Quantcast

ಆತನ ಹೆಸರು ನಿಕ್ ಉಟ್..

ಶ್ರೀಪಾದ್ ಭಟ್ 

ಆತನ ಹೆಸರು ನಿಕ್ ಉಟ್. ಖ್ಯಾತ ಫೋಟೋಗ್ರಾಫರ್.

ತನ್ನ 50 ವರ್ಷಗಳ ಫೋಟೋಗ್ರಾಫಿ ವೃತ್ತಿಗೆ ಮೊನ್ನೆ ನಿವೃತ್ತಿ ಹೇಳಿದ್ದಾನೆ.

ಆದ್ರೆ ಈತನಿಗೆ 21 ವಯಸ್ಸಾಗಿದ್ದಾಗ 1972ರಲ್ಲಿ ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ ೯ ವರ್ಷದ ಕಿಮ್ ಫುಕ್ ಎನ್ನುವ ಬಾಲಕಿಯು ಗ್ರಾಮದ ರಸ್ತೆಯಲ್ಲಿ ತನ್ನ ಸುಟ್ಟ ದೇಹದೊಂದಿಗೆ ಜೀವಕ್ಕಾಗಿ ಓಡುತ್ತಿದ್ದಾಗ ನಿಕ್ ಆ ಬಾಲಕಿಯ ಫೋಟೋ ಕ್ಲಿಕ್ ಮಾಡಿದ.

ನಂತರ ಕೂಡಲೆ ತನ್ನ ಕ್ಯಾಮರಾ ಕೆಳಗಿಟ್ಟು ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಮತ್ತು ಆಕೆಯ ಪ್ರಾಣ ಉಳಿಸಿದ. ಈ ಫೋಟೋ ಮುಂದೆ “ನಪಲಮ್ ಗರ್ಲ್” ಎಂದು ಖ್ಯಾತಿ ಆಯ್ತು.

ಆದ್ರೆ ನಡುಗುತ್ತಿದ್ದ ನಿಕ್ ಹೇಳುತ್ತಾನೆ ” ನಾನು ಫೋಟೋ ತೆಗೆದ ನಂತರ ಆ ಬಾಲಕಿ ಸತ್ತು ಹೋಗಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ” .

ಇಂದು ಆತ ನಿವೃತ್ತಿಯಾಗಿದ್ದಾನೆ. ಬೆನ್ನ ಹಿಂದೆ ಖ್ಯಾತಿ ಇದೆ. ಮತ್ತು ಆ ಬಾಲಕಿ ಕಿಮ್ ಗೆ ಈಗ 53 ವರ್ಷ, ತನ್ನ ಇಬ್ಬರು ಮಕ್ಕಳೊಂದಿಗೆ ಕೆನಡದಲ್ಲಿ ನೆಲಸಿದ್ದಾಳೆ. ಅಂದಹಾಗೆ ನಿಕ್ ಮತ್ತು ಕಿಮ್ ಇಂದು ಅತ್ಯಂತ ಜೀವದ ಗೆಳೆಯರು.

ಇದನ್ನು ಪತ್ರಿಕೆಯಲ್ಲಿ ಓದಿದಾಗ ಯಾವುದೇ ಸಂಬಂಧವಿಲ್ಲದ ಮನುಷ್ಯರ ಸಂಬಂಧಗಳು ಆತ್ಮೀಯವಾಗಿ, ಮಾನವೀಯವಾಗಿ ಬೆಸೆದುಕೊಳ್ಳುವ ಈ ಬಗೆಯನ್ನು ನೋಡಿ ಆಶ್ಚರ್ಯ, ಖುಷಿ ಆಯ್ತು.

ಬೇಂದ್ರೆಯವರ “ಜಗದಾಗ ಯಾವಾವ ನೆರಳು ಬೆಳಕಿನಾಗ ಹಗಲಿರುಳು ಇದ್ದಾವ, ಎದ್ದೇನ, ಬಿದ್ದೇನ ಕತ್ತಲು ಬಿಸಿಲೇನಾ, ನಕ್ಕಾವಾ ಗೆದ್ದಾವಾ” ಸಾಲುಗಳು ನೆನಪಾಗುತ್ತದೆ.

Add Comment

Leave a Reply