಗಿನ ಸ್ವರೂಪದಲ್ಲಿ ಬಳಸದೇ, ಪೇಪರ್ ಟ್ರೇಲ್ ಇರುವ ಯಂತ್ರಗಳ ಬಳಕೆಗೆ ನಿರ್ದೇಶನ ಕೊಟ್ಟಿತು. ಸುಪ್ರೀಂ ಕೋರ್ಟಿನ ಮುಂದೆ ಇದನ್ನು ಜಾರಿಗೊಳಿಸುವುದಾಗಿ ಘೋಷಿಸಿದ ಚುನಾವಣಾ ಆಯೋಗ ಇದನ್ನು ಇನ್ನೂ ಸಂಪೂರ್ಣ ಜಾರಿಗೆ ತಂದಿಲ್ಲ.

ಮಾಯಾವತಿಯವರು ಮುಖ್ಯಮಂತ್ರಿಯಾದಾಗ ಯಾರೂ ಆರೋಪ ಮಾಡಲಿಲ್ಲ. ಏಕೆಂದರೆ ಸುಪ್ರೀಂ ಕೋರ್ಟಿನ ಆದೇಶ ಆಗ ಬಂದಿರಲಿಲ್ಲ. ಯಾರೂ ಆರೋಪ ಮಾಡಬೇಡಿ ಎಂದು ಮಾಯಾವತಿಯವರು ಯಾರನ್ನೂ ಕೇಳಿಕೊಂಡಿರಲಿಲ್ಲ. ಹಿಂದೆ ಅಕ್ರಮ ನಡೆದಿಲ್ಲ ಅಥವಾ ಅದಕ್ಕೆ ಸಾಕ್ಷಿಯಿಲ್ಲವೆಂದಾದರೆ ಇಂದು ಅಥವಾ ಮುಂದೆ ನಡೆಯುಬಹುದಾದ ಅಕ್ರಮಗಳನ್ನು, ಸಾಧ್ಯತೆಗಳನ್ನೂ ಯಾರೂ ಪ್ರಶ್ನಿಸಬಾರದೇ?

ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದ ಸಮಾಚಾರ ಹಾಗಿರಲಿ, ಸುಪ್ರೀಂ ಕೋರ್ಟಿನ ನಿರ್ದೇಶನವನ್ನು ಇನ್ನೂ ಪಾಲಿಸದಿರುವ ಚುನಾವಣಾ ಆಯೋಗಕ್ಕೆ ಏನು ಹೇಳೋಣ? 2007 ರಲ್ಲಿ ಏನಾಯಿತು, ಅದಕ್ಕೆ ಹಿಂದೆ ಏನಾಯಿತು ಎಂಬುದು ಮುಖ್ಯವಲ್ಲ. ಚುನಾವಣಾ ಆಯೋಗ ತಾನೇ ಒಪ್ಪಿಕೊಂಡಂತೆ, ನಾಲ್ಕು ವರ್ಷಗಳಾದರೂ ಸುಪ್ರೀಂ ಆದೇಶದಂತೆ ಏಕೆ ನಡೆದುಕೊಳ್ಳುತ್ತಿಲ್ಲ?

*********

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆ?

Supreme Court of India in the case of Dr. Subramanian Swamy vs. Election Commission of India (Civil Appeal No. 9093 of 2013 (Arising out of SLP (Civil) No. 13735 of 2012) and Writ Petition (C) No. 406 of 2012
Decided On: 08.10.2013) held as follows:
________________________________________
28. We have already highlighted that Voter-Verified Paper Audit Trail (VVPAT) is a system of printing paper trail when the voter casts his vote, in addition to the electronic record of the ballot, for the purpose of verification of his choice of candidate and also for manual counting of votes in case of dispute.

29. From the materials placed by both the sides, we are satisfied that the “paper trail” is an indispensable requirement of free and fair elections. The confidence of the voters in the EVMs can be achieved only with the introduction of the “paper trail”. EVMs with VVPAT system ensure the accuracy of the voting system. With an intent to have fullest transparency in the system and to restore the confidence of the voters, it is necessary to set up EVMs with VVPAT system because vote is nothing but an act of expression which has immense importance in democratic system.

30. In the light of the above discussion and taking notice of the pragmatic and reasonable approach of the ECI and considering the fact that in general elections all over India, the ECI has to handle one million (ten lakhs) polling booths, we permit the ECI to introduce the same in gradual stages or geographical-wise in the ensuing general elections. The area, State or actual booth(s) are to be decided by the ECI and the ECI is free to implement the same in a phased manner. We appreciate the efforts and good gesture made by the ECI in introducing the same.

31. For implementation of such a system (VVPAT) in a phased manner, the Government of India is directed to provide required financial assistance for procurement of units of VVPAT.

************

– ಒಂದು ಪಕ್ಷದ ಚಿಹ್ನೆಗೆ ಮತಚಲಾಯಿಸಿ ಇನ್ನೊಂದು ಪಕ್ಷದ ಚಿಹ್ನೆಯ ಮುಂದೆ ದೀಪ ಬೆಳಗಿ ಇನ್ನೊಂದಕ್ಕೆ ಮತ ಬಿದ್ದರೆ ಯಾರೂ ಗಮನಿಸುವುದಿಲ್ಲವೇ? ಎಲ್ಲಾ ಜನರೂ ಹುಚ್ಚರೇ?

ಖಂಡಿತವಾಗಲೂ ಗಮನಿಸುತ್ತಾರೆ. ಆದರೆ, EVM ಅಕ್ರಮಗಳ ಸಾಧ್ಯತೆಗಳು ಅಷ್ಟು ಸರಳವಾಗಿ ನಡೆಯುವುದಿಲ್ಲ. ಮತ ತಮ್ಮ ಚಿಹ್ನೆಗೇ ಹೋಗಿರುತ್ತದೆ. ಆದರೆ ಒಟ್ಟಾರೆ ಮತ ಎಣಿಕೆ, ಒಟ್ಟು ಮೊತ್ತವನ್ನು ಅಕ್ರಮವಾಗಿ ತಪ್ಪಾಗಿ ನಮೂದಿಸುವಂತೆ EMV ನಲ್ಲಿ ಅಕ್ರಮಗಳನ್ನು ಮಾಡಬಹುದು ಎಂಬುದು ಸುಪ್ರೀ ಕೋರ್ಟಿನಲ್ಲೇ ಸಿದ್ಧವಾಯಿತು. ಆಯೋಗವೂ ಇದನ್ನು ತಳ್ಳಿಹಾಕಲಿಲ್ಲ. ಇಲ್ಲಿ ಮತಗಳನ್ನು ಬಿಡಿ ಬಿಡಿಯಾಗಿ ಎಣಿಸಲು ಸಾಧ್ಯವಿಲ್ಲ. ಪೇಪರ್ ಬಾಲ್ಲೆಟ್ ನಲ್ಲಿ ಎಣಿಸುವಂತೆ EVM ನಲ್ಲಿ ಸಾಧ್ಯವಿಲ್ಲ. ಒಟ್ಟು ಮತಗಳ ಮೊತ್ತವನ್ನಷ್ಟೆ ಎಣಿಸಬಹುದು. EVM ಬಳಕೆಯನ್ನು ಕೊನೆಗಾಣಿಸಲು ಆಯೋಗವನ್ನು ಕೋರ್ಟ್ ನಿರ್ದೇಶಿಸಿದ್ದು ಇದೇ ಕಾರಣಕ್ಕಾಗಿ.

*********
– ಉತ್ತರ ಪ್ರದೇಶದಲ್ಲಿ ಭಾಜಪ ಕೇವಲ EVM ನಿಂದ ಗೆದ್ದ್ದದ್ದೇ?

ಇರಬಹುದು, ಇರಲಿಕ್ಕೂ ಇಲ್ಲ. ಸುಪ್ರೀಂ ಆದೇಶ ಪಾಲನೆಯಾಗಿದ್ದರೆ ಯಾರೂ ಈ ಪ್ರಶ್ನೆ ಎತ್ತಲು ಸಾಧ್ಯವಿರಲಿಲ್ಲ. EVM ಬಳಕೆ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಅದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸುಪ್ರೀಂ ನಿರ್ದೇಶಿಸಿದ್ದರೂ, ಆಯೋಗ ಇನ್ನೂ EVM ಏಕೆ ಬಳಸುತ್ತಿದೆ? ಏಕೆ ನಾಲ್ಕು ವರ್ಷವಾದರೂ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಿಲ್ಲ ಎಂಬುದು ನಿಜವಾದ ಪ್ರಶ್ನೆ. ನಾಲ್ಕು ವರ್ಷಗಳ ಹಿಂದೆ, ಸುಪ್ರೀಂ ಕೋರ್ಟ್, ಅಕ್ರಮಗಳು ನಡೆಯುವ ಎಲ್ಲಾ ಸಾಧ್ಯತೆಗಳಿರುತ್ತವೆ ಎಂದು ಹೇಳಿದ ಸುಪ್ರೀಂ ಕೋರ್ಟಿನ ಆದೇಶವನ್ನು ಜಾರಿ ಮಾಡದ ಆಯೋಗವನ್ನು ನಾವು ಪ್ರಶ್ನಿಸಬೇಕೇ ಹೊರತು, ತೀರ್ಪನ್ನು ಜಾರಿ ಮಾಡಿ ಎಂದವರನ್ನಲ್ಲ.

**************

EVM ಬಗ್ಗೆ ಯಾರಿಗೂ ತಕರಾರಿಲ್ಲ. ಇವರೊಬ್ಬರಿಗೇ ಏನು ಸಮಸ್ಯೆ?

EVM ವಿಚಾರದಲ್ಲಿ ಮೊದಲು ತಕರಾರಿದ್ದದ್ದು ಸುಬ್ರಮಣಿಯನ್ ಸ್ವಾಮಿಯವರೇ. ಈಗ ಮಾಯಾವತಿಯವರು ಈ ವಿಚಾರ ಪ್ರಸ್ತಾಪಿಸಿದ ನಂತರದಲ್ಲಿ ಕಾಂಗ್ರೆಸ್, SP, RJD ಸೇರಿದಂತೆ ಇನ್ನೂ ಅನೇಕರು ಈ ಪ್ರಶ್ನೆಯನ್ನೆತ್ತಿದ್ದಾರೆ. ಇವರೆಲ್ಲರಿಗಿಂತ ಮೊದಲೇ ಸುಪ್ರೀಂ ಕೋರ್ಟೇ ತಕರಾರೆತ್ತಿದೆ. ರಾಜಕಾರಣಿಗಳ ತಕರಾರು ಬೇಡ, ಸರ್ಕಾರ ಮತ್ತು ಆಯೋಗ ಮೊದಲು ಸುಪ್ರೀಂ ಆದೇಶ ಪಾಲಿಸಬೇಕಿತ್ತು.

2 Comments

  1. C. N. Ramachandran
    March 16, 2017
  2. Prasad
    March 16, 2017

Add Comment

Leave a Reply