Quantcast

ನನ್ನವ್ವಳಿಗೆ ೯೫.

ನನ್ನವ್ವಳಿಗೆ ೯೫.

ನಾನು ಚೆಸಮಾ ಇಲ್ಲದೇ ಊಟಮಾಡಲು ಆಗುವದಿಲ್ಲ, ಮೂರು ಹಲ್ಲು ಹಾಕಿಸಿಕೊಂಡಿರುವೆ, ಕಿವಿ ಮಂದವಾದಂತೆ ಭಾಸವಾಗುತ್ತಿದೆ.

ಆದರೆ ನನ್ನವ್ವ ಚೆಸಮಾ ಇಲ್ಲದೇ ಕಾಳು ಹಸನಮಾಡುತ್ತಿದ್ದಾಳೆ, ಕಟಕರೊಟ್ಟಿಯನ್ನೇ ತಿನ್ನುತ್ತಾಳೆ, ಕಿವಿಯಂತೂ ಸೂಜಿ ಬಿದ್ದರೂ ಕೇಳಿಸುವಷ್ಟು ಸ್ಪಷ್ಟ. ನನ್ನವ್ವಳು ನನಗಿಂತ ಹರೆಯವಳು ಅನಿಸುತ್ತದೆ. ಅವಳಿಗೆ ಎಲ್ಲರು ಸೇರಿ ಶುಭಕೋರಿ ನೂರಕಾಲ ಖುಷಿಯಿಂದ ಇರಲು ಹರಿಸಲು ಸಮಾರಂಭದ ಆಮಂತ್ರಣ ನಿಮಗೆ.

ಇದೇ ಸಂದರ್ಭದಲ್ಲಿ ನಮ್ಮೂರಿನ ದ್ಯಾಮವ್ವಳಿಗೆ, ೫೦೦೦ ಮಕ್ಕಳಿಗೆ ಶ್ರೇಷ್ಟ ಶಿಕ್ಷಣ ನೀಡುತ್ತಿರುವ ಡಿಸೋಜಾ ಇವರಿಗೆ ‘ಶ್ರಮಿಕ ಮಹಿಳೆ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇಕಾಲಕ್ಕೆ ಇಟ್ಟುಕೊಂಡಿದೆ. ದಯವಿಟ್ಟು ಬನ್ನಿ. ನಮ್ಮ ಸಂತೋಷ ಇಮ್ಮಡಿಸಿ.

-ಶಂಕರ ಹಲಗತ್ತಿ 

Add Comment

Leave a Reply