Quantcast

‘ದಕ್ಷಿಣಾಯನ’ದ ದನಿಗಳು

ಮುಖವಾಡವನ್ನೇ ಮುಖ ಎಂದು ದೇಶ ನಂಬಿಕೊಂಡಿದೆ. ದೊಡ್ಡ ಮುಖವಾಡದ ಹಿಂದೆ ಅಡಗಿರುವ ಕುಬ್ಜ ಜನರನ್ನು ನೋಡುತ್ತಿಲ್ಲ.

ಫ್ಯಾಸಿಸಂ ವಿರೋಧಿ ಹೋರಾಟಗಾರನ ಮೊದಲ ಅರ್ಹತೆ ನಿರ್ಭಯಿಯಾಗುವುದು.

#ಗಣೇಶ್_ಎನ್_ದೇವಿ

ದಕ್ಷಿಣಾಯನ ಕಣ್ಣು ಮಾತ್ರವಲ್ಲದೆ ಕನ್ನಡಿಯೂ ಆಗಬೇಕಿದೆ…

ನಮ್ಮ ಸಮಾಜದ ಹಲವಾರು ಸಮಸ್ಯೆಗಳಿಗೆ ನಾವೂ ಕಾರಣ ಎನ್ನುವುದನ್ನು ನಾವು ಗ್ರಹಿದಬೇಕಿದೆ….

ಭಾಷಣ ಕವಿತೆಯಾಗುವುದು
ಕವಿತೆ ಭಾಷಣವಾಗುವುದು
ಎರಡೂ ಅಪರಾಧಗಳೇ.
ಲೋಕದ ದನಿಯಲ್ಲಿ ಬರೆಯಬೇಕು.
ನಮ್ಮ ನೈತಿಕ ಪ್ರಜ್ಞೆಯೂ ಜಾಗೃತವಾಗಬೇಕು

#ಹೆಚ್_ಎಸ್_ರಾಘವೇಂದ್ರರಾವ್

ಫ್ಯಾಸಿಸಮ್ ಅನ್ನು ವಿಶ್ವ –ರಾಷ್ಟ್ರಮಟ್ಟದಲ್ಲಿ ಕೌಂಟರ್ ಆ್ಯಕ್ಟ್ ಮಾಡೋದಕ್ಕಾಗಲ್ಲ. ಅದನ್ನು ಸ್ಥಳೀಯ ಮಟ್ಟದಲ್ಲಿ ಮಾಡಬೇಕಾಗುತ್ತದೆ. ಈ ಹೋರಾಟಕ್ಕಾಗಿ ಪರ್ಯಾಯ ಶಕ್ತಿಯನ್ನು ರೂಪಿಸಬೇಕಾಗುತ್ತದೆ. ಮತ್ತು ಈ ಪರ್ಯಾಯ ಶಕ್ತಿ ಯಾವುದೇ ಧರ್ಮ – ಜಾತಿಗಳ ವಿರುದ್ಧ ಅಲ್ಲ, ಅಸಮಾನತೆ ಅನ್ಯಾಯದ ವಿರುದ್ಧ ಹೋರಾಡಬೇಕಾಗುತ್ತದೆ. ಅದಕ್ಕಾಗಿ ನಮಗಿಂದು ಕಲ್ಚರಲ್ ಆ್ಯಕ್ಟಿವಿಸಮ್ ಅಲ್ಲ, ಕಲ್ಚರಲ್ ಪೊಲಿಟಿಕ್ಸ್ ಅಗತ್ಯವಿದೆ.
~ ಚೇತನ್, ನಟ, ಚಿಂತಕ

ನುಡಿಗಟ್ಟುಗಳ ಜೊತೆಗೆ
ನಡೆಗಟ್ಟಿತನ ಬೇಕಾಗಿದೆ.

#ವಿಕಾಸ್_ಆರ್_ಮೌರ್ಯ

ವಿಲೀನಗೊಳ್ಳುವುದಲ್ಲ
ಒಗ್ಗೂಡಬೇಕು,
ಒಕ್ಕೂಟವಾಗಬೇಕು.

#ದಿನೇಶ_ಅಮಿನ್_ಮಟ್ಟು

ಪ್ಯಾಸಿಸಂ ಶಕ್ತಿ ಮತ ಪೆಟ್ಟಿಗೆಯಿಂದ ಬಂದಿಲ್ಲ ಬದಲಾಗಿ ನಿರಂತರ ಸಾಂಸ್ಕೃತಿಕ ರಾಜಕಾರಣದಿಂದ ಬಂದಿದೆ…

ನಟರಾಜ್ ಬೂದಾಳ್.

ಇಂದಿನ ಎಲ್ಲಾ ಚರ್ಚೆ ಮತ್ತು ಸಂವಾದ ಗಮನಿಸಿದ ನನಗೆ ದಕ್ಷಿಣಾಯನ ಒಂದು ದೊಡ್ಡ ವಿದ್ಯಮಾನವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಬಂದಿದೆ….

ದೇವನೂರು ಮಹಾದೇವ…

#ದಕ್ಷಿಣಾಯನಕರ್ನಾಟಕ ಶಿವಮೊಗ್ಗ ಸಮಾವೇಶ ಸಂಕಲ್ಪ
•••
ದಕ್ಷಿಣಾಯನ ಕರ್ನಾಟಕದಲ್ಲಿ ಇಲ್ಲಿ ಸಮಾವೇಶಗೊಂಡ ಸಾಹಿತಿಗಳು, ಕಲಾವಿದರು, ಚಿಂತಕರು, ಪತ್ರಕರ್ತರು ಹಾಗೂ ಹೋರಾಟಗಾರರು ಸಂವಿಧಾನಬದ್ಧವಾಗಿ ಈ ನೆಲವಾಸಿಗಳಿಗೆ ಕೊಡಲ್ಪಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲೆ – ಸಾಹಿತ್ಯಗಳ ಸೃಜನಶೀಲ ಮಧ್ಯ ಪ್ರವೇಶದ ಮೂಲಕ ಎತ್ತಿ ಹಿಡಿಯಲು ಬದ್ಧರಾಗಿದ್ದೇವೆ.
ಈ ನೆಲದ ಬಹುತ್ವದ ಹಾಗೂ ನಿರ್ಭೀತ ಜನ ಪರಂಪರೆಗಳನ್ನು ಒಳಗೊಂಡು ಮುಂದುವರೆಸುತ್ತೇವೆಂದು ಈ ಮೂಲಕ ಘೋಷಿಸುತ್ತೇವೆ.

..

Add Comment

Leave a Reply